Summer Camp: ಮಕ್ಕಳಿಗಾಗಿ ಇತಿಹಾಸದ ವಿಸ್ಮಯ ಲೋಕ: 'ಅನ್ವೇಷಣ 2026'ರಲ್ಲಿ ಪರಂಪರೆಯ ಅನಾವರಣ

ಬೆಂಗಳೂರು: ಪುಟಾಣಿಗಳ ಜ್ಞಾನದಾಹವನ್ನು ತಣಿಸಲು ಮತ್ತು ನಮ್ಮ ಭವ್ಯ ಇತಿಹಾಸದ ಬಗ್ಗೆ ಕುತೂಹಲ ಮೂಡಿಸಲು ಪರಮ್ ಹಿಸ್ಟರಿ ಸೆಂಟರ್ ಅದ್ಭುತ ಬೇಸಿಗೆ ಶಿಬಿರವನ್ನು ಆಯೋಜಿಸಿದೆ. ಯುವಕ ಸಂಘದ ಸಹಯೋಗದೊಂದಿಗೆ ನಡೆಯುತ್ತಿರುವ 'ಅನ್ವೇಷಣ 2026' ಎಂಬ ಈ ವಿಶಿಷ್ಟ ಕಾರ್ಯಕ್ರಮವು ಮೇ 11 ರಿಂದ ಮೇ 17 ರವರೆಗೆ ಜಯನಗರದ 4ನೇ ಬ್ಲಾಕ್‌ನಲ್ಲಿರುವ 'ಯುವಪಥ'ದಲ್ಲಿ ನಡೆಯಲಿದೆ.

ವಿಭಿನ್ನ ಮತ್ತು ಆಕರ್ಷಕ ಕಾರ್ಯಚಟುವಟಿಕೆ, ರೋಚಕ ಕಥೆಗಳು ಹಾಗೂ ನೈಜ ಅನುಭವದ ಮಾಧ್ಯಮಗಳ ಮೂಲಕ ಮಕ್ಕಳನ್ನು ನಮ್ಮ ಇತಿಹಾಸದ ಕಾಲಗರ್ಭಕ್ಕೆ ಕರೆದೊಯ್ಯುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ. ಬರೀ ಪುಸ್ತಕದ ಪಾಠಗಳಿಗೆ ಸೀಮಿತವಾಗದೆ, ಇತಿಹಾಸವನ್ನು ಸ್ಪರ್ಶಿಸಿ, ಅನುಭವಿಸಿ ಕಲಿಯುವ ವಿನೂತನ ಮಾದರಿಯನ್ನು ಇಲ್ಲಿ ರೂಪಿಸಲಾಗಿದೆ.

Anveshana 2026

ಇತಿಹಾಸದೊಂದಿಗೆ ಮುಖಾಮುಖಿ: ಇಲ್ಲಿದೆ ಹತ್ತು ಹಲವು ವಿಶೇಷತೆ

ಈ ಬಾರಿ ಶಿಬಿರದಲ್ಲಿ ಇತಿಹಾಸದ ಗಂಭೀರ ವಿಷಯಗಳನ್ನು ಮಕ್ಕಳಿಗೆ ಮೋಜಿನ ರೂಪದಲ್ಲಿ ಹೇಳಿಕೊಡಲು ಈ ಕೆಳಗಿನ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿದೆ:

1. ಪುರಾತತ್ವ ಉತ್ಖನನ (Archaeology Simulation): ಭೂಮಿಯ ಅಡಿಯಲ್ಲಿ ಅಡಗಿರುವ ಇತಿಹಾಸವನ್ನು ಹೊರತೆಗೆಯುವ ನೈಜ ಅನುಭವ.

2. ಪ್ರಾಚೀನ ಕಲೆ ಮತ್ತು ಕರಕುಶಲ: ಹಳೆಯ ಕಾಲದ ಆಭರಣಗಳ ತಯಾರಿಕೆ ಮತ್ತು ನೈಜವಾಗಿ ಮಣ್ಣಿನಲ್ಲಿ ಮಡಿಕೆ ಮಾಡುವ ಕಲೆ.

3. ಕಾಲಯಾನದ ಕಥೆಗಳು: ನಮ್ಮ ನಾಡಿನ ವೀರರ ದಂತಕಥೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಕಥಾ ಸೆಷನ್‌ಗಳು.

4. ಡಿಜಿಟಲ್ ಪರಿಶೋಧನೆ: ಆಧುನಿಕ ತಂತ್ರಜ್ಞಾನದ ಮೂಲಕ ಐತಿಹಾಸಿಕ ತಾಣಗಳ ವರ್ಚುವಲ್ ಭೇಟಿ.

5. ಮೋಜಿನ ಆಟಗಳು: ಇತಿಹಾಸ ಪ್ರಜ್ಞೆ ಮೂಡಿಸುವ ಒಳಾಂಗಣ ಕ್ರೀಡೆಗಳು ಹಾಗೂ ಸೃಜನಶೀಲ ಕಲೆಗಳ ಬಗ್ಗೆ ಇಲ್ಲಿ ಕಲಿಯಬಹುದಾಗಿದೆ.

ಶಿಬಿರದ ಸಮಯ ಮತ್ತು ವಯೋಮಿತಿ

ಈ ಅನ್ವೇಷಣ ಶಿಬಿರವು ಪ್ರತಿದಿನ ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:20 ರವರೆಗೆ ಜರುಗಲಿದ್ದು, 6 ರಿಂದ 16 ವರ್ಷ ವಯಸ್ಸಿನ ಮಕ್ಕಳು ಈ ಜ್ಞಾನಯಜ್ಞದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಮಕ್ಕಳಿಗೆ ತಮ್ಮ ಬೇರುಗಳ ಪರಿಚಯ ಮಾಡಿಕೊಟ್ಟು ಅತ್ಯುತ್ತಮ ಸಾಂಸ್ಕೃತಿಕ ಬುನಾದಿ ಹಾಕಲು ಪೋಷಕರಿಗೆ ಇದೊಂದು ಸುವರ್ಣಾವಕಾಶವಾಗಿದೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ

ನಿಮ್ಮ ಮಕ್ಕಳ ಬೇಸಿಗೆಯ ರಜೆಯನ್ನು ಕೇವಲ ಮೊಬೈಲ್, ಟಿವಿಗಳಿಗೆ ಸೀಮಿತಗೊಳಿಸದೆ, ಇತಿಹಾಸದ ಅರಿವಿನೊಂದಿಗೆ ಅರ್ಥಪೂರ್ಣವಾಗಿಸಲು ಇಂದೇ 'ಅನ್ವೇಷಣ 2026'ಕ್ಕೆ ಹೆಸರನ್ನು ನೋಂದಾಯಿಸಿ. ಆಸಕ್ತ ಪೋಷಕರು ಹೆಚ್ಚಿನ ಮಾಹಿತಿಗಾಗಿ 9035034728 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು ಅಥವಾ [email protected] ಗೆ ಇಮೇಲ್ ಮಾಡಬಹುದು. ಈ ಶಿಬಿರವು ಜಯನಗರ 4ನೇ ಬ್ಲಾಕ್‌ನ 11ನೇ ಮೇನ್, 31ನೇ ಕ್ರಾಸ್‌ನಲ್ಲಿರುವ 'ಯುವಪಥ' ಕಟ್ಟಡದಲ್ಲಿ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+