Dog: ಬೆಂಗಳೂರಿನಲ್ಲಿ ಯಶಸ್ವಿ ಶ್ವಾನ ದತ್ತು ಶಿಬಿರ: 10 ನಾಯಿ - ಒಂದು ಬೆಕ್ಕಿನ ಮರಿಗೆ ಹೊಸ ಮನೆ

Dog: ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಶ್ವಾನ ದತ್ತು ಸ್ವೀಕಾರ ಮತ್ತು ಉಚಿತ ಲಸಿಕಾ ಶಿಬಿರ ಆಯೋಜಿಸಲಾಗಿತ್ತು. ಇದರಲ್ಲೊ 10 ನಾಯಿಮರಿ ಹಾಗೂ 1 ಬೆಕ್ಕಿನ ಮರಿಗೆ ಹೊಸ ಮನೆ ಸಿಕ್ಕಂತಾಗಿದೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆ ಹಾಗೂ ಜಯನಗರ ಕ್ಯಾನೈನ್ ಸ್ಕ್ವಾಡ್ ಮತ್ತು ಶಿವಶಕ್ತಿ ಅಭಿವೃದ್ಧಿ ಟ್ರಸ್ಟ್‌ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ "ಉಚಿತ ಶ್ವಾನ ದತ್ತು ಸ್ವೀಕಾರ ಮತ್ತು ಲಸಿಕಾ ಶಿಬಿರ"ವನ್ನು ಭಾನುವಾರ ನಡೆಸಲಾಗಿದ್ದು ಯಶಸ್ವಿಯಾಗಿ ಜರುಗಿತು.

ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಈ ಶಿಬಿರದಲ್ಲಿ, ಆಶ್ರಯ ರಹಿತವಾಗಿದ್ದ ಒಟ್ಟು 10 ಶ್ವಾನದ ಮರಿಗಳು ಮತ್ತು 1 ಬೆಕ್ಕಿನ ಮರಿ ಪ್ರಾಣಿ ಪ್ರೇಮಿಗಳ ಸಮ್ಮುಖದಲ್ಲಿ ಸಾರ್ವಜನಿಕರಿಂದ ದತ್ತು ಸ್ವೀಕರಿಸಲ್ಪಟ್ಟು, ಹೊಸ ಮನೆಗಳನ್ನು ಕಂಡುಕೊಂಡವು. ದತ್ತು ಪ್ರಕ್ರಿಯೆಯ ಜೊತೆಗೆ ಶ್ವಾನಗಳ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಲಸಿಕಾ ಕಾರ್ಯಕ್ರಮಕ್ಕೂ ಅಭೂತಪೂರ್ವ ಬೆಂಬಲ ಸಿಕ್ಕಿತು. ಶಿಬಿರದಲ್ಲಿ ಒಟ್ಟು 20 ಶ್ವಾನಗಳಿಗೆ ಕಂಬೈನ್ಡ್ ವ್ಯಾಕ್ಸಿನ್ (Combined Vaccine) ನೀಡಲಾಯಿತು. ರೇಬೀಸ್ ರೋಗ ನಿಯಂತ್ರಣಕ್ಕಾಗಿ ಒಟ್ಟು 30 ಶ್ವಾನಗಳಿಗೆ ಆಂಟಿ-ರೇಬೀಸ್ (Anti-Rabies) ಲಸಿಕೆಯನ್ನು ಯಶಸ್ವಿಯಾಗಿ ಹಾಕಲಾಯಿತು.

Dog

ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ಬದಿಯ ಮತ್ತು ಆಶ್ರಯ ರಹಿತ ಪ್ರಾಣಿಗಳಿಗೆ ಸುರಕ್ಷಿತ ಆಸರೆ ಕಲ್ಪಿಸುವುದು ಹಾಗೂ ಶ್ವಾನಗಳ ಆರೋಗ್ಯ ಕಾಪಾಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಜಯನಗರ ಕ್ಯಾನೈನ್ ಸ್ಕ್ವಾಡ್ ಮತ್ತು ಶಿವಶಕ್ತಿ ಅಭಿವೃದ್ಧಿ ಟ್ರಸ್ಟ್ ನೀಡಿದ ಸಹಕಾರ ಶ್ಲಾಘನೀಯ. ಮುಂದಿನ ದಿನಗಳಲ್ಲೂ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಮುಖ್ಯ ಪಶು ವೈದ್ಯಾಧಿಕಾರಿಯಾದ ಡಾ. ಶ್ರೀನಾಥ್ ತಿಳಿಸಿದ್ದಾರೆ.

ಪ್ರಾಣಿ ಕಲ್ಯಾಣಕ್ಕಾಗಿ ಆಯೋಜಿಸಲಾಗಿದ್ದ ಈ ಶಿಬಿರದಲ್ಲಿ ಸಹಕರಿಸಿದ ಸ್ವಯಂಸೇವಕರು, ವೈದ್ಯಕೀಯ ಸಿಬ್ಬಂದಿ, ಪ್ರಾಣಿ ಪ್ರೇಮಿಗಳು ಹಾಗೂ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಸಿಬ್ಬಂದಿ ಸೇರಿದಂತೆ ಹಲವರು ಇದ್ದರು.

ಮಳೆಗಾಲದಲ್ಲಿ ಎಚ್ಚರಿಕೆಗೆ ಸೂಚನೆ

ಮಳೆಗಾಲದಲ್ಲಿ ಉಂಟಾಗುವ ಪ್ರವಾಹ, ರಸ್ತೆ ಅಕ್ಕ-ಪಕ್ಕದಲ್ಲಿನ ಚರಂಡಿಗಳಲ್ಲಿ ತ್ಯಾಜ್ಯ ಶೇಖರಣೆಯಾಗಿ ಬ್ಲಾಕ್ ಆಗುವುದನ್ನು ತಡೆಯಲು, ನಿಂತ ನೀರನ್ನು ಪಂಪ್ ಸೆಟ್ ಮೂಲಕ ತೆರವುಗೊಳಿಸಲು, ಬಿದ್ದ ಮರ, ರೆಂಬೆ ಕೊಂಬೆ ತೆರವು, ಇನ್ನಿತರ ಸಮಸ್ಯೆಗಳು ತಲೆದೋರಿದಲ್ಲಿ ಅವುಗಳನ್ನು ಕೂಡಲೇ ಪರಿಹರಿಸಲು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಎಲ್ಲ ಇಂಜಿನೀಯರಿಂಗ್ ವಿಭಾಗ ಹಾಗೂ ಉಪ ವಿಭಾಗಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ತೆಗೆದಿದ್ದು, ಅಗತ್ಯ ಸಿಬ್ಬಂದಿಗಳು, ವಾಹನ, ಅಗತ್ಯ ಸಲಕರಣೆಗಳೊಂದಿಗೆ ಮಳೆಗಾಲ ಎದುರಿಸಲು ಕೇಂದ್ರ ನಗರ ಪಾಲಿಕೆಯಲ್ಲಿ ಎಲ್ಲಾ ವಿಭಾಗ ಹಾಗೂ ಉಪ ವಿಭಾಗಗಳಲ್ಲಿ ನಿಯಂತ್ರಣ ಕೊಠಡಿಗಳೊಂದಿಗೆ ತಂಡಗಳು ಸಿದ್ದವಾಗಿವೆ ಎಂದು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+