E-khata Good News: ಇ - ಖಾತಾ ಎಂದರೇನು, ಬೇಕಾಗುವ ದಾಖಲೆಗಳೇನು ?
ಇ - ಖಾತಾ ಪ್ರಕ್ರಿಯೆಗಳನ್ನು ಬಿಬಿಎಂಪಿಯು ಸರಳೀಕರಣಗೊಳಿಸಿದೆ. ಬಿಬಿಎಂಪಿಯು 2024ನೇ ಸಾಲಿನಲ್ಲಿ ಆಸ್ತಿದಾರರು ಸಂತೋಷಪಡುವಂತಹ ಹಲವು ಖುಷಿ ಸುದ್ದಿಗಳನ್ನು ಕೊಟ್ಟಿದೆ. ಈ ವರ್ಷ ಆಸ್ತಿಗಳಲ್ಲಿನ ಅಕ್ರಮ ಹಾಗೂ ತೆರಿಗೆ ಮೋಸವನ್ನು ತಡೆಯುವ ಉದ್ದೇಶದಿಂದ ಇ -ಖಾತಾ ಪರಿಚಯಿಸಿದೆ. ಆದರೆ, ಸಾರ್ವಜನಿಕರು ಇ - ಖಾತಾದಲ್ಲಿ ಗೊಂದಲ ಸೃಷ್ಟಿಯಾಗುತ್ತಿದ್ದು, ಈ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಬೇಕು ಎಂದು ಮನವಿ ಮಾಡಿದ್ದರು. ಇದಕ್ಕಾಗಿ ಬಿಬಿಎಂಪಿಯು ಹಲವು ಸುಧಾರಣೆ ಕ್ರಮಗಳನ್ನು ಜಾರಿ ಮಾಡಿದೆ. ಇದೀಗ ನೀವು ಆನ್‌ಲೈನ್‌ನ ಮೂಲಕ ಇನ್ನಷ್ಟು ಸರಳವಾಗಿ ಇ - ಖಾತಾ ಪಡೆದುಕೊಳ್ಳಲು ಅವಕಾಶ ಇರಲಿದೆ. ಇ - ಖಾತಾ ಎಂದರೇನು, ಅದನ್ನು ಮಾಡಿಸುವುದು ಹೇಗೆ ಹಾಗೂ ಅದಕ್ಕೆ ಬೇಕಾಗುವ ದಾಖಲೆಗಳು ಯಾವುವು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಇ - ಖಾತಾ ಎಂದರೇನು: ರಾಜ್ಯ ಕಾಂಗ್ರೆಸ್ ಸರ್ಕಾರವು ಆಸ್ತಿಗಳ ನೋಂದಣಿಗೆ ಇ -ಖಾತಾ ಕಡ್ಡಾಯ ಮಾಡಿದೆ. ನಿವೇಶನಗಳ ಮಾರಾಟ ಹಾಗೂ ಮನೆ ಮಾರಾಟದ ವಿಷಯದಲ್ಲಿ ಅಕ್ರಮಗಳಿಗೆ ಬ್ರೇಕ್ ಹಾಕುವುದು ಹಾಗೂ ಜನರು ಮೋಸ ಹೋಗದಂತೆ ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ. ಇದರೊಂದಿಗೆ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದವರು ಅಂದರೆ ಆಸ್ತಿ ತೆರಿಗೆ ಕಟ್ಟದೆ ಮೋಸ ಮಾಡುತ್ತಿರುವವರು. ಅವರನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರುವುದು ಇದರ ಉದ್ದೇಶವಾಗಿದೆ.

ಆಸ್ತಿಗಳ ಖಾತೆ ಹಾಗೂ ನಕ್ಷೆಗಳ ಮಂಜೂರಾತಿ ವಿಚಾರಗಳಲ್ಲಿ ಗೊಂದಲ ಹಾಗೂ ಸಮಸ್ಯೆ ಈಗಲೂ ಮುಂದುವರಿದಿದೆ. ಇ ಆಸ್ತಿ, ಇ- ಸ್ವತ್ತು, ಇ - ವಿನ್ಯಾಸ ಹಾಗೂ ಇ - ಖಾತಾಗಳ ವಿತರಣೆಯಲ್ಲಿ ಕೆಲವೊಂದು ಸಮಸ್ಯೆಗಳು ಈಗಲೂ ಮುಂದುವರಿದಿದೆ. ಇದೀಗ ಈ ವಿಚಾರವಾಗಿ ಮತ್ತೊಂದು ಪ್ರಮುಖ ಮಾಹಿತಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಂಚಿಕೊಂಡಿದೆ.
ಇ - ಖಾತಾಗೆ ಬೇಕಾಗುವ ಪ್ರಮುಖ ದಾಖಲೆಗಳು
ನಿಮ್ಮ ಆಸ್ತಿ ಇ-ಖಾತಾ ಆನ್‌ಲೈನ್‌ನಲ್ಲಿದೆ. ಅದನ್ನು ಸರಾಗವಾಗಿ ಈ ಕೆಳಗಿನ ದಾಖಲೆಗಳನ್ನು ನೀಡಿ ಪಡೆದುಕೊಳ್ಳಬಹುದು ಎಂದು ಬಿಬಿಎಂಪಿ ಹೇಳಿದೆ.
* ನಿಮ್ಮ ಕರಡು ಇ-ಖಾತಾವನ್ನು ವಾರ್ಡ್ ವಾರು ಪಟ್ಟಿಯಲ್ಲಿ ಹುಡುಕಬಹುದು. (ನಿಮ್ಮ ವಾರ್ಡ್ ಮತ್ತು ನಿಮ್ಮ ಆಸ್ತಿ ತೆರಿಗೆ ರಶೀದಿಯಿಂದ ತಿಳಿದುಕೊಳ್ಳಿ)
* ಈ ಕೆಳಗಿನ ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ನಮೂದಿಸಿ, ನಿಮ್ಮ ಅಂತಿಮ ಇ-ಖಾತಾವನ್ನು ಪಡೆದುಕೊಳ್ಳಬಹುದು.
(i) ಆಧಾರ್ ಕಾರ್ಡ್
(ii) ಆಸ್ತಿ ತೆರಿಗೆ ID
(iii) ಕ್ರಯ/ನೊಂದಾಯಿತ ಪತ್ರ ಸಂಖ್ಯೆ
(iv) ಬೆಸ್ಕಾಂ ID (ಖಾಲಿ ನಿವೇಶನ ಆಯ್ಕೆ) ಈ ದಾಖಲೆಗಳು ಬೇಕಾಗುತ್ತವೆ.

3. ಅಪೂರ್ಣ ಮಾಹಿತಿ ಅಥವಾ ಬಿಬಿಎಂಪಿ ದಾಖಲೆಗಳೊಂದಿಗೆ ಹೊಂದಾಣಿಕೆಯಾಗದಿದ್ದರೆ ಮಾತ್ರ ಪ್ರಕರಣಗಳು ನಿರ್ಧಾರಕ್ಕಾಗಿ ಎಆರ್‌ಒಗಳಿಗೆ ಕಳುಹಿಸಲಾಗುತ್ತದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಯಾವುದಾದರೂ ಗೊಂದಲಗಳಿದ್ದರೆ, ಇ-ಖಾತಾ ಸಹಾಯ ವಾಣಿ ಸಂಖ್ಯೆ: 94806 83695 ಕರೆಮಾಡಬಹುದಾಗಿದೆ.
ಪಾಲಿಕೆಯ ವೆಬ್‌ಸೈಟ್ ಮೂಲಕ ಇ - ಖಾತಾ ಸರಳ ಪ್ರಕ್ರಿಯೆ
ಬಿಬಿಎಂಪಿಯ ಇ-ಖಾತಾ ಈಗ ಸಾರ್ವಜನಿಕರ ನಿಯಂತ್ರಣದಲ್ಲಿದೆ. ಪ್ರತಿಯೊಬ್ಬರಿಗೂ ಬಿಬಿಎಂಪಿಯ ಇ-ಖಾತಾವನ್ನು ಪಾಲಿಕೆ ವೆಬ್‌ಸೈಟ್ https://bbmpeaasthi.karnataka.gov.in ಮೂಲಕ ಪಡೆಯಬಹುದು ಎಂದು ಹೇಳಲಾಗಿದೆ. ಅಲ್ಲದೆ ಇದಕ್ಕಾಗಿ ಪಾಲಿಕೆಯಲ್ಲಿ ಸಂಪರ್ಕರಹಿತ, ಫೇಸ್‌ಲೆಸ್ ಹಾಗೂ ಆನ್‌ಲೈನ್ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ.
22 ಲಕ್ಷ ಖಾತೆಗಳು ಲಭ್ಯವಿದೆ: ಇನ್ನು ಬಿಬಿಎಂಪಿಯ ವೆಬ್‌ಸೈಟ್‌ನಲ್ಲಿ ಬರೋಬ್ಬರಿ 22 ಲಕ್ಷ ಆಸ್ತಿಗಳು ಲಭ್ಯವಿವೆ. ಆನ್‌ಲೈನ್‌ನ https://bbmpeaasthi.karnataka.gov.inರ ಮೂಲಕ ನೀವು ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ. ಉಪ ಮುಖ್ಯಮಂತ್ರಿ , ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ. ಕೆ. ಶಿವಕುಮಾರ್ ಅವರ ದೂರದೃಷ್ಟಿ ಮತ್ತು ನಾಯಕತ್ವದಲ್ಲಿ ಬಿಬಿಎಂಪಿಯು ಎಲ್ಲಾ ಬೆಂಗಳೂರಿಗರಿಗೆ ತಮ್ಮ ಸ್ವತ್ತುಗಳ ಬಿಬಿಎಂಪಿ ಇ-ಖಾತಾಗಳನ್ನು ನೀಡಲು ಅಂದಾಜು 22 ಲಕ್ಷ ಕರಡು ಇ-ಖಾತಾಗಳನ್ನು ಆನ್‌ಲೈನ್‌ನಲ್ಲಿ ಇರಿಸಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.












Click it and Unblock the Notifications