Dengue: ಬೆಂಗಳೂರಿನಲ್ಲಿ ಸಾವಿರ ದಾಟಿದ ಡೆಂಗ್ಯೂ ಕೇಸ್: ಆಯುಕ್ತರಿಗೂ ಕಚ್ಚಿದ ಡೆಡ್ಲಿ ಸೊಳ್ಳೆ

ಬೆಂಗಳೂರು ಜೂನ್ 25: ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದ್ದು ಆತಂಕ ಹೆಚ್ಚಾಗಿದೆ. ನಗರದಲ್ಲಿ ಕಳೆದ ಆರು ತಿಂಗಳಲ್ಲಿ 2,447 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಕಳೆದ ಮೂರು ವಾರಗಳಲ್ಲಿ ಡೆಂಗ್ಯೂ ಪ್ರಕರಣಗಳು 1,036ಕ್ಕೆ ತಲುಪಿದೆ.

ಹೌದು... ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳು 1,000 ಗಡಿ ದಾಟಿದ್ದು, ಕಳೆದ ಮೂರು ವಾರಗಳಲ್ಲಿ 1,036 ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ಜೂನ್‌ನ ಅಂಕಿಅಂಶಗಳಿಗೆ ಹೋಲಿಸಿದರೆ ಇದು ಎರಡು ಪಟ್ಟು ಹೆಚ್ಚಳವಾಗಿದೆ. ಈ ನಡುವೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೂ ಡೆಂಗ್ಯೂ ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ.

Dengue cases crossed 1000 in Bengaluru BBMP Commissioner was also bitten by mosquito

ಗಿರಿನಾಥ್ ಅವರು ಇತ್ತೀಚೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭಾಗಿಯಾಗಿದ್ದ ಫ್ರೀಡಂ ಪಾರ್ಕ್‌ನಲ್ಲಿ ಬಹು ಹಂತದ ಕಾರ್ ಪಾರ್ಕಿಂಗ್ ಸೌಲಭ್ಯದ ಉದ್ಘಾಟನೆಯ ಮೇಲ್ವೀಚಾರಣೆಯನ್ನು ವಹಿಸಿಕೊಂಡಿದ್ದರು. ಕರಡು ಜಾಹೀರಾತು ನೀತಿಯ ಪರಿಶೀಲನೆಯಲ್ಲೂ ಅವರು ಭಾಗವಹಿಸಿದ್ದರು. ಪಾರ್ಕ್‌ನಲ್ಲಿ ಡೆಂಗ್ಯೂ ಸೊಳ್ಳೆ ಕಚ್ಚಿರಬಹುದು ಎನ್ನಲಾಗುತ್ತಿದೆ.

ಗಿರಿನಾಥ್ ಅವರು ಶುಕ್ರವಾರದಿಂದ ಜ್ವರ ಹಾಗೂ ತಲೆ ನೋವು ಅನುಭವಿಸುತ್ತಿದ್ದರು. ಇದರಿಂದ ಅವರು ಶನಿವಾರ ಡೆಂಗ್ಯೂ ಪರೀಕ್ಷೆಗೆ ಒಳಗಾಗಿದ್ದರು. ಅವರನ್ನು ಪರೀಕ್ಷೆ ಒಳಪಡಿಸಿದಾಗ ಡೆಂಗ್ಯೂ ಇರುವುದು ದೃಢಪಟ್ಟಿದೆ. ಗಿರಿನಾಥ್ ಸ್ಥಿರವಾಗಿದ್ದಾರೆ ಮತ್ತು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಅವರು ಮಂಗಳವಾರ ಕೆಲಸಕ್ಕೆ ಹಾಜರಾಗುವ ಸಾಧ್ಯತೆ ಇದೆ.

ಬಿಬಿಎಂಪಿ ನಗರದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಅಗತ್ಯ ಕ್ರಮ ಕೈಗೊಂಡಿದೆ. ಡೆಂಗ್ಯೂ ನಿಯಂತ್ರಣ ಕ್ರಮಗಳಾದ ಜಾಗೃತಿ ಮೂಡಿಸುವುದು, ಮನೆ-ಮನೆ ಸಮೀಕ್ಷೆ, ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಲು ಸ್ಪ್ರೇ ಮತ್ತು ಫಾಗಿಂಗ್‌ನಂತಹ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಇದು ಪರಿಣಾಮಕಾರಿಯಾಗಿ ಆಗುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿದೆ.

ನಗರದಲ್ಲಿ ಕಳೆದ ಆರು ತಿಂಗಳಲ್ಲಿ 2,447 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಈಗ ಅದರ ಸಂಖ್ಯೆ 1,036 ಕ್ಕೆ ತಲುಪಿದೆ. ನಗರದ ಮಹದೇವಪುರ ಮತ್ತು ಪೂರ್ವ ವಲಯಗಳಲ್ಲಿ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.

ಡೆಂಗ್ಯೂ ಜ್ವರದ ಲಕ್ಷಣಗಳೇನು?

* ತಲೆನೋವು

* ಜಂಟಿ, ಸ್ನಾಯು ಅಥವಾ ಮೂಳೆ ಅಸ್ವಸ್ಥತೆ

* ವಾಕರಿಕೆ

* ವಾಂತಿ

* ಕಣ್ಣುಗಳ ಹಿಂಭಾಗ ನೋವು ಉಂಟು ಮಾಡುತ್ತದೆ

* ವಿಸ್ತರಿಸಿದ ಗ್ರಂಥಿಗಳು

* ಮೊಡವೆ

Dengue cases crossed 1000 in Bengaluru BBMP Commissioner was also bitten by mosquito

ಡೆಂಗ್ಯೂ ಸೋಂಕು ತೀವ್ರವಾದರೆ ಈ ಲಕ್ಷಣ ಗೋಚರ

* ಭಯಾನಕ ಹೊಟ್ಟೆ ನೋವು

* ನಿರಂತರ ವಾಂತಿ

* ಮೂಗು ಅಥವಾ ಒಸಡುಗಳಿಂದ ರಕ್ತಸ್ರಾವ

* ನಿಮ್ಮ ಮಲ, ಮೂತ್ರ ಅಥವಾ ವಾಂತಿಯಲ್ಲಿ ರಕ್ತಸ್ರಾವ

* ಮೂಗೇಟುಗಳನ್ನು ಹೋಲುವ ಚರ್ಮದ ಅಡಿಯಲ್ಲಿ ರಕ್ತಸ್ರಾವ

* ಕಷ್ಟ ಮತ್ತು ತ್ವರಿತ ಉಸಿರಾಟ

* ಆಯಾಸ

* ಕಿರಿಕಿರಿ ಮತ್ತು ಚಡಪಡಿಕೆ

ಡೆಂಗ್ಯೂ ಸೋಂಕು ಎಷ್ಟು ದಿನಗಳವರೆಗೂ ಇರುವುದು?

ಡೆಂಗ್ಯೂ ಸೋಂಕು ಸಾಮಾನ್ಯವಾಗಿ 2 ರಿಂದ 7 ದಿನಗಳವರೆಗೂ ಇರುತ್ತದೆ. ಸೋಂಕು ತಗುಲಿರುವ ಸೊಳ್ಳೆಯು ಕಚ್ಚಿದ 2 ರಿಂದ 4 ವಾರಗಳಿಂದ ಜ್ವರ ಪ್ರಾರಂಭ ಆಗುತ್ತದೆ.

ಡೆಂಗ್ಯೂ ರೋಗವನ್ನು ತಡೆಯುವುದು ಹೇಗೆ?

* ಪರದೆಯಿಲ್ಲದ ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚುವುದು

* ಮಕ್ಕಳು ಹೊರಗಡೆ ಇರುವಾಗಲೆಲ್ಲಾ ಉದ್ದನೆಯ ತೋಳುಗಳು ಮತ್ತು ಪ್ಯಾಂಟ್‌ಗಳನ್ನು ಧರಿಸಬೇಕು

* ರಾತ್ರಿ ವೇಳೆಯಲ್ಲಿ ಸೊಳ್ಳೆ ಪರದೆಯಿಂದ ಅವರ ಹಾಸಿಗೆಗಳನ್ನು ಮುಚ್ಚಬೇಕು

* ರೋಗ ನಿರೋಧಕಗಳನ್ನು ನೀಡುವಂತೆ ಸೂಚನೆ

* ಸೊಳ್ಳೆಗಳಿಗೆ ಗೂಡು ಕಟ್ಟಲು ಸ್ಥಳ ಒದಗಿಸುವುದನ್ನು ತಪ್ಪಿಸಬೇಕು

* ಕಂಟೇನರ್‌ಗಳು ಮತ್ತು ಬಳಸಿದ ಟೈರ್‌ಗಳಂತಹ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಏಕೆಂದರೆ ಇಂಥ ಪ್ರದೇಶದಲ್ಲಿಯೇ ಸೊಳ್ಳೆಗಳು ಮೊಟ್ಟೆಯನ್ನು ಇಡುತ್ತವೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+