ಉಡ ತಿಂದ್ರೆ ಲೈಂಗಿಕ ಶಕ್ತಿ ಹೆಚ್ಚುತ್ತೆ ಎಂದು ಪ್ರಚಾರ, ಮಾರಾಟ: ಅಸಲಿಯತ್ತೇನು?

ಬೆಂಗಳೂರು, ಡಿಸೆಂಬರ್ 12: ಉಡ ತಿಂದರೆ ಲೈಂಗಿಕ ಶಕ್ತಿ ಹೆಚ್ಚಾಗುತ್ತೆ ಎಂದು ಪ್ರಚಾರ ಮಾಡುತ್ತ ರಾಜಸ್ಥಾನದಿಂದ ಉಡ ತಂದು ಮಾರುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕರಣ್, ರಮೇಶ್, ಶರತ್ ,ಐವತ್ತು ರೆಡ್ಡಿ ಹಾಗೂ ಮಲೈ ರಾಜನನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 10 ಉಡಗಳನ್ನು ಜಪ್ತಿ ಮಾಡಲಾಗಿದೆ. ನಗರದ ಸೇಂಟ್ ಜಾನ್ಸ್‌ ಆಸ್ಪತ್ರೆ ಸಮೀಪ ಚೀಲದಲ್ಲಿ ಉಡವನ್ನು ತುಂಬಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು.

ಬಳಿಕ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರನ್ನು ಬಂಧಿಸಲಾಗಿದೆ. ರಾಜಸ್ಥಾನದಿಂದ ಉಡಗಳನ್ನು ತಂದಿದ್ದು, ನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು, ಸಾಫ್ಟ್‌ವೇರ್‌ ಉದ್ಯೋಗಿಗಳು ಸೇರಿ ಇತರರಿಗೆ ಮಾರಾಟ ಮಾಡುತ್ತಿದ್ದರು.

Detention Of Monitor Lizard Vendors

ಮೊದಲು ನಾಲ್ಕೈದು ಉಡಗಳನ್ನು ತಂದು ಮಾರಾಟ ಮಾಡಿದ್ದರು, ಬಳಿಕ ಜನರನ್ನು ಸುಲಭವಾಗಿ ಮರುಳು ಮಾಡಬಹುದು ಎಂದು ತಿಳಿದು ಮತ್ತಷ್ಟು ಉಡಗಳನ್ನು ತಂದು ಮಾರಾಟ ಮಾಡಲು ಆರಂಭಿಸಿದ್ದರು.

ಹಣವನ್ನು ಯಾವ್ಯಾವ ವಿಧದಿಂದ ಮಾಡಬಹುದು ಎಂದು ಆಲೋಚಿಸುತ್ತಿರುತ್ತಾರೆ. ಹಾಗೆಯೇ ಕೆಲವರು ತಪ್ಪು ದಾರಿಯಲ್ಲಿ ಹಣ ಸಂಪಾದನೆ ಮಾಡಲು ಮುಂದಾಗುತ್ತಾರೆ. ಅದಕ್ಕೆ ಶ್ರೀಮಂತರು, ಉದ್ಯಮಿಗಳು ಬಲಿಯಾಗುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+