ಕೊಯಮತ್ತೂರು-ಬೆಂಗಳೂರು ನಡುವೆ ಜೂ.10 ರಿಂದ ನೇರ ರೈಲು

ಬೆಂಗಳೂರು, ಮೇ 29 : ಬೆಂಗಳೂರು-ಕೊಯಮತ್ತೂರು ನಡುವೆ ನೇರ ರೈಲು ಸೇವೆ ಜೂನ್ 10 ರಿಂದ ಆರಂಭವಾಗಲಿದೆ. ವೈ-ಫೈ ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಈ ರೈಲು ಹೊಂದಿರುತ್ತದೆ.

ನೈಋತ್ಯ ರೈಲ್ವೆ ಬೆಂಗಳೂರು-ಕೊಯಮತ್ತೂರು ನಡುವಿನ ರೈಲು ಸೇವೆ ಆರಂಭಕ್ಕೆ ದಿನಾಂಕ ನಿಗದಿ ಮಾಡಿದೆ. ಈ ಮಾರ್ಗದಲ್ಲಿ ನೇರ ರೈಲು ಆರಂಭಿಸಬೇಕು ಎಂಬುದು ಬಹುದಿನದ ಬೇಡಿಕೆಯಾಗಿತ್ತು.

'ಉದಯ್ ಎಕ್ಸ್‌ಪ್ರೆಸ್' ಹೆಸರಿನ ಡಬಲ್ ಡೆಕ್ಕರ್ ಹಮಾನಿಯಂತ್ರಿತ ರೈಲು ಈ ಮಾರ್ಗದಲ್ಲಿ ಸಂಚಾರ ನಡೆಸಲಿದೆ. 2016ರಲ್ಲಿ ಈ ಮಾರ್ಗದಲ್ಲಿ ನೇರ ರೈಲು ಆರಂಭಿಸುವುದಾಗಿ ಘೋಷಣೆ ಮಾಡಲಾಗಿತ್ತು.

Direct day train between Bengaluru-Coimbatore from June 10

ಪೆರೆಂಬೂರಿನ ರೈಲ್ವೆ ಕಾರ್ಖನೆಯಲ್ಲಿ ಈ ರೈಲಿನ ಬೋಗಿಗಳನ್ನು ನಿರ್ಮಾಣ ಮಾಡಲಾಗಿದೆ. ಕೊಯಮತ್ತೂರು ರೈಲ್ವೆ ನಿಲ್ದಾಣಕ್ಕೆ ಈಗಾಗಲೇ ಬೋಗಿಗಳನ್ನು ತರಲಾಗಿದೆ.

ವೈ-ಫೈ ಸೌಲಭ್ಯ, ಜಿಪಿಎಸ್ ಆಧಾರಿತ ಪ್ರಯಾಣಿಕ ಮಾಹಿತಿ ಹಂಚಿಕೆ, ವಿಮಾನದ ತರಹದ ಎಲ್‌ಐಡಿ ಪರದೆ, ನಾಲ್ಕು ಕೋಚ್‌ಗಳ ಪ್ಯಾಂಟ್ರಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಈ ರೈಲು ಒಳಗೊಂಡಿದೆ.

ವೇಳಾಪಟ್ಟಿ : ರೈಲು ನಂ 22666 ಕೊಯಮತ್ತೂರಿನಿಂದ 5.45ಕ್ಕೆ ಹೊರಡಲಿದ್ದು ಬೆಂಗಳೂರಿಗೆ 12.40ಕ್ಕೆ ತಲುಪಲಿದೆ. ರೈಲು ನಂಬರ್ 22777 ಬೆಂಗಳೂರಿನಿಂದ 2.15ಕ್ಕೆ ಹೊರಡಲಿದ್ದು, ರಾತ್ರಿ 9ಕ್ಕೆ ಕೊಯಮತ್ತೂರಿಗೆ ತಲುಪಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+