ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಅಂದಾಜಿಸಲು ಡ್ರೋನ್ ಆಧಾರಿತ ತಂತ್ರಜ್ಞಾನ!
ಬೆಂಗಳೂರು, ಜೂನ್ 28: ಬೆಂಗಳೂರಿನ ಪ್ರಮುಖ ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ವಾಯುಮಾಲಿನ್ಯದ ವಿವಿಧ ಮೂಲಗಳ ಅಂದಾಜನ್ನು ಗುರುತಿಸಲು ಅತ್ಯಾಧುನಿಕ ಡ್ರೋನ್ ಆಧಾರಿತ ತಂತ್ರಜ್ಞಾನವನ್ನು ಬಳಸುವ ವಿಶಿಷ್ಟ ಯೋಜನೆಯನ್ನು ಪ್ರಾರಂಭಿಸಲಾಗಿದೆ.
ಎನ್ವಿರಾನ್ಮೆಂಟ್ ಮ್ಯಾನೇಜ್ಮೆಂಟ್ ಪಾಲಿಸಿ ರಿಸರ್ಚ್ ಇನ್ಸ್ಟಿಟ್ಯೂಟ್ (ಇಎಂಪಿಆರ್ಐ) ಜೊತೆಗೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (ಎನ್ಐಎಎಸ್) ಈ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯು ಬೆಂಗಳೂರಿಗೆ ಎರಡು ರೀತಿಯಲ್ಲಿ ನೆರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದು ವಾಯು ಗುಣಮಟ್ಟದ ಮುಂಚಿನ ಎಚ್ಚರಿಕೆ ನೀಡುವ ಸಿಸ್ಟಂ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಅಲ್ಲದೆ ವಾಯು ಮಾಲಿನ್ಯದ ಅಪಾಯವನ್ನು ನಿರ್ಮೂಲನೆ ಮಾಡುವ ಯೋಜನೆಗೆ ಆದ್ಯತೆ ನೀಡಲು ಬಿಬಿಎಂಪಿಯಂತಹ ಅಧಿಕಾರಿಗಳಿಗೆ ಅಂಕಿಅಂಶಗಳನ್ನು ಒದಗಿಸುತ್ತದೆ ಎಂದು NIAS ಹೇಳಿಕೆಯಲ್ಲಿ ತಿಳಿಸಿದೆ.
200 ಮೀಟರ್ ರೆಸಲ್ಯೂಶನ್‌ನಲ್ಲಿ ಸೂಕ್ಷ್ಮ ಕಣಗಳ ಮಾಲಿನ್ಯಕಾರಕಗಳ ಗ್ರಿಡ್ ಹೊರಸೂಸುವಿಕೆಯನ್ನು ಅಭಿವೃದ್ಧಿಪಡಿಸಲು ಯೋಜನೆಯು ಸಹಕಾರ ನೀಡುತ್ತದೆ. ಇದು ವಿಶಿಷ್ಟವಾಗಿದ್ದು, ನಿಯಂತ್ರಣ ಕ್ರಮಗಳನ್ನು ಮೈಕ್ರೋಮ್ಯಾನೇಜ್ ಮಾಡಲು ಉಪಯುಕ್ತ ಹೆಜ್ಜೆಯಾಗಿದೆ ಎಂದು EMPRI ನ ಮಹಾನಿರ್ದೇಶಕ ಡಾ.ಜಗ್ಮೋಹನ್ ಶರ್ಮಾ ಹೇಳಿದ್ದಾರೆ.

ಈ ಯೋಜನೆಯು ಸುಮಾರು 50 ಸ್ವಯಂಸೇವಕರಿಂದ ನಡೆಸಲ್ಪಡುತ್ತದೆ, ಹಿಂದಿನ ಪ್ರಯೋಗಗಳಿಗೆ ಹೋಲಿಸಿದರೆ ನಿಖರವಾದ ಅಂಕಿ ಅಂಶವನ್ನು ಒದಗಿಸುತ್ತದೆ.
ಬೆಂಗಳೂರಿನ Emission inventories ಗಳನ್ನು ಹಿಂದೆ ಅಭಿವೃದ್ಧಿಪಡಿಸಲಾಗಿದೆ. ಆದರೆ ಒಟ್ಟು ಅಂದಾಜುಗಳು ಅಥವಾ ದ್ವಿತೀಯ ಡೇಟಾ ಮೂಲಗಳು ಅಥವಾ ಪ್ರಾಥಮಿಕ ಡೇಟಾದ ಹಸ್ತಚಾಲಿತ ಅಂದಾಜುಗಳನ್ನು ಬಳಸಲಾಗಿತ್ತು. ಆದಾಗ್ಯೂ, ಈ ಯೋಜನೆಯು ಎಮಿಷನ್‌ನ ಹೆಚ್ಚಿನ ರೆಸಲ್ಯೂಶನ್, ವಿವಿಧ ಮೂಲಗಳ ಸಂಬಂಧಿತ ಪಾಲನ್ನು ಗುರುತಿಸುತ್ತದೆ. ನಾವು ಡ್ರೋನ್ ತಂತ್ರಜ್ಞಾನವನ್ನು ಬಳಸುವುದರಿಂದ ಹೆಚ್ಚು ನಿಖರವಾದ ಅಂಕಿ ಅಂಶವನ್ನು ನೀಡುತ್ತದೆ ಎಂದು NIAS ನ ಚೇರ್ ಪ್ರೊಫೆಸರ್ ಪ್ರೊಫೆಸರ್ ಗುಫ್ರಾನ್ ಬೀಗ್ ಹೇಳಿದ್ದಾರೆ.
ಈ ಯೋಜನೆಯು 35 ಸಾರಿಗೆ ಹಾಟ್ ಸ್ಪಾಟ್‌ಗಳು, 36 ವಸತಿ ಜೈವಿಕ ಇಂಧನ ಪ್ರದೇಶಗಳು, ಮೂರು ಕೈಗಾರಿಕಾ ಪ್ರದೇಶಗಳು, ಏಳು ಘನತ್ಯಾಜ್ಯ ನಿರ್ವಹಣಾ ಡಂಪ್ ಯಾರ್ಡ್‌ಗಳು ಮತ್ತು ಬೆಂಗಳೂರಿಗೆ ಎಂಟು ಪ್ರಮುಖ ಒಳಹರಿವಿನ ಮೂಲ ಅಂಶವನ್ನು ಪತ್ತೆ ಹಚ್ಚುತ್ತದೆ.
ಇತ್ತೀಚೆಗೆ ವಾಹನ ದಟ್ಟಣೆ ಇರುವ ಜಂಕ್ಷನ್‌ಗಳನ್ನು ನಿರ್ವಹಣೆ ಮಾಡುವ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ಸೋಮವಾರ ಹೆಬ್ಬಾಳ ಜಂಕ್ಷನ್‌ನಲ್ಲಿ ಡ್ರೋನ್ ಕಣ್ಗಾವಲು ಪ್ರಯೋಗವನ್ನು ನಡೆಸಿದ್ದರು. ಮಾರತ್ತಹಳ್ಳಿ ಜಂಕ್ಷನ್‌ನಲ್ಲಿ ಡ್ರೋನ್ ಕ್ಯಾಮೆರಾಗಳನ್ನು ಪರೀಕ್ಷೆ ಮಾಡಿದ್ದರು. ಪ್ರಸ್ತುತ ಟ್ರಾಫಿಕ್ ಪೊಲೀಸರು ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಸಾಂದ್ರತೆಯನ್ನು ಮೇಲ್ವಿಚಾರಣೆ ಮಾಡಲು ಎರಡು ಡ್ರೋನ್ ಕ್ಯಾಮೆರಾಗಳನ್ನು ಬಳಸಿದ್ದಾರೆ. ಅಲ್ಲದೆ ಕಾರ್ಯಾಚರಣೆಗಳಿಗೆ ಅವುಗಳನ್ನು ಬಳಸಲು ಮುಂದಾಗಿದ್ದರು.
ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ ಎನ್ ಅನುಚೇತ್ ಮಾತನಾಡಿ, ಟ್ರಾಫಿಕ್ ಆವಶ್ಯಕತೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ತಂತ್ರಜ್ಞಾನಕ್ಕೆ ನಮ್ಮನ್ನು ನಾವು ಒಗ್ಗಿಸಿಕೊಳ್ಳಲು ನಾವು ಡ್ರೋನ್ ಕ್ಯಾಮರಾ ಬಳಸುತ್ತಿದ್ದೇವೆ. ನಾವು ಇಂದು ಪ್ರಯೋಗಗಳನ್ನು ನಡೆಸಿದ್ದೇವೆ ಮತ್ತು ವ್ಯವಸ್ಥೆಯೊಂದಿಗೆ ಪರಿಣತಿಯನ್ನು ಪಡೆಯಲು ಮುಂದಿನ ವಾರ ಅದನ್ನು ಮುಂದುವರಿಸುತ್ತೇವೆ ಎಂದು ಅವರು ತಿಳಿಸಿದ್ದರು.
ವರದಿಯೊಂದರ ಪ್ರಕಾರ ದೇಶದಾದ್ಯಂತ 11 ಪ್ರಮುಖ ನಗರಗಳಲ್ಲಿ ಮಾಲಿನ್ಯದ ಮಟ್ಟವು ಸುರಕ್ಷಿತ ಮಟ್ಟವನ್ನು ಮೀರಿದ್ದು, ಕಳೆದ 366 ದಿನಗಳಲ್ಲಿ ಬೆಂಗಳೂರಿನಲ್ಲಿ ಸರಾಸರಿ PM (ಮಾಲಿನ್ಯದ ಮಟ್ಟ) 2.5 ಮಟ್ಟವು ವಿಶ್ವ ಆರೋಗ್ಯ ಸಂಸ್ಥೆಯು ನಿಗದಿಪಡಿಸಿದ ಸುರಕ್ಷಿತ ಮಟ್ಟಕ್ಕಿಂತ 5.8 ಪಟ್ಟು ಹೆಚ್ಚಾಗಿದೆ ಎಂದು ತಿಳಿದು ಬಂದಿತ್ತು.
ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ಘನ ಮೀಟರ್‌ಗೆ 5 ಮೈಕ್ರೋಗ್ರಾಂ ಅನ್ನು ಸುರಕ್ಷಿತ ಮಟ್ಟವಾಗಿ ಇರಿಸಿದೆ. ಕಳವಳಕಾರಿ ವಿಷಯವೆಂದರೆ ಬೆಂಗಳೂರಿನ ಗಾಳಿಯಲ್ಲಿ ಕಣದಲ್ಲಿ ವಾರ್ಷಿಕ ಸರಾಸರಿ ಪ್ರತಿ ಘನ ಮೀಟರ್‌ಗೆ 29.01 ಮೈಕ್ರೋಗ್ರಾಂ ಮಾಲಿನ್ಯವಿದೆ. 24ಗಂಟೆಗಳ ಸಾಂದ್ರತೆಯು 283 ದಿನಗಳಲ್ಲಿ ಪ್ರತಿ ಘನ ಮೀಟರ್‌ಗೆ 60 ಮೈಕ್ರೋಗ್ರಾಂಗಿಂತ ಹೆಚ್ಚು ಎಂದು ವರದಿ ತಿಳಿಸಿತ್ತು.












Click it and Unblock the Notifications