E-Air taxi: 2026ಕ್ಕೆ ಈ ಮಾರ್ಗಗಳಲ್ಲಿ ಏರ್ ಟ್ಯಾಕ್ಸಿ ಸೇವೆ, ಎಲ್ಲೆಲ್ಲಿ ಗೊತ್ತಾ?, ಇಲ್ಲಿದೆ ಮಾಹಿತಿ
ಬೆಂಗಳೂರು, ನವೆಂಬರ್, 10: ಭಾರತದಲ್ಲಿ ಸಾರಿಗೆ ಕ್ಷೇತ್ರವು ದಿನದಿಂದ ದಿನಕ್ಕೆ ಹೊಸ ಮೈಲುಗಲ್ಲಿನತ್ತ ಸಾಗುತ್ತಲೇ ಇದೆ. ಹಾಗೆಯೇ ಇದೀಗ ಇಂಡಿಗೊ ಬೆಂಬಲಿತ ಇಟರ್‌ಗ್ಲೋಬ್ ಎಂಟರ್‌ಪ್ರೈಸಸ್ ಮತ್ತು ಯುಎಸ್ ಮೂಲದ ಆರ್ಚರ್ ಏವಿಯೇಷನ್ 2026ಕ್ಕೆ ಸಂಪೂರ್ಣ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ (E-AIR Taxi) ಸೇವೆ ಆರಂಭ ಮಾಡಲು ಮುಂದಾಗಿದೆ. ಹಾಗಾದರೆ ಯಾವೆಲ್ಲ ಮಾರ್ಗಗಳಲ್ಲಿ ಈ ಸೇವೆ ಇರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಈ ನಗರಗಳಲ್ಲಿ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ಸೇವೆ
ಕ್ರಿಸ್ಲರ್-ಸ್ಟೆಲ್ಲಾಂಟಿಸ್, ಬೋಯಿಂಗ್ ಮತ್ತು ಯುನೈಟೆಡ್ ಏರ್‌ಲೈನ್ಸ್ ಬೆಂಬಲದೊಂದಿಗೆ ಆರ್ಚರ್ ಏವಿಯೇಷನ್, ಎಲೆಕ್ಟ್ರಿಕ್ ಲಂಬ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ (ಇವಿಟಿಒಎಲ್) ವಿಮಾನಗಳನ್ನು ತಯಾರಿಸುತ್ತದೆ. ಇದನ್ನು ನಗರ ವಾಯು ಸಾರಿಗೆಯ ಭವಿಷ್ಯವೆಂದು ನೋಡಬಹುದು. ಮಧ್ಯರಾತ್ರಿ ಇ-ವಿಮಾನವು 4 ಪ್ರಯಾಣಿಕರು ಮತ್ತು ಪೈಲಟ್ ಅನ್ನು 100 ಮೈಲಿ (ಸುಮಾರು 161 ಕಿಲೋ ಮೀಟರ್) ವರೆಗೆ ಹಾರಾಟ ಮಾಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಇನ್ನು ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ಸೇವೆಯು ನವದೆಹಲಿ, ಮುಂಬೈ ಮತ್ತು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 200 ವಿಮಾನಗಳೊಂದಿಗೆ ಈ ಸೇವೆಯನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದೆ.
ನವದೆಹಲಿಯಲ್ಲಿ ಸಾಮಾನ್ಯವಾಗಿ 60ರಿಂದ 90 ನಿಮಿಷಗಳನ್ನು ತೆಗೆದುಕೊಳ್ಳುವ ಕಾರಿನ ಪ್ರಯಾಣವು ಏರ್ ಟ್ಯಾಕ್ಸಿ ಸುಮಾರು 7 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಕಂಪನಿಗಳಿಂದ ಮಾಹಿತಿ ಲಭ್ಯವಾಗಿದೆ. ಇಂಟರ್‌ಗ್ಲೋಬ್ ಎಂಟರ್‌ಪ್ರೈಸಸ್ ಸರಕು, ಲಾಜಿಸ್ಟಿಕ್ಸ್, ವೈದ್ಯಕೀಯ, ತುರ್ತು ಮತ್ತು ಚಾರ್ಟರ್ ಸೇವೆಗಾಗಿ ಇ-ವಿಮಾನವನ್ನು ಬಳಸಲು ಬಳಕೆ ಮಾಡಲು ಯೋಜಿಸುತ್ತಿದೆ.
🇮🇳🇮🇳🇮🇳Hello, India! 🇮🇳🇮🇳🇮🇳
— Archer (@ArcherAviation) November 9, 2023
We’re proud to announce a landmark deal with @InterGlobe_IGE – India’s foremost travel and hospitality conglomerate – with plans to launch electric air taxis across India’s largest, most congested cities in 2026. This week, our Chief Commercial… pic.twitter.com/cC1IZszU53
ಜುಲೈನಲ್ಲಿ ಯುಎಸ್ ವಾಯುಪಡೆಯಿಂದ 6 ವಿಮಾನಗಳನ್ನು ಒದಗಿಸಲು ಆರ್ಚರ್ 142 ಮಿಲಿಯನ್ ಡಾಲರ್ ಒಪ್ಪಂದವನ್ನು ಪಡೆದುಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.












Click it and Unblock the Notifications