ಪ್ರಾಚೀನ ವಸ್ತುಗಳ ಕಳ್ಳಸಾಗಣೆ ತಡೆಯುವುದು ಹೇಗೆ?
ಬೆಂಗಳೂರು, ಏಪ್ರಿಲ್ 23 : ಭಾರತದ ಅನೇಕ ಪ್ರಾಚೀನ ವಸ್ತುಗಳು, ಭೂಪಟ, ವಿಗ್ರಹಗಳು ವಿದೇಶಕ್ಕೆ ಕಳ್ಳಸಾಗಣೆಯಾಗಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅವುಗಳಿಗೆ ಕೋಟ್ಯಾಂತರ ರೂ. ಬೆಲೆ ಇದೆ. ಈ ವಸ್ತುಗಳನ್ನು ವಾಪಸ್ ತುರುವುದು ಹೇಗೆ?
ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು India Pride Project ಸಂಸ್ಥೆ ಬೆಂಗಳೂರಿನಲ್ಲಿ ಏ.24ರ ಭಾನುವಾರ ಈ ಕಾರ್ಯಾಗಾರ ಹಮ್ಮಿಕೊಂಡಿದೆ. ವಿದೇಶಕ್ಕೆ ಕಳ್ಳಸಾಗಣೆ ಆಗಿರುವ ಪ್ರಾಚೀನ ವಸ್ತುಗಳು, ವಿಗ್ರಹ, ಬೆಲೆಬಾಳುವ ವಸ್ತುಗಳನ್ನು ವಾಪಸ್ ತರುವುದು ಈ ಸಂಸ್ಥೆಯ ಗುರಿ. [ಪುರಾತನ ವಿಗ್ರಹ ಕಳ್ಳಸಾಗಣೆ ಜಾಲ ಪತ್ತೆ]

ಭಾನುವಾರ India Pride Project ಸಂಸ್ಥೆ ಬೆಂಗಳೂರಿನ ಭಾರತೀಯ ವಿದ್ಯಾಭವನ (ಬೆಳಗ್ಗೆ 10.30) ಮತ್ತು ನ್ಯೂ ಹಾರೈಜಾನ್ ಕಾಲೇಜಿನಲ್ಲಿ (ಸಂಜೆ 4.30) ಕ್ಕೆ ಕಾರ್ಯಾಗಾರ ಹಮ್ಮಿಕೊಂಡಿದೆ. ದೇಶದಿಂದ ಅಕ್ರಮವಾಗಿ ಸಾಗಣೆ ಆಗಿರುವ ವಸ್ತುಗಳ ಬಗ್ಗೆ ತಿಳಿದುಕೊಳ್ಳಲು ಕಾರ್ಯಾಗಾರದಲ್ಲಿ ಭಾಗವಹಿಸಬಹುದು. [India Pride Project ವೆಬ್ ಸೈಟ್]
ಈ ಕಾರ್ಯಾಗಾರದಲ್ಲಿ ಭಾರತದಿಂದ ಸಾಗಣೆಯಾದ ವಸ್ತುಗಳು, ಅವು ಈಗ ಎಲ್ಲಿವೆ? ಅವುಗಳನ್ನು ಪತ್ತೆ ಹಚ್ಚುವುದು ಹೇಗೆ? ಮುಂತಾದ ವಿಚಾರಗಳ ಕುರಿತು ಚರ್ಚೆ ನಡೆಸಲಾಗುತ್ತದೆ. ಈ ಯೋಜನೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಹೇಗೆ ಎಂದು ಯೋಜನೆ ರೂಪಿಸಲಾಗುತ್ತದೆ. [ಸಿಸಿಬಿ ಪೊಲೀಸರ ಬಲಗೆ ಬಿದ್ದ ವಿಗ್ರಹ ಚೋರರು]












Click it and Unblock the Notifications