Dengue cases: ರಾಜ್ಯದಲ್ಲಿ 10,000 ದಾಟಿದ ಡೆಂಗ್ಯೂ ಪ್ರಕರಣಗಳ ಸಂಖ್ಯೆ
ಬೆಂಗಳೂರು, ಜುಲೈ. 17: ರಾಜ್ಯದಲ್ಲಿ ಈ ವರ್ಷ ಇಲ್ಲಿಯವರೆಗೆ ಡೆಂಗ್ಯೂ ಪ್ರಕರಣಗಳು 10,000 ಗಡಿ ದಾಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಂಗಳವಾರ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 487 ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಜನವರಿಯಿಂದ ಇಲ್ಲಿಯವರೆಗೆ ಒಟ್ಟು 10,449 ಕ್ಕೆ ತಲುಪಿದೆ.
ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 358 ಕ್ಕೆ ತಲುಪಿದೆ. ಅವರಲ್ಲಿ 128 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಿಂದ 3,770 ಪ್ರಕರಣಗಳು ವರದಿಯಾಗಿದವೆ. ನಂತರ ಚಿಕ್ಕಮಂಗಳೂರು ಜಿಲ್ಲೆಯಲ್ಲಿ 621 ಮತ್ತು ಮೈಸೂರು ಜಿಲ್ಲೆಯಲ್ಲಿ 562 ಕೇಸ್‌ಗಳು ವರದಿಯಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 141 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಡ್ಯ ಮತ್ತು ತುಮಕೂರಿನಿಂದ ತಲಾ 23 ಮತ್ತು ಧಾರವಾಡದಲ್ಲಿ 19 ಪ್ರಕರಣಗಳು ದಾಖಲಾಗಿವೆ. ಮಂಗಳವಾರ 4,572 ಪರೀಕ್ಷೆಗಳನ್ನು ನಡೆಸಲಾಗಿದ್ದು, ಒಟ್ಟು ಪರೀಕ್ಷೆಗಳ ಏರಿಕೆಯನ್ನು 78,489 ಕ್ಕೆ ತೆಗೆದುಕೊಂಡು ಹೋಗಿದೆ.
ಬೆಂಗಳೂರಿನಲ್ಲಿ ಒಂದೇ ದಿನ 2,724 ಪರೀಕ್ಷೆಗಳನ್ನು ನಡೆಸಲಾಗಿದೆ. ಹೀಗಾಗಿ ಬಿಬಿಎಂಪಿ ಮೊದಲ ಸ್ಥಾನದಲ್ಲಿದೆ. 244 ಪರೀಕ್ಷೆಗಳೊಂದಿಗೆ ಹಾಸನ ಎರಡನೇ ಸ್ಥಾನ. 208 ಪರೀಕ್ಷೆಗಳೊಂದಿಗೆ ಚಿಕ್ಕಮಗಳೂರು ಮತ್ತು 199 ಪರೀಕ್ಷೆಗಳೊಂದಿಗೆ ಉಡುಪಿ ನಂತರದ ಸ್ಥಾನಗಳಲ್ಲಿವೆ. ಇಲ್ಲಿಯವರೆಗೆ, ರಾಜ್ಯದಲ್ಲಿ ಎಂಟು ಡೆಂಗ್ಯೂ ಸಾವುಗಳು ದಾಖಲಾಗಿವೆ ಮತ್ತು ಸಾವಿನ ಪ್ರಮಾಣವು 0.07% ರಷ್ಟಿದೆ.
ಶಂಕಿತ ಡೆಂಗ್ಯೂಗೆ ಹಾಸನದಲ್ಲಿ 9 ವರ್ಷದ ಮಗು ಬಲಿ
ಶಂಕಿತ ಡೆಂಗೆಯಿಂದ ಒಂಬತ್ತು ವರ್ಷದ ಬಾಲಕ ಸೋಮವಾರ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದ ನಿವಾಸಿ ರಾಜೇಶ್ ಅವರನ್ನು ಅರಸೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಹಿಮ್ಸ್ ಗೆ ರವಾನಿಸಲಾಗಿತ್ತು. ಹಾಸನದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ.











Click it and Unblock the Notifications