ವಿಶಿಷ್ಟ ನಟ, ಕ್ರಿಕೆಟರ್ ಧ್ರುವ ಶರ್ಮ ಇನ್ನಿಲ್ಲ

ಬೆಂಗಳೂರು, ಆಗಸ್ಟ್ 01:ಕಿವುಡು- ಮೂಗ ಸಮಸ್ಯೆಯಿದ್ದರೂ ಎಲ್ಲರಂತೆ ಚಿತ್ರರಂಗದಲ್ಲಿ ನಟನೆ ಮಾಡಿ, ಹಾಡಿ ಕುಣಿದು ಇತಿಹಾಸ ನಿರ್ಮಿಸಿದ್ದ ನಟ ಧ್ರುವ್ ಶರ್ಮ ಇನ್ನಿಲ್ಲ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬಹು ಅಂಗಾಂಗ ವೈಫಲ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆ.

ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ನಲ್ಲಿ ಕರ್ನಾಟಕ ಬುಲ್ಡೋಜರ್ ಪರ ಆಡುತ್ತಿದ್ದ ಧ್ರುವ್ ಅವರು ಅತ್ಯಂತ ಜನಪ್ರಿಯ ಆಟಗಾರರಾಗಿದ್ದರು.

Dhruv Sharma


ಧ್ರುವ್ ಅವರ ಹಠಾತ್ ಸಾವಿಗೆ ಚಿತ್ರರಂಗದ ಅನೇಕ ಗಣ್ಯರು, ಸ್ನೇಹಿತರು ಕಂಬನಿ ಮಿಡಿದಿದ್ದಾರೆ. 2007ರಲ್ಲಿ ತಮ್ಮ 25ನೇ ವರ್ಷ ವಯಸ್ಸಿನಲ್ಲಿ ಸ್ನೇಹಾಂಜಲಿ ಎಂಬ ಚಲನಚಿತ್ರದಲ್ಲಿ ನಾಯಕರಾಗಿ ನಟಿಸಿ ಎಲ್ಲರ ಹುಬ್ಬೇರುವಂತೆ ಮಾಡಿದರು.

2005ರಲ್ಲಿ ಕ್ರಿಕೆಟ್ ವಿಶ್ವಕಪ್ ಆಡಿದ ಭಾರತ ತಂಡದ ಪರ ಆಡಿದ್ದ ಧ್ರುವ್ ಅವರಿಗೆ ನಟನೆಯತ್ತ ಒಲವಿತ್ತು. ಧ್ರುವ್ ಅವರ ತಂದೆ, ಉದ್ಯಮಿ ಕಮ್ ನಟ ಸುರೇಶ್ ಶರ್ಮ ಅವರು ತಮ್ಮ ಮಗನ ಕನಸು ನನಸಾಗಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+