ಬೆಂಗಳೂರು ಏರೋ ಇಂಡಿಯಾ ಶೋ: ವೆಬ್ ಸೈಟ್ ಗೆ ರಕ್ಷಣಾ ಇಲಾಖೆ ಚಾಲನೆ

ಬೆಂಗಳೂರು, ಅಕ್ಟೋಬರ್ 11: ಬೆಂಗಳೂರಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಏರೋ ಇಂಡಿಯಾ ಶೋಗೆ ರಕ್ಷಣಾ ಸಚಿವಾಲಯ ವೆಬ್‌ಸೈಟ್ ಆರಂಭಿಸಿದೆ.

2019ರ ಫೆಬ್ರವರಿ 20ರಿಂದ ಐದು ದಿನಗಳ ಕಾಲ ಯಲಹಂಕದ ವಾಯುನೆಲೆಯಲ್ಲಿ ನಡೆಯಲಿರುವ ಏರ್ ಶೋನಲ್ಲಿ ಜಾಗತಿಕ ಕಂಪನಿಗಳು ಹಾಗೂ ವಾಯುಪಡೆ ಉದ್ಯಮದ ಬಂಡವಾಳಗಾರರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾರತ ಮತ್ತು ವಿದೇಶ ಸೇರಿದಂತೆ ಒಟ್ಟು 500 ಕಂಪನಿಗಳು ಭಾಗವಹಿಸುವ ಸಾಧ್ಯತೆ ಇದು ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ರಕ್ಷಣಾ ಸಚಿವಾಲಯ ವೈಮಾನಿಕ ಉದ್ಯಮದಲ್ಲಿನ ಯೋಜನೆಗಳು ಮತ್ತು ಹೊಸ ಬೆಳವಣಿಗೆಗಳು ಮತ್ತು ಮಾಹಿತಿ ಹಂಚಿಕೆಗೆ ಏರೋ ಇಂಡಿಯಾ ವಿಶೇಷ ಅವಕಾಶ ನೀಡುತ್ತಿದೆ. ಬೆಂಗಳೂರಿನ ಹೆಮ್ಮೆ ಎನಿಸಿದ್ದ ಏರ್ ಶೋ ವನ್ನು ಉತ್ತರ ಪ್ರದೇಶದ ಸ್ಥಳಾಂತರಿಸಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿತ್ತು.ಇದಕ್ಕೆ ತೀವ್ರ ವಿರೋಧವೂ ವ್ಯಕ್ತವಾಗಿತ್ತು.

Defence ministry launch website for Bengaluru Aero India show

ಆದರೆ ಇಂಥಹ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿದ್ದ ಕೇಂದ್ರ ಸರ್ಕಾರ ಬೆಂಗಳೂರಲ್ಲೇ ಏರ್ ಶೋ ಆಯೋಜಿಸುವುದಾಗಿ ಹೇಳಿಕೆ ನೀಡಿತ್ತು. ಕೇಂದ್ರ ಸರ್ಕಾರದ ವಿರುದ್ಧ ಆ ಸಂದರ್ಭದಲ್ಲಿ ಹಲವಾರು ಮಾತುಗಳು ಕೇಳಿಬಂದಿದ್ದವು. ಆದರೆ ಕರ್ನಾಟಕದ ಬಿಜೆಪಿ ಮಾತ್ರ ಬೆಂಗಳೂರಿನಿಂದ ಏರ್‌ ಶೋ ಸ್ಥಳಾಂತರವಿಲ್ಲ ಎಂದು ಹೇಳುತ್ತಲೇ ಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+