Namma Metro Traffic Advisory: ವಾಹನ ಸವಾರರಿಗೆ ಈ ರಸ್ತೆಗಳು ನಿರ್ಬಂಧ, ಪರ್ಯಾಯ ಮಾರ್ಗಗಳು

ಬೆಂಗಳೂರು, ಜನವರಿ 27: ಬೆಂಗಳೂರು ನಮ್ಮ ಮೆಟ್ರೋ ಸೆಂಟ್ರಲ್ ಸಿಲ್ಕ್‌ ಬೋರ್ಡ್‌ನಿಂದ ಕೆ.ಆರ್‌.ಪುರಂವರೆಗಿನ ನೀಲಿ ಮಾರ್ಗ ಕಾಮಗಾರಿ ಭರದಿಂದ ಸಾಗಿದೆ. ಈ ಮಾರ್ಗದಲ್ಲಿ ಸೇಲಂ ಸೇತುವೆ (ರೈಲ್ವೆ ಕ್ರಾಸಿಂಗ್) ಮೇಲೆ 65 ಮೀಟರ್ ಸಂಯೋಜಿತ ಗಿರ್ಡರ್ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಹೀಗಾಗಿ ಇಂದಿನಿಂದ ಎರಡು ದಿನ ಕೆಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಿದ್ದು, ಪಯಾರ್ಯ ರಸ್ತೆಗಳನ್ನು ನೀಡಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ವತಿಯಿಂದ ಮಹದೇವಪುರ ಹಾಗೂ ಹೆಚ್.ಎ.ಎಲ್. ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 27.01.2025 ಹಾಗೂ 28.01.2025 ರಂದು ರಾತ್ರಿ 9:00 ರಿಂದ ಬೆಳಗ್ಗೆ 6 ಗಂಟೆ ವರೆಗೆ ರೈನ್‌ಬೋ ಆಸ್ಪತ್ರೆ ಜಂಕ್ಷನ್ ಬಳಿಯ ಕಾಮಗಾರಿ ನಡೆಯಲಿದೆ.

Doddanekundi Traffic Restrictions this Road due Namma Metro Railway Crossing girder Work

ರೈನ್‌ಬೋ ಆಸ್ಪತ್ರೆ ಜಂಕ್ಷನ್ ಬಳಿ ದೊಡೇನಕುಂದಿಯ ಸೇಲಂ ಸೇತುವೆ (ರೈಲ್ವೆ ಕ್ರಾಸಿಂಗ್) ಮೇಲೆ 65 ಮೀಟರ್ ಸಂಯೋಜಿತ ಗಿರ್ಡರ್ ಅನ್ನು ಅಳವಡಿಸುವ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಹೀಗಾಗಿ ಈ ರಸ್ತೆಗಳಲ್ಲಿ ಸಂಚಾರ ಅಡೆತಡೆ ಉಂಟಾಗಲಿದ್ದು, ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ಈ ಕೆಳಕಂಡ ಸಂಚಾರ ಮಾರ್ಪಾಡುಗಳನು ಮಾಡಲಾಗಿದೆ ಎಂದು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಎರಡು ದಿನಗಳಲ್ಲಿ ಕೆ.ಆರ್. ಪುರ ಕಡೆಗೆ ಹೋಗುವ ORR ನ ಒಂದು ಬದಿಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇನ್ನೊಂದು ಬದಿಯಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ವಾಹನ ಸವಾರರು ಗಮನಿಸಬೇಕು ಎಂದು ತಿಳಿಸಿದ್ದಾರೆ.

ಸಂಚಾರ ನಿರ್ಬಂಧಿಸಿದ ರಸ್ತೆಗಳು

ಬೆಂಗಳೂರು ಹೊರವರ್ತುಲ ರಸ್ತೆ ಮಾರತಹಳ್ಳಿ ಕಡೆಯಿಂದ ಟಿನ್‌ ಫ್ಯಾಕ್ಟರಿ ಕಡೆಗೆ ಮೆಟ್ರೋ ಪಿಲ್ಲ‌ರ್ ಸಂಖ್ಯೆ 434 ರಿಂದ ಪಿಲ್ಲರ್ ಸಂಖ್ಯೆ 435 ವರೆಗೆ 200 ಮೀಟರ್ ಎಡಭಾಗದ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

ಸಂಚಾರಕ್ಕೆ ಪರ್ಯಾಯ ಮಾರ್ಗಗಳು

* ಮಾರತ್‌ಹಳ್ಳಿ ಕಡೆಯಿಂದ ಟಿನ್‌ಫ್ಯಾಕ್ಟರಿ ಮತ್ತು ಹೆಬ್ಬಾಳ ಕಡೆಗೆ ಸಂಚರಿಸುವ ಸವಾರ/ಚಾಲಕರು ಮಾರತ್‌ಹಳ್ಳಿ ಬ್ರಿಡ್ಜ್ ಬಳಿ ಎಡ ತಿರುವು ಪಡೆದು ಹೆಚ್‌ಎಎಲ್ ಏರ್‌ಪೋರ್ಟ್ ರಸ್ತೆಯಲ್ಲಿ ಸಂಚರಿಸಿ ಸುರಂಜನ್‌ದಾಸ್ ರಸ್ತೆ ಜಂಕ್ಷನ್‌ನಲ್ಲಿ ಬಲ ತಿರುವು ಪಡೆಯಬೇಕು. ಅಲ್ಲಿಂದ ಎನ್‌ಜಿಇಎಫ್ ಜಂಕ್ಷನ್ ತಲುಪಿ ಬಲ ತಿರುವು ಪಡೆದು ಟಿನ್‌ಫ್ಯಾಕ್ಟರಿ ಮತ್ತು ಹೆಬ್ಬಾಳ ಕಡೆಗೆ ಸಂಚರಿಸಬಹುದು.

* ಟಿನ್‌ ಫ್ಯಾಕ್ಟರಿ ಕಡೆಯಿಂದ ಮಾರತ್‌ಹಳ್ಳಿ ಕಡೆಗೆ ಸಂಚರಿಸುವ ವಾಹನ ಚಾಲಕ/ಸವಾರರು ಕೆ.ಆ‌ರ್.ಪುರ ರೈಲು ನಿಲ್ದಾಣದ ಬಳಿ ಎಡ ತಿರುವು ಪಡೆದು ಐಟಿಪಿಎಲ್ ರಸ್ತೆಯಲ್ಲಿ ಸಂಚರಿಸಿ ಹೂಡಿ ಜಂಕ್ಷನ್ ಬಳಿ ಬಲ ತಿರುವು ಪಡೆದು ಕುಂದಲಹಳ್ಳಿ ಮೂಲಕ ಮಾರತ್‌ ಹಳ್ಳಿ ಕಡೆಗೆ ಸಂಚರಿಸುವಂತೆ ಬೆಂಗಳೂರು ಸಂಚಾರಿ ಪೊಲೀಸರು ಪ್ರಕಟಣೆ ಮೂಲಕ ಕೋರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+