ಬೆಂಗಳೂರು-ಮೈಸೂರು ಮೆಮು ರೈಲು: ಪ್ರಯಾಣಿಕರ ಬೇಡಿಕೆಗಳು

ಬೆಂಗಳೂರು, ಏಪ್ರಿಲ್ 09: ಉದ್ಯಾನ ನಗರಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರು ನಡುವೆ ಪ್ರತಿದಿನ ನೂರಾರು ಜನರು ಸಂಚಾರ ನಡೆಸುತ್ತಾರೆ. ಜನರ ಪಾಲಿನ ನೆಚ್ಚಿನ ಸಾರಿಗೆ ವ್ಯವಸ್ಥೆ ರೈಲು. ಅದರಲ್ಲೂ ಮೆಮು ರೈಲಿನಲ್ಲಿ ಕಡಿಮೆ ವೆಚ್ಚದಲ್ಲಿ ಹಲವಾರು ಜನರು ಪ್ರಯಾಣಿಸುತ್ತಾರೆ. ಆದರೆ ಈ ರೈಲು ಪ್ರಯಾಣಿಕರ ಸಮಸ್ಯೆಗಳು ನೂರಾರಿವೆ. ರೈಲ್ವೆ ಇಲಾಖೆ ಈ ಕುರಿತು ಗಮನಹರಿಸಿ, ಸಮಸ್ಯೆ ಬಗೆಹರಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

ಬಡವರು ಮತ್ತು ಮಧ್ಯಮ ವರ್ಗದ ಜನರು ಬೆಂಗಳೂರು-ಮೈಸೂರು ನಡುವೆ ಸಂಚಾರ ನಡೆಸಲು ಅನುಕೂಲವಾಗುವಂತೆ ಮೆಮೆ ರೈಲು ಸೇವೆಯನ್ನು 2018ರಲ್ಲಿ ಆರಂಭಿಸಲಾಗಿದೆ. ಮೈಸೂರು ನಗರ ರೈಲು ನಿಲ್ದಾಣ, ಅಶೋಕಪುರಂ ರೈಲು ನಿಲ್ದಾಣಕ್ಕೆ ಮೆಮು ರೈಲುಗಳು ಸಂಪರ್ಕವನ್ನು ಕಲ್ಪಿಸುತ್ತದೆ. ಆದರೆ ರೈಲುಗಳು ತುಂಬಿ ತುಳುಕುವಷ್ಟು ಪ್ರಯಾಣಿಕರಿಂದ ಭರ್ತಿಯಾಗಿರುತ್ತದೆ.

Demand To Add Additional Coaches For Bengaluru Mysuru MEMU Train

ಮೊದಲು ಮೆಮು ರೈಲುಗಳು 20 ಬೋಗಿಯನ್ನು ಹೊಂದಿದ್ದವು. ಬಳಿಕ 16 ಬೋಗಿಗೆ ಇಳಿಕೆ ಮಾಡಲಾಯಿತು. ಈಗ 6 ತಿಂಗಳಿನಿಂದ ಉಭಯ ನಗರದ ನಡುವೆ 12 ಬೋಗಿಯ ಮೆಮು ರೈಲು ಸಂಚಾರ ಮಾಡುತ್ತಿದ್ದು, ರೈಲಿನಲ್ಲಿ ಜನರ ದಟ್ಟಣೆ ಹೆಚ್ಚಿದೆ. ಉಸಿರುಗಟ್ಟಿಸುವ ವಾತಾವರಣದಲ್ಲಿ ಜನರು ಸಂಚಾರ ನಡೆಸಬೇಕಿದೆ.

ಬೆಂಗಳೂರು-ಮೈಸೂರು ನಡುವೆ 22 ನಿಲ್ದಾಣಗಳಿವೆ. ಎಲ್ಲಾ ನಿಲ್ದಾಣಗಳಲ್ಲೂ ನಿಲ್ಲಿಸುವ ಮೆಮು ರೈಲಿನಲ್ಲಿ ಉಭಯ ನಗರದ ಪ್ರಯಾಣ ದರ 35 ರೂ. ಮಾತ್ರ. ಬೆಳಗ್ಗೆ 6.10ಕ್ಕೆ ಮೈಸೂರು ಮತ್ತು ಸಂಜೆ 7 ಗಂಟೆಗೆ ಬೆಂಗಳೂರಿನಿಂದ ಹೊರಡುವ ರೈಲುಗಳು ಅತ್ಯಧಿಕ ಪ್ರಯಾಣಿಕರನ್ನು ಹೊಂದಿದ್ದು, ಬೋಗಿಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಮೆಮು ರೈಲಿನ ಬೋಗಿಗಳ ಸಂಖ್ಯೆ ಹೆಚ್ಚಳ ಮಾಡುವ ಕುರಿತು ಈಗಾಗಲೇ ರೈಲ್ವೆ ಇಲಾಖೆ ಅಧಿಕಾರಿಗಳು, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣಗೆ ಪ್ರಯಾಣಿಕರು ಮನವಿ ಸಲ್ಲಿಸಿದ್ದಾರೆ. ಆದರೆ ಬೋಗಿಗಳ ಸಂಖ್ಯೆ ಹೆಚ್ಚಳ ಮಾಡುವ ಕುರಿತು ಯಾವುದೇ ಕ್ರಮ ಆಗಿಲ್ಲ, ಭರವಸೆ ಸಹ ಸಿಕ್ಕಿಲ್ಲ.

ಮೆಮು ರೈಲಿನ ವೇಳಾಪಟ್ಟಿ

ಬೆಂಗಳೂರು-ಮೈಸೂರು ನಡುವೆ ಸಂಚಾರ ನಡೆಸುವ ಹಲವು ಮೆಮು ರೈಲುಗಳನ್ನು ಅಶೋಕಪುರಂ ನಿಲ್ದಾಣದಕ್ಕೆ ಸ್ಥಳಾಂತರ ಮಾಡಲಾಗಿದೆ. ಪ್ರಯಾಣಿಕರು ಸಹ ಮುಂಜಾನೆ ಮತ್ತು ತಡರಾತ್ರಿ ಹೊರಡುವ ಎರಡು ಬೆಂಗಳೂರು-ಮೈಸೂರು ಮೆಮು ರೈಲುಗಳನ್ನು ಅಶೋಕಪುರಂ ರೈಲು ನಿಲ್ದಾಣಕ್ಕೆ ಸ್ಥಳಾಂತರ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದರು.

* ರೈಲು ನಂಬರ್ 66579/ 80 ಅಶೋಕಪುರಂಗೆ ಸ್ಥಳಾಂತರಗೊಂಡಿದೆ. ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ 2.05ಕ್ಕೆ ರೈಲು ಹೊರಡಲಿದೆ. ಮೈಸೂರಿಗೆ 5.10ಕ್ಕೆ ತಲುಪಲಿದೆ. ಚಾಮರಾಜಪುರಂ 5.20, ಅಶೋಕಪುರಂ ರೈಲು ನಿಲ್ದಾಣಕ್ಕೆ 5.30ಕ್ಕೆ ತಲುಪಲಿದೆ. ಅಶೋಕಪುರಂ ರೈಲು ನಿಲ್ದಾಣದಿಂದ 10.25ಕ್ಕೆ ಹೊರಟು ಚಾಮರಾಜಪುರಂ 10.30, ಮೈಸೂರು 10.40, ಕೆಎಸ್ಆರ್ ಬೆಂಗಳೂರು ನಿಲ್ದಾಣಕ್ಕೆ 2.30ಕ್ಕೆ ತಲುಪಲಿದೆ.

* ರೈಲು ಸಂಖ್ಯೆ 66883/ 54 ಬೆಂಗಳೂರು-ಅಶೋಕಪುರಂ ರೈಲು ಸಹ ಸ್ಥಳಾಂತರವಾಗಿದೆ. ರೈಲು ಸಂಖ್ಯೆ 66553 ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಸಂಜೆ 7 ಗಂಟೆಗೆ ಹೊರಡಲಿದೆ. ಮೈಸೂರಿಗೆ 9.55ಕ್ಕೆ ತಲುಪಲಿದೆ. ಚಾಮರಾಜಪುರಂ 10:05, ಅಶೋಕಪುರಂಗೆ 2.30ಕ್ಕೆ ತಲುಪಲಿದೆ. ರೈಲು ಸಂಖ್ಯೆ 66554 ಅಶೋಕಪುರಂ 5.45ಕ್ಕೆ ಹೊರಟು, ಚಾಮರಾಜಪುರಂಗೆ 5.49ಕ್ಕೆ ತಲುಪಲಿದೆ. ಮೈಸೂರಿನಿಂದ 6 ಗಂಟೆಗೆ ಹೊರಟು, ಬೆಂಗಳೂರು ನಗರಕ್ಕೆ 9.15ಕ್ಕೆ ತಲುಪುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+