ಕುಡಿದ ಮತ್ತಲ್ಲಿ ಕಂಡ ಕಂಡವರಿಗೆ ಲಾಠಿ ಏಟು ಕೊಟ್ಟ ಪೊಲೀಸ್
ಬೆಂಗಳೂರು, ಜು.26: ಟ್ರಾಫಿಕ್ ಪೇದೆಯೊಬ್ಬರು ಮದ್ಯಪಾನ ಮಾಡಿ ಕಂಡ ಕಂಡವರಿಗೆಲ್ಲ ಲಾಠಿ ಏಟು ನೀಡಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.ಕಾನೂನು ಕಾಪಾಡುವವರೇ ಕಾನೂನು ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಸಂಚಾರಿ ನಿಯಮವನ್ನು ಪಾಲಿಸಿ, ಹೆಲ್ಮೆಟ್ ಹಾಕಿ ಬೈಕ್ ಚಲಾಯಿಸಿ ಹೀಗೆ ನೂರಾರು ಕಾನೂನುಗಳನ್ನು ತಿಳಿಸುವ ಪೊಲೀಸರೇ ಯೂನಿಫಾರ್ಮ್ ಹಾಕಿಕೊಂಡೇ ಮದ್ಯಪಾನ ಮಾಡಿ ರಸ್ತೆ ತುಂಬೆಲ್ಲಾ ತೂರಾಡುತ್ತಾ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದಾರೆ.
ಬುಧವಾರ ರಾತ್ರಿ ಹೆಬ್ಬಾಳದ ಮೂರನೇ ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಪೇದೆಯೊಬ್ಬರು ಎತೇಚ್ಛವಾಗಿ ಮದ್ಯಪಾನ ಮಾಡಿದ್ದು, ರಸ್ತೆಯಲ್ಲಿ ಕಂಡವರಿಗೆಲ್ಲಾ ಲಾಠಿಯಿಂದ ಹೊಡೆದಿದ್ದಾರೆ, ಇದನ್ನು ಸಾರ್ವಜನಿಕರು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲಲ್ಲಿ ಹರಿ ಬಿಡುತ್ತಿದ್ದಾರೆ.

ಈ ಟ್ರಾಫಿಕ್ ಪೊಲೀಸರ ಈ ದುರ್ವರ್ತನೆಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಈ ರೀತಿ ಕುಡಿದು ತಿರುಗಾಡಿದರೆ ಅವರನ್ನೇ ಅವರಿಗೆ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಿಲ್ಲ ಇನ್ನು ಜನರನ್ನು ಹೇಗೆ ರಕ್ಷಣೆ ಮಾಡಿಯಾರು ಎಂಬ ಮಾತುಗಳೂ ಕೇಳಿಬಂದಿದೆ.











Click it and Unblock the Notifications