ಬೆಂಗಳೂರಿಗೆ ಸ್ಕೈಡೆಕ್ ಯೋಜನೆ ತರುವ ಚಿಂತನೆ ನಡೆಸಿದ ಡಿಕೆ ಶಿವಕುಮಾರ್
ಬೆಂಗಳೂರು, ಅಕ್ಟೋಬರ್ 18: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೆಂಗಳೂರಿಗೆ ನಗರಕ್ಕೆ ಮತ್ತೊಂದು ದೊಡ್ಡ ಬಜೆಟ್‌ನ ಬೆಂಗಳೂರು ಸ್ಕೈಡೆಕ್' ಯೋಜನೆ ತರಲು ಚಿಂತನೆ ನಡೆಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು 190 ಕಿಮೀ ಬೃಹತ್ ಸುರಂಗ ರಸ್ತೆ ಯೋಜನೆಗೆ ಬಗ್ಗೆ ಮಾಹಿತಿ ನೀಡಿದ ಬಳಿಕ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್, ಬೆಂಗಳೂರು ಸ್ಕೈಡೆಕ್ ಯೋಜನೆಯ ಕಾರ್ಯಸಾಧ್ಯತಾ ಅಧ್ಯಯನ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದು ಅನುಷ್ಠಾನಗೊಂಡರೆ ದೇಶದಲ್ಲೇ ಅತ್ಯುನ್ನತ ವೀಕ್ಷಣಾ ಡೆಕ್ ಆಗಲಿದೆ.

ಬೆಂಗಳೂರಿನಲ್ಲಿ ವಿಶ್ವ ವಿನ್ಯಾಸ ಸಂಸ್ಥೆ (WDO) ಸಹಯೋಗದೊಂದಿಗೆ ಆಸ್ಟ್ರಿಯಾದ COOP HIMMELB(L)AU (ವಾಸ್ತುಶಿಲ್ಪ, ನಗರ ಯೋಜನೆ, ವಿನ್ಯಾಸ ಮತ್ತು ಕಲಾ ಸಂಸ್ಥೆ) ಪ್ರಸ್ತಾವಿತ ಯೋಜನೆ ಕುರಿತು ಪರಿಶೀಲಿಸಿದ್ದಾರೆ. ಯೋಜನೆಗೆ ಸುಮಾರು 10 ಎಕರೆ ಜಮೀನು ಅಗತ್ಯವಿದೆ. ಯೋಜನೆಗೆ ನಗರದಲ್ಲಿ ಜಾಗ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸರ್ಕಾರದ ಬ್ರಾಂಡ್ ಬೆಂಗಳೂರು ಪರಿಕಲ್ಪನೆಯ ಭಾಗವಾಗಿರುವ ಅನೇಕ ಆರ್ಕಿಟೆಕ್‌ಗಳು ಮತ್ತು ತಜ್ಞರಿಗೆ ಈ ಯೋಜನೆಯ ಬಗ್ಗೆ ತಿಳಿದಿಲ್ಲ. ಈ ಯೋಜನೆಯು ಪ್ರವಾಸಿ ಆಕರ್ಷಣೆಯಾಗಿದೆ. ಕಾರ್ಯಸಾಧ್ಯತೆಯ ವರದಿ ಸಿದ್ಧವಾದಾಗ ಮಾತ್ರ, ಚಲನಶೀಲತೆ ಮತ್ತು ಇತರ ಅಂಶಗಳ ಮೇಲೆ ಅದರ ಪರಿಣಾಮವು ತಿಳಿಯುತ್ತದೆ. ಈಗ ಯೋಜನೆಯ ಬಗ್ಗೆ ಪ್ರತಿಕ್ರಿಯಿಸಲು ಇದು ಸಂಪೂರ್ಣ ಪಕ್ವವಾಗಿಲ್ಲ ಎಂದು ಐಐಎಸ್‌ಸಿ ಸುಸ್ಥಿರ ಸಾರಿಗೆ ಪ್ರಯೋಗಾಲಯದ ಸಂಚಾಲಕ ಆಶಿಶ್ ವರ್ಮಾ ಹೇಳಿದ್ದಾರೆ.
ಸಚಿವರು ಶಾಶ್ವತ ಪರಂಪರೆಯನ್ನು ಬಿಡಲು ಬಯಸುತ್ತಾರೆ. ಆದ್ದರಿಂದ, ಅವರು ಸುರಂಗ ರಸ್ತೆಗಳು ಮತ್ತು ಈಗ ಸ್ಕೈಡೆಕ್ ಯೋಜನೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಬೆಂಗಳೂರಿನ ಪ್ರಮುಖ ವಾಸ್ತುಶಿಲ್ಪಿಯೊಬ್ಬರು ಹೇಳಿದ್ದಾರೆ.
ಯೋಜನೆಯು ಆಕರ್ಷಕವಾಗಿ ಕಾಣುತ್ತದೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ನಾವು ಅಂತಹ ಯೋಜನೆಗಳನ್ನು ನೋಡಿದ್ದೇವೆ. ಬೆಂಗಳೂರಿನಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣ ಇರುವುದರಿಂದ ಪೂರ್ವ ವಲಯದಲ್ಲಿ ಮಾಡಲು ಸಾಧ್ಯವಿಲ್ಲ. ಅದೇ ರೀತಿ, ಬೆಂಗಳೂರು ಮತ್ತು ಉತ್ತರ ಬೆಂಗಳೂರಿನ ಮಧ್ಯ ಭಾಗವು ಜಕ್ಕೂರ್ ಏರೋಡ್ರೋಮ್, ಯಲಹಂಕ ಏರ್‌ಫೋರ್ಸ್ ಸ್ಟೇಷನ್ ಮತ್ತು ಕೆಂಪೇಗೌಡ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (ಕೆಐಎಎಲ್) ನೊಂದಿಗೆ ಹಾರಾಟದ ಚಲನೆಯನ್ನು ಹೊಂದಿದೆ. ಯಾವುದೇ ಎತ್ತರದ ರಚನೆಯು (160 ಮೀಟರ್‌ಗಿಂತ ಹೆಚ್ಚು) ವಿಮಾನ ಕಾರ್ಯಾಚರಣೆಗಳಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ. ನಗರದ ದಕ್ಷಿಣ ಅಥವಾ ಪಶ್ಚಿಮ ಭಾಗ ಮಾತ್ರ ಆಯ್ಕೆಯಾಗಿದೆ ಎಂದು ವಾಸ್ತುಶಿಲ್ಪಿ ಹೇಳಿದರು.
ಇಂತಹ ಬೃಹತ್ ಯೋಜನೆಗಳಿಗೆ ಮುಂದಾಗುವ ಮುನ್ನ ಬೆಂಗಳೂರಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ನಗರ ಮೂಲದ ನಗರ ವಿನ್ಯಾಸಕಾರರೊಬ್ಬರು ಹೇಳಿದ್ದಾರೆ.












Click it and Unblock the Notifications