• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸನ್ನಿ ಲಿಯೋನ್ ಹೊರತುಪಡಿಸಿ ಮಾನ್ಯತಾದಲ್ಲಿ ಎಲ್ಲಾ ಕಾರ್ಯಕ್ರಮಗಳು ರದ್ದು

|

ಬೆಂಗಳೂರು, ನವೆಂಬರ್ 3: ಬೆಂಗಳೂರಿನ ಮಾನ್ಯತಾ ಟೆಕ್‌ಪಾರ್ಕ್ ಬಳಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ವಾಹನ ದಟ್ಟಣೆ ಎದುರಾಗಿದೆ.

ದೀಪಾವಳಿ ವಿಶೇಷ ಪುರವಣಿ

ಒಂದೊಮ್ಮೆ ಕಾರ್ಯಕ್ರಮಗಳನ್ನು ಮಾಡಿದ್ದೇ ಆದರೆ ಟ್ರಾಫಿಕ್ ನಿಭಾಯಿಸುವುದು ಕಷ್ಟವಾಗುತ್ತದೆ. ಹಾಗಾಗಿ ಮಾನ್ಯತಾ ಟೆಕ್‌ ಪಾರ್ಕ್ ಬಳಿ ಸದ್ಯಕ್ಕೆ ಯಾವುದೇ ಕಾರ್ಯಕ್ರಮಗಳನ್ನು ನಡೆಸದಂತೆ ಪೊಲೀಸರು ಸೂಚನೆ ನೀಡಿದ್ದಾರೆ.

ಹೆಬ್ಬಾಳದಿಂದ ಹೆಣ್ಣೂರುವರೆಗೆ ಸುಮಾರು 2.7 ಕಿ.ಮೀ ದೂರದವರೆಗೆ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಈ ಪ್ರದೇಶದಲ್ಲಿ ಯಾವ ಮೆಗಾ ಇವೆಂಟ್ ಗಳನ್ನು ಆಯೋಜನೆ ಮಾಡುವುದು ಬೇಡ ಎಂದು ಸಲಹೆ ನೀಡಿದ್ದಾರೆ. ಪೀಕ್ ಅವಧಿಯಲ್ಲಿ ಹೆಬ್ಬಾಳ ಫ್ಲೈಓವರ್ ದಾಟಲು ಸುಮಾರು 50 ನಿಮಿಷ ಸಮಯ ಬೇಕಾಗುತ್ತದೆ.

ಸನ್ನಿ ಲಿಯೋನ್ ಬಂದ್ರೆ ಸುಮ್ನಿರಲ್ಲ ಅಂತಿದಾರೆ ರಕ್ಷಣಾ ವೇದಿಕೆ ಹುಡುಗರು!

ಅಲ್ಲಿರುವ ಮಾನ್‌ಫೋ ಕನ್ವೆಂಷನ್ ಸೆಂಟರ್‌ನಲ್ಲಿ ಕೂಡ ಕಾರ್ಯಕ್ರಮಗಳು ನಡೆಯುವುದರಿಂದ ಕಾರು, ಬೈಕ್ ಇನ್ನಿತರೆ ವಾಹನಗಳ ಸಂಖ್ಯೆ ಆ ರಸ್ತೆಯಲ್ಲಿ ಶೇ.100ರಷ್ಟು ಹೆಚ್ಚಾಗಿದೆ ಎಂದು ಮಾನ್ಯತಾ ರಡಸಿಡೆನ್ಸಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಯರಾಮ್ ತಿಳಿಸಿದ್ದಾರೆ.

15 ನಿಮಿಷದ ಹಾದಿ 45 ನಿಮಿಷವಾದರೂ ತಲುಪಲು ಸಾಧ್ಯವಿಲ್ಲ

15 ನಿಮಿಷದ ಹಾದಿ 45 ನಿಮಿಷವಾದರೂ ತಲುಪಲು ಸಾಧ್ಯವಿಲ್ಲ

ಈ ಮೊದಲು 15 ನಿಮಿಷಗಳಲ್ಲಿ ತಲುಪುತ್ತಿದ್ದ ಪ್ರದೇಶವನ್ನು ಕ್ರಮಿಸಲು ಇದೀಗ 45ರಿಂದ 1 ಗಂಟೆ ಸಮಯ ಬೇಕಾಗಿದೆ. ಬಿಬಿಎಂಪಿಯು ಆಗಸ್ಟ್ 27ರಿಂದಲೇ 2.7 ಕಿ.ಮೀ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಆರಂಭವಾಗಿತ್ತು. ನವೆಂಬರ್ 11ರೊಳಗೆ ಕಾಮಗಾರಿ ಮುಗಿಯುತ್ತದೆ ಎಂದು ಹೇಳಲಾಗಿತ್ತು. ಆದರೆ ಏಕಾಏಕಿ ಯೋಜನೆ ಬದಲಾಗಿದೆ.

ಸನ್ನಿ ಲಿಯೋನ್ ಕುಣಿತಕ್ಕೆ ಓಕೆ ಎಂದ ಬೆಂಗಳೂರು ಪೊಲೀಸರು

ವೈಟ್‌ಟಾಪಿಂಗ್ ಮುಗಿಯುವವರೆಗೆ ಕಾರ್ಯಕ್ರಮಗಳು ರದ್ದು

ವೈಟ್‌ಟಾಪಿಂಗ್ ಮುಗಿಯುವವರೆಗೆ ಕಾರ್ಯಕ್ರಮಗಳು ರದ್ದು

ಹೆಬ್ಬಾಳದಿಂದ ಹೆಣ್ಣೂರು ವರೆಗೆ 2.7ಕಿ.ಮೀ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಕಾರ್ಯ ನಡೆಯುತ್ತಿದೆ. ಈ ಕಾಮಗಾರಿಗಳು ಮುಗಿಯುವವರೆಗೂ ಮಾನ್‌ಫೋ ಕನ್ವೆಂಷನ್ ಸೆಂಟರ್ ಹಾಗೂ ಇನ್ನಿತರೆ ಕನ್ವೆಂಷನ್ ಸೆಂಟರ್‌ಗಳಲ್ಲಿ ಕಾರ್ಯಕ್ರಮಗಳನ್ನು ನಿಷೇಧಿಸುವಂತೆ ಸೂಚಿಸಲಾಗಿದೆ.

 2 ಗಂಟೆ ಟ್ರಾಫಿಕ್ ಜಾಮ್

2 ಗಂಟೆ ಟ್ರಾಫಿಕ್ ಜಾಮ್

ಮಾನ್ಯತಾ ಟೆಕ್‌ ಪಾರ್ಕ್ ಬಳಿ ಇರುವ ಎರಡು ಕನ್ವೆಂಷನ್ ಸೆಂಟರ್‌ ನಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಕಾರಣ ಸುಮಾರು 2 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ.

ಸನ್ನಿ ಲಿಯೋನಿ ಕಾರ್ಯಕ್ರಮ ಇರುತ್ತಾ?

ಸನ್ನಿ ಲಿಯೋನಿ ಕಾರ್ಯಕ್ರಮ ಇರುತ್ತಾ?

ಸನ್ನಿ ಲಿಯೋನ್ ಕಾರ್ಯಕ್ರಮದ ದಿನವೂ ಕೂಡ ಇದಕ್ಕಿಂತ ಹೆಚ್ಚು ಟ್ರಾಫಿಕ್ ಇರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ ಸನ್ನಿ ಲಿಯೋನ್ ಕಾರ್ಯಕ್ರಮವನ್ನು ತಿಂಗಳುಗಳ ಮೊದಲೇ ನಿಯೋಜಿಸಲಾಗಿದೆ ಅದನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

English summary
Irked by the traffic chaos caused by whitetopping (concrete-laying) work undertaken on the 2.7km stretch from Hebbal to Hennur, residents living near Manyata Embassy Tech Park (METB) have approached police, seeking that no permission be granted for any mega event in the area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X