ಡಿಸಿಎಂ ಪರಮೇಶ್ವರ ಅಮೇರಿಕ ಭೇಟಿ ಹಿನ್ನೆಲೆ ಏನು?
Recommended Video

ಬೆಂಗಳೂರು, ಸೆಪ್ಟೆಂಬರ್ 7: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಾಸಗಿ ಭೇಟಿಗಾಗಿ ಯುರೋಪ್ ಪ್ರವಾಸಕ್ಕೆ ತೆರಳಿದ ಬೆನ್ನಲ್ಲೇ ಹಾಲಿ ಡಿಸಿಎಂ ಡಾ. ಜಿ. ಪರಮೇಶ್ವರ 3 ದಿನಗಳ ಕಾಲ ಅಮೇರಿಕ ಪ್ರವಾಸಕ್ಕೆ ಹೊರಟಿದ್ದಾರೆ.
ಸಿದ್ದರಾಮಯ್ಯ ಯುರೋಪ್ ಭೇಟಿಗೆ ರಾಜಕೀಯ ಬಣ್ಣ ಬಳಿಯಲಾಗಿತ್ತಾದರೂ ಅವರು ತೆರಳಿದ ನಂತರ ಅಂತಹ ಯಾವುದೇ ಮಹತ್ತರ ರಾಜಕೀಯ ಬೆಳವಣಿಗೆಗಳು ಆಗಿಲ್ಲ, ಈ ಮಧ್ಯೆ ಉಪಮುಖ್ಯಮಂತ್ರಿ ಪರಮೇಶ್ವರ ಅಧಿಕೃತ ಭೇಟಿಗಾಗಿ ಅಮೇರಿಕಕ್ಕೆ ಹೊರಟಿದ್ದಾರೆ.
ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸೆಪ್ಟೆಂಬರ್ 10ರಿಂದ ಆರಂಭವಾಗಲಿರುವ ಗ್ಲೋಬಲ್ ಕ್ಲೈಮೇಟ್ ಟೆಕ್ ಸಮಿತ್ ಗೆ ತೆರಳಲಿದ್ದಾರೆ.

ಅಲ್ಲಿ ಮೂರು ದಿನಗಳ ಕಾಲ ಕಾರ್ಯಾಗಾರ ನಡೆಯಲಿದ್ದು, ಇದಕ್ಕೆ ನನ್ನನ್ನು ಆಹ್ವಾನಿಸಿದ್ದಾರೆ. ಬದಲಾಗುತ್ತಿರುವ ಮಾಲಿನ್ಯದ ಕುರಿತು ಕೆಲ ವಿಭಾಗದಲ್ಲಿ ವಿಚಾರ ಮಂಡನೆ ಮಾಡಲಿದ್ದೇನೆ. ವಿಶ್ವದ ಇತರೆ ದೇಶದ ರಾಜಕೀಯ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಅಂತೆಯೇ ನನಗೂ ಆಹ್ವಾನ ಬಂದಿದೆ. ಹೀಗಾಗಿ ಈ ಪ್ರವಾಸವನ್ನು ರಾಜಕೀಯವಾಗಿ ವಿಶ್ಲೇಷಣೆ ಮಾಡುವುದು ತರವಲ್ಲ ಎಂದಿದ್ದಾರೆ.












Click it and Unblock the Notifications