ಡಿಕೆ ಶಿವಕುಮಾರ್ CM ಆಗುವ ಬಗ್ಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಚ್ಚರಿ ಹೇಳಿಕೆ

ಬೆಂಗಳೂರು,ಮಾರ್ಚ್‌ 25: ರಾಜ್ಯ ಕಾಂಗ್ರೆಸ್‌ ನಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಸಿದ್ದರಾಮಯ್ಯ ಬಣ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್‌ ಬಣಗಳ ನಡುವೆ ಗುಸು ಗುಸು ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ರಚನೆಯ ಸಂದರ್ಭದಲ್ಲಿ ಹೈಕಮಾಂಡ್‌ ನಾಯಕರ ಮುಂದೆಯೇ ಅಧಿಕಾರ ಹಂಚಿಕೆ ಕುರಿತು ಚರ್ಚೆಗಳು ನಡೆದಿದ್ದು, ಅದರಂತೆ ಎರಡೂವರೆ ವರ್ಷದ ಬಳಿಕ ಸಿಎಂ ಬದಲಾವಣೆಯಾಗಲಿದ್ದಾರೆ ಎಂದು ಡಿ ಕೆ ಶಿವಕುಮಾರ್‌ ಬಣ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ರಾಜ್ಯದ ಮುಂದಿನ ಸಿಎಂ ಆಗಬೇಕು ಅನ್ನೋದು ಅವರ ಕುಟುಂಬಸ್ಥರು, ಅಭಿಮಾನಿಗಳ ಕನಸು. ಸ್ವತಃ ಡಿಕೆಶಿ ಕೂಡ ಮುಖ್ಯಮಂತ್ರಿ ಕುರ್ಚಿಗೇರಲು ಎಲ್ಲಾ ಕಸರತ್ತು ನಡೆಸ್ತಿದ್ದಾರೆ. ಈ ಮಧ್ಯೆ ಆ್ಯಕ್ಷನ್ ಪ್ರಿನ್ಸ್, ನಟ ಧ್ರುವ ಸರ್ಜಾ ಅವರು ಸಿಎಂ ಬಗ್ಗೆ ಅಚ್ಚರಿಯ ಹೇಳಿಕೆಯನ್ನ ನೀಡಿದ್ದಾರೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾಲೀಕತ್ವದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾರ್ಯಕ್ರಮದಲ್ಲಿ ಸ್ಪೆಷಲ್ ಗೆಸ್ಟ್ ಆಗಿ ಭಾಗಿಯಾಗಿದ್ದ ನಟ ಧ್ರುವ ಸರ್ಜಾ‌ ಅವರು ವೇದಿಕೆ ಉದ್ದೇಶಿಸಿ ಮಾತನಾಡುವ ವೇಳೆ, ನಾನು ಯಾರ ಬಗ್ಗೆ ಮಾತಾಡ್ತಿದ್ದೀನಿ ಗೊತ್ತಾ.. ನಾನು ಫ್ಯೂಚರ್ ಮುಖ್ಯಮಂತ್ರಿ ಬಗ್ಗೆ ಮಾತನಾಡ್ತಾ ಇದ್ದೀನಿ ಎಂದ ನಟ ಧ್ರುವ ಸರ್ಜಾ ಅವರು ಡಿ ಕೆ ಶಿವಕುಮಾರ್‌ ಅವರನ್ನ ಹೊಗಳುವ ವೇಳೆ ಪರೋಕ್ಷ ಹಿಂಟ್ಸ್ ಕೊಟ್ಟಿದ್ದಾರೆ. ಧ್ರುವ ಸರ್ಜಾ ಹೇಳಿಕೆಗೆ ಚಪ್ಪಾಳೆ ಹೊಡೆದ ವಿದ್ಯಾರ್ಥಿಗಳು ಕೇಕೆ ಹಾಕಿದ್ದಾರೆ. ನಟ ಧ್ರುವ ಸರ್ಜಾ ಕೂಡ ಮುಂದಿನ ಸಿಎಂ ಡಿಕೆ ಶಿವಕುಮಾರ್ ಅಂತ ಹೇಳುವ ಮೂಲಕ ಭಾರಿ ಕುತೂಹಲ ಮೂಡಿಸಿದ್ದಾರೆ.

DCM DK Shivakumar Future CM Of Karnataka Says Dhruva Sarja

‌ಟೈಂ ಮ್ಯಾನೇಜ್ಮೆಂಟ್ ಅಂತಾ ಮಾತೋಡದ್ಕಿಂತ ಮುಂಚೆ ನಾನು ಅಣ್ಣನ ಕೇಳುತ್ತಿದ್ದೆ. ಅಣ್ಣಾ ಎಷ್ಟು ಗಂಟೆಗೆ ಮಲಗುತ್ತೀರಾ? ಎಷ್ಟು ಗಂಟೆಗೆ ಎದ್ದೇಳ್ತೀರಾ ಎಂದು. ಪಾಪ ಅವರು, ತಮ್ಮ ಬ್ಯುಸಿ ಶೆಡ್ಯೂಲ್ ಹೇಳಿದರು. ರಾತ್ರಿ 2.30 ಮಲಗಿಕೊಂಡು ಬೆಳಗ್ಗೆ 6.30ಗೆ ಎದ್ದೆ ಅಂದ್ರು. ಈ ಸ್ಥಾನಕ್ಕೆ ಬರೋದಕ್ಕೆ ಇದೇ ರೀತಿ ಎಷ್ಟೋ ವರ್ಷದಿಂದ ಮಾಡುತ್ತಿರುತ್ತಾರೆ. ನಾನು ಯಾರು ಬಗ್ಗೆ ಮಾತನಾಡುತ್ತಿದ್ದೇನೆ ಗೊತ್ತಾಯ್ತಾ..? ಏ ನಮ್ಮ ಫ್ಯೂಚರ್ ಸಿಎಂ ಬಗ್ಗೆ ಮಾತಾಡ್ತಾ ಇದ್ದೀನಪ್ಪ ಎಂದು ಡಿ ಕೆ ಶಿವಕುಮಾರ್‌ ಬಗ್ಗೆ ಧ್ರುವ ಸರ್ಜಾ ಅವರು ಮಾತನಾಡಿದ್ದಾರೆ.

ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಯಲ್ಲಿ (GAT) ಏರ್ಪಡಿಸಲಾಗಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಯುವಜನೋತ್ಸವ 2025 ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್, GAT ಅಧ್ಯಕ್ಷೆ ಉಷಾ ಶಿವಕುಮಾರ್, ನ್ಯಾಷನಲ್ ಎಜುಕೇಶನ್ ಫೌಂಡೇಶನ್ ಟ್ರಸ್ಟಿ ಸೆಕ್ರೆಟರಿ ಐಶ್ವರ್ಯ ಡಿ ಕೆ ಎಸ್ ಹೆಗ್ಡೆ, ಖ್ಯಾತ ಚಿತ್ರ ನಟ ಧೃವ ಸರ್ಜ, ಪ್ರಾಂಶುಪಾಲರಾದ ಎಚ್ ಬಿ ಬಾಲಕೃಷ್ಣ, ವ್ಯವಸ್ಥೆ ಮತ್ತು ಕಾರ್ಯತಂತ್ರ ಮುಖ್ಯಸ್ಥರಾದ ಡಾ ನಾಗಮಣಿ ನಾಗರಾಜ ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+