• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಈ ಬಾರಿ ದೇಶದಲ್ಲಿ ಸಾಮಾನ್ಯ ಮಾನ್ಸೂನ್ ಮುನ್ಸೂಚನೆ

|

ಬೆಂಗಳೂರು, ಮಾರ್ಚ್ 26: ಈ ಬಾರಿ ದೇಶದಲ್ಲಿ ಸಾಮಾನ್ಯ ಮಾನ್ಸೂನ್ ಆಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ಇತ್ತೀಚೆಗೆ ಭಾರತೀಯ ಹವಾಮಾನ ಇಲಾಖೆಯು ಎಲ್ ನಿನೋ ಹಾಗೂ ಲಾ ನಿನಾ ಮೇಲೆ ಸಮೀಕ್ಷೆ ನಡೆಸಿದೆ. ಅದರ ವರದಿ ಪ್ರಕಾರ ಈ ಬಾರಿ ಆಗಸ್ಟ್ ವರೆಗೆ ಸಾಮಾನ್ಯ ಮಾನ್ಸೂನ್ ನಿರೀಕ್ಷಿಸಬಹುದಾಗಿದೆ. ಎಲ್ ನಿನೋ ಎನ್ನುವುದು ಡಿಸೆಂಬರ್ ಅಂತ್ಯದ ಸುಮಾರಿಗೆ ಪೆಸಿಫಿಕ್ ಸಾಗರದ ಪೆರು ಮತ್ತು ಈಕ್ವೆಡಾರ್ ಗಳ ಬಳಿ ಪ್ರಾರಂಭವಾಗುವ ಒಂದು ಹವಾಮಾನ ವೈಪರೀತ್ಯದ ವಿದ್ಯಮಾನವಾಗಿದೆ.

ಹವಾಮಾನ ವರದಿ: ಬೆಂಗಳೂರಿನಲ್ಲಿ ಮಾನ್ಸೂನ್ ಪೂರ್ವ ಮಳೆ ಮುಂದುವರಿಕೆ

ಸದ್ಯಕ್ಕೆ ಮುಂದಿನ ಮಾನ್ಸೂನ್ ಕುರಿತು ಸಂಪೂರ್ಣ ಮಾಹಿತಿಯನ್ನು ಈಗಲೇ ನೀಡಲು ಸಾಧ್ಯವಿಲ್ಲ. ಏಪ್ರಿಲ್ ಮಧ್ಯದಲ್ಲಿ ಇದರ ಬಗ್ಗೆ ಮಾಹಿತಿ ನೀಡಬಹುದು ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಕೆ.ಜೆ. ರಮೇಶ್ ತಿಳಿಸಿದ್ದಾರೆ.

Early indications point to normal monsoon this year

ಮಾರ್ಚ್ ನಿಂದ ಮೇ ತಿಂಗಳಲ್ಲಿ ಕಾಣಿಸಿಕೊಳ್ಳುವ ತಾಪಮಾನವನ್ನು ಪರೀಕ್ಷಿಸಿ ಭಾರತೀಯ ಹವಾಮಾನ ಇಲಾಖೆ ಮುಂದಿನ ಮಾನ್ಸೂನ್ ಕುರಿತು ವರದಿ ನೀಡಬಲ್ಲದು. ಮಾರ್ಚ್ ನಿಂದ ಮೇ ತಿಂಗಳಲ್ಲಿ ಲಾ ನೀನಾ ಲಕ್ಷಣಗಳು ಕಂಡು ಬಂದರೆ ಸಮಾನ್ಯ ಮಳೆಯನ್ನು ನಿರೀಕ್ಷಿಸಬಹುದು ಯಾಕೆಂದರೆ ಎಲ್ ನಿನೋ ಹಾಗೂ ಲಾ ನಿನಾ ಪರಸ್ಪರ ವಿರೋಧ ವಿರುದ್ಧವಾಗಿರುತ್ತದೆ.

ಎಲ್ ನಿನೋ ಪದಕ್ಕೆ ಇಂದು ವಿಸ್ತೃತವಾದ ಅರ್ಥವಿದೆ. ಅದು ಕೇವಲ ಪೆರು-ಈಕ್ವೆಡಾರ್ ಸಾಗರದಾಚೆಯ ಮೇಲ್ಮೈ ತಾಪದ ಹೆಚ್ಚಳವನ್ನು ಸೂಚಿಸುವುದಿಲ್ಲ. ಇಡೀ ಪೆಸಿಫಿಕ್ ಸಾಗರದ ಮೇಲ್ಮೈ ತಾಪದ ಹೆಚ್ಚಳವನ್ನು ಅದು ಪರಿಗಣಿಸುತ್ತದೆ.

ಎಲ್ ನಿನೋ ತೀಕ್ಷ್ಣತೆಗಿಂತ ಅದು ಪೆಸಿಫಿಕ್ ಸಾಗರದ ಯಾವ ಭಾಗದಲ್ಲಿದೆ ಎಂಬುದು ಮುಖ್ಯವಾಗುತ್ತದೆ ಎಂದು ಅಮೆರಿಕದ ನ್ಯಾಷನಲ್ ಓಷನಿಕ್ ಅಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ ಜಾಲತಾಣದಲ್ಲಿರುವ ಸಂಶೋಧನಾ ಲೇಖನವೊಂದು ತಿಳಿಸುತ್ತದೆ.

ಎಲ್ ನಿನೋ ವಿದ್ಯಮಾನ ಮಧ್ಯ ಪೆಸಿಫಿಕ್ ಸಾಗರದಲ್ಲಿ ಕಂಡು ಬಂದರೆ ಭಾರತದಲ್ಲಿ ಬರಗಾಲದ ಪರಿಸ್ಥಿತಿಯ ಸಾಧ್ಯತೆ ಇದೆ. ಅದರ ಬದಲಿಗೆ ಪೂರ್ವ ಪೆಸಿಫಿಕ್ ಸಾಗರದಲ್ಲಿ ಕಂಡು ಬರುವ ಎಲ್ ನಿನೋ ಭಾರತದ ಮುಂಗಾರು ಮಳೆಯನ್ನು ಸಹಜ ಸ್ಥಿತಿಯಲ್ಲಿಡುತ್ತದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಮಾರ್ಚ್ ಮೊದಲ ವಾರದಲ್ಲಿ ಯುಎಸ್ ನ್ಯಾಷನಲ್ ಓಷಿಯಾನಿಕ್ ಅಂಡ್ ಅಟ್ಮೋಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ ಹೇಳಿರುವ ಪ್ರಕಾರ ಫೆಸಿಫಿಕ್ ಓಷನ್ ನಲ್ಲಿ ನೀರನ್ನು ತಣ್ಣಗಾಗಿಸುವ ಲಾ ನಿನಾ ಇದೀಗ ಕಣ್ಮರೆಯಾಗಿದೆ. ಪೆಸಿಫಿಕ್ ಸಮುದ್ರವು ಇದೀಗ ಸಹಜ ಸ್ಥಿತಿಗೆ ಮರಳುತ್ತಿದೆ.

ಲಾ ನಿನಾವು ಸಮುದ್ರದಲ್ಲಿರುವ ಸಾಮಾನ್ಯ ತಾಪಮಾನವನ್ನು ತಣ್ಣಗಾಗಿಸುತ್ತದೆ. ಇದು ಸಮುದ್ರದ 50 ರಿಂದ 250 ಮೀಟರ್ ಆಳದಲ್ಲಿ ಕಂಡುಬರುವ ಸ್ಥಿತಿಯಾಗಿದೆ. ಆದರೆ ಲಾ ನಿನ ತನ್ನ ಹಿಡಿತವನ್ನು ಕಳೆದುಕೊಂಡಿದೆ. ಸಮುದ್ರದ ತಾಪಮಾನ ದಕ್ಷಿಣ ಟ್ರಾಪಿಕಲ್ ಪೆಸಿಫಿಕ್ ಸಾಮಾನ್ಯ ತಾಪಮಾನಕ್ಕಿಂತ ತಣ್ಣಗಿದೆ. ಆದರೂ ಲಾ ನಿನ ತನ್ನ ಹಿಡಿತವನ್ನು ಕಳೆದುಕೊಂಡಿದ್ದು ಈಗಿರುವ ಸನ್ನಿವೇಶವನ್ನು ಗಮನಿಸಿದರೆ ಸಾಮಾನ್ಯ ಮಳೆಯಾಗುವ ಲಕ್ಷಣಗಳಿವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
There are indications that India could see normal monsoon even as national weather forecaster IMD is still over a fortnight away from an official pronouncement on the likely rainfall pattern this year.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more