ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Exclusive : ಮೊಬೈಲಿನಲ್ಲೇ ಓದಿ ದಾಸ ವರೇಣ್ಯರ ಸಾಹಿತ್ಯ

By ಮಲೆನಾಡಿಗ
|
Google Oneindia Kannada News

ಭಾರತೀಯ ಸಂಸ್ಕೃತಿಯ ಮೌಲ್ಯವನ್ನು ಎತ್ತಿ ಹಿಡಿಯುವ ಜನ ಸಾಮಾನ್ಯರಿಗೂ ತತ್ತ್ವಜ್ಞಾನ, ಜೀವನ ಮೌಲ್ಯಗಳನ್ನು ತಲುಪಿಸಿದ ಕೀರ್ತಿ ದಾಸ ಸಾಹಿತ್ಯಕ್ಕೆ ಸಲ್ಲುತ್ತದೆ. ಇಂಥ ಸಾಹಿತ್ಯವನ್ನು ವಾದಿರಾಜ, ತ್ಯಾಗರಾಜ, ಪುರಂದರದಾಸ, ಕನಕದಾಸ ಮುಂತಾದ ದಾಸವರೇಣ್ಯ ನಾಡಿಗೆ ಪರಿಚಯಿಸಿ ಲೋಕದ ಡೊಂಕು ತಿದ್ದಲು ಯತ್ನಿಸಿದರು.

ದಾಸ ಸಾಹಿತ್ಯವು ಸಾಮಾಜಿಕ ಹಾಗೂ ಧಾರ್ಮಿಕತೆಯ ವಿವಿಧ ಆಯಾಮಗಳನ್ನು ಹಾಗೂ ಭಾರತೀಯ ಸಂಸ್ಕೃತಿಯ ಮೌಲ್ಯವನ್ನು ಒಳಗೊಂಡಿರುವುದು ಎಲ್ಲರಿಗೂ ತಿಳಿದೇ ಇದೆ. [ಅಂಗೈಯಲ್ಲೇ ಸುದ್ದಿ ಕಣಜ 60 ಸೆಕೆಂಡ್ಸ್ ನೌ]

ದಾಸರ ಕೀರ್ತನೆಗಳಿಗೆ ರಾಗ ಸಂಯೋಜನೆ ಕರ್ನಾಟಕ ಶಾಸ್ತ್ರೀಯ ಸಂಗೀತ ಶೈಲಿಯಲ್ಲಿ, ಭಾವಗೀತೆ ಮಾದರಿಯಲ್ಲಿ ಜನಪ್ರಿಯಗೊಳಿಸಲಾಗಿದೆ. ಕಾಲ ಮುಂದುವರೆದಂತೆ ದಾಸ ಸಾಹಿತ್ಯದ ಬಗ್ಗೆ ಇರುವ ಅನೇಕ ಪುಸ್ತಕಗಳು ವೆಬ್ ಲೋಕಕ್ಕೆ ಕಾಲಿಟ್ಟಿದ್ದು ಆಯಿತು. [ದಾಸಸಾಹಿತ್ಯ ಮಾಹಿತಿ ಬೆರಳ ತುದಿಯಲ್ಲೇ ಲಭ್ಯ]

ಈಗ ಮೊಬೈಲ್ ಜಮಾನ. ಹೀಗಾಗಿ ಮೊಬೈಲ್ ಫೋನಿನಲ್ಲೂ ಸುಲಭವಾಗಿ ದಾಸರ ಕೀರ್ತನೆಗಳು, ಉಗಾಭೋಗಗಳು, ಮುಂಡಿಗೆಗಳು, ಸುಳಾದಿಗಳನ್ನು ಓದಲು ನೆರವಾಗುವ ಅಪ್ಲಿಕೇಷನ್ ನನ್ನು ಸಾಫ್ಟ್ ವೇರ್ ತಂತ್ರಜ್ಞ 'ಪದ' ತಂತ್ರಾಂಶ ಜನಕ ಲೋಹಿತ್ ಡಿಎಸ್ ತಂದಿದ್ದಾರೆ. ಈ ಅಪ್ಲಿಕೇಷನ್ ಕುರಿತ ಇನ್ನಷ್ಟು ಮಾಹಿತಿ ಮುಂದಿದೆ ಓದಿ...

ಮೊಬೈಲ್ ಅಪ್ಲಿಕೇಷನ್ ಇದೇ ಮೊದಲು

ಮೊಬೈಲ್ ಅಪ್ಲಿಕೇಷನ್ ಇದೇ ಮೊದಲು

ದಾಸ ಸಾಹಿತ್ಯ ಕುರಿತಂತೆ ವೆಬ್ ತಾಣಗಳಿದ್ದರೂ ಸಮಗ್ರವಾದ ಮೊಬೈಲ್ ಅಪ್ಲಿಕೇಷನ್ ಇರಲಿಲ್ಲ. ಈ ಕೊರತೆಯನ್ನು ಈ ಅಪ್ಲಿಕೇಷನ್ ನೀಗಿಸಿದೆ. ಗೂಗಲ್ ಆಂಡ್ರಾಯ್ಡ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಸಂಪೂರ್ಣ ಉಚಿತವಾಗಿದೆ. ಕಾವ್ಯ, ತತ್ತ್ವ, ಹಾಗೂ ನಿತ್ಯ ಜೀವನಕ್ಕೆ ಬೇಕಾದ ಸುಭಾಷಿತ ರೂಪದಲ್ಲಿ ನೂರಾರು ದಾಸ ವರೇಣ್ಯರ ಸಾವಿರಾರು ಪದಗಳನ್ನು ಇಲ್ಲಿ ನೀಡಲಾಗಿದೆ ಎಂದು ವಿನ್ಯಾಸಗಾರ, ಅಪ್ಲಿಕೇಷನ್ ಅಭಿವೃದ್ಧಿ ಪಡಿಸಿರುವ ಲೋಹಿತ್ ಡಿಎಸ್ ಹೇಳಿದ್ದಾರೆ.

ದಾಸ ಸಾಹಿತ್ಯ ಅಪ್ಲಿಕೇಷನ್ ಡೌನ್ ಲೋಡ್ ಹೇಗೆ

ದಾಸ ಸಾಹಿತ್ಯ ಅಪ್ಲಿಕೇಷನ್ ಡೌನ್ ಲೋಡ್ ಹೇಗೆ

ದಾಸ ಸಾಹಿತ್ಯ ಅಪ್ಲಿಕೇಷನ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದ್ದು, ಆಂಡ್ರಾಯ್ಡ್ ಆಧಾರಿತ ಮೊಬೈಲ್ ನಲ್ಲಿ ಇಳಿಸಿಕೊಳ್ಳಬಹುದಾಗಿದೆ. ಡೌನ್ ಲೋಡ್ ಮಾಡಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

* ಕೇವಲ 2.5 ಎಂಬಿ ತೂಕವಿರುವ ಅಪ್ಲಿಕೇಷನ್ ವಿನ್ಯಾಸವೂ ಕಣ್ಮನ ಸೆಳೆಯುತ್ತದೆ.
* ಆಂಡ್ರಾಯ್ಡ್ ಅಪರೇಟಿಂಗ್ ಸಿಸ್ಟಮ್ 2.3 ಅಥವಾ ಅದಕ್ಕಿಂತ ಹೆಚ್ಚಿನ OS ಬಳಸುವ ಮೊಬೈಲ್ ನಲ್ಲಿ ಇದನ್ನು ಬಳಸಬಹುದಾಗಿದೆ.
* ಭಾರತದಲ್ಲಿನ ಹರಿದಾಸ ಸಾಹಿತ್ಯ ಚಳವಳಿಯ ಬಗ್ಗೆ ಅಪ್ಲಿಕೇಷನ್ ನಲ್ಲಿ ಸಂಕ್ಷಿಪ್ತ ಮಾಹಿತಿಯೂ ಇದೆ.

ದಾಸರ ಪದಗಳ ಹುಡುಕಾಟ ಸುಲಭ

ದಾಸರ ಪದಗಳ ಹುಡುಕಾಟ ಸುಲಭ

ನೂರಾರು ದಾಸವರೇಣ್ಯರ ಕೃತಿಗಳು ಈ ಅಪ್ಲಿಕೇಷನ್ ನಲ್ಲಿ ಲಭ್ಯವಿದ್ದು, ಸುಲಭವಾಗಿ ಎಲ್ಲವನ್ನು ಹುಡುಕಬಹುದಾಗಿದೆ. 'ಅ' ಇಂದ 'ಹ' ತನಕ ಅಕ್ಷರಗಳನ್ನು ಕೊಡಲಾಗಿದ್ದು, ಅಕ್ಷರಗಳ ಮೇಲೆ ಬೆರಳಾಡಿಸಿದರೆ ಸಾಕು ಆ ಅಕ್ಷರದಲ್ಲಿ ಬರುವ ದಾಸರ ಹೆಸರುಗಳು ಕಾಣಿಸುತ್ತದೆ.

ಉದಾಹರಣೆ: 'ಪ' ಕ್ಲಿಕ್ ಮಾಡಿದರೆ ಪುರಂದರದಾಸರು, ಪ್ರದ್ಯುಮ್ನತೀರ್ಥರು ಸೇರಿದಂತೆ ಅನೇಕ ದಾಸರ ಹೆಸರುಗಳು ಕಾಣಿಸುತ್ತದೆ. ನಂತರ ಪುರಂದರದಾಸ ಹೆಸರನ್ನು ಒತ್ತಿದರೆ ಅವರ ಪರಿಚಯ, ಕೀರ್ತನೆ, ಉಗಭೋಗ, ಮುಂಡಿಗೆ, ಧ್ವನಿಮುದ್ರಿತ ಕೃತಿಗಳು, ಸುಳಾದಿಗಳನ್ನು ಕಾಣಬಹುದು.

ದಾಸ ಸಾಹಿತ್ಯ ಅಪ್ಲಿಕೇಷನ್ ಪೂರಕ ಮಾಹಿತಿಗೆ

ದಾಸ ಸಾಹಿತ್ಯ ಅಪ್ಲಿಕೇಷನ್ ಪೂರಕ ಮಾಹಿತಿಗೆ

On Facebook : https://www.facebook.com/dasasahitya
On Twitter : @dasasahitya
On Gmail : [email protected]
ಅಥವಾ ಇನ್ನಿತರೆ ಪ್ರತಿಕ್ರಿಯೆಗಾಗಿ : [email protected]
ವೆಬ್ ಸೈಟ್ : http://www.pada.pro/

ಅಪ್ಲಿಕೇಷನ್ ಅಭಿವೃದ್ಧಿಪಡಿಸಲು ನೆರವಾಗಿ

ಅಪ್ಲಿಕೇಷನ್ ಅಭಿವೃದ್ಧಿಪಡಿಸಲು ನೆರವಾಗಿ

ಸಾರ್ವಜನಿಕರ ಬಳಕೆ ಹೆಚ್ಚಿದ್ದಂತೆ ಇನ್ನಷ್ಟು ಉಪಯುಕ್ತ ಅಪ್ಲಿಕೇಷನ್ ಗಳನ್ನು ಸಿದ್ದಪಡಿಸುತ್ತೇನೆ. ಇದಕ್ಕೆ ತಾಂತ್ರಿಕ ನೆರವು ನೀಡಲು ಬಯಸುವವರು ಸಂಪರ್ಕಿಸಬಹುದು.

ಕನ್ನಡಕ್ಕೆ ಇನ್ನಷ್ಟು ವಿಶಿಷ್ಟ ಜನ ಉಪಯೋಗಿ ತಂತ್ರಾಂಶ ನೀಡುತ್ತೇನೆ ಎಂದು ಉತ್ಸಾಹದಿಂದ ಹೇಳುತ್ತಾರೆ. ಇದುವರೆವಿಗೂ ಪದ ತಂತ್ರಾಂಶ ಸೇರಿದಂತೆ ಕೆಲ ಉಪಯುಕ್ತ ತಂತ್ರಾಂಶಗಳನ್ನು ನೀಡಿರುವ ಲೋಹಿತ್ ಅವರು ಮೊಬೈಲ್ ನಲ್ಲಿ ಪದ ತಂತ್ರಾಂಶ ಬಳಸಲು ಇಚ್ಛಿಸುವವರಿಗೆ ಮಾತ್ರ ಶುಲ್ಕ ವಿಧಿಸಿದ್ದಾರೆ. ಉಳಿದಂತೆ ಎಲ್ಲವೂ ಮುಕ್ತವಾಗಿ ಲಭ್ಯವಿದೆ.

ಹೆಚ್ಚಿನ ಮಾಹಿತಿಗೆ, ಆಸಕ್ತರು ಲೋಹಿತ್ ಗೆ ಇಮೇಲ್([email protected]) ಮಾಡಿ.

ದಾಸ ಸಾಹಿತ್ಯ ಅಪ್ಲಿಕೇಷನ್ ಹೇಗಿದೆ?

ದಾಸ ಸಾಹಿತ್ಯ ಅಪ್ಲಿಕೇಷನ್ ಹೇಗಿದೆ?

ದಾಸ ಸಾಹಿತ್ಯ ಅಪ್ಲಿಕೇಷನ್ ನಿಂದ ಸಾಕಷ್ಟು ಮಾಹಿತಿ ಲಭ್ಯವಿದೆ. ಧ್ವನಿಮುದ್ರಿಕೆಗಳನ್ನು ನೀಡಲಾಗಿದೆ. ಆಡಿಯೋ ಲಿಂಕ್ ಕೊಟ್ಟಿಲ್ಲ. ಪ್ರತಿ ಬಾರಿ ಮುಂದಿನ ಹಂತಕ್ಕೆ ಹೋಗುವಾಗ ಜಾಹೀರಾತುಗಳ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಕೀರ್ತನೆಗಳ ಲೋಡಿಂಗ್ ಟೈಮ್ ಕೂಡಾ ಹೆಚ್ಚಿಲ್ಲ.

ಅದರೆ, ಕೀರ್ತನೆಗಳನ್ನು ಮೊಬೈಲ್ ಚೌಕಟ್ಟಿನಲ್ಲಿ ಸಂಯೋಜಿಸಿರುವುದು ಸರಿ ಹೊಂದುತ್ತಿಲ್ಲ. ಆರಂಭ, ಅಂತ್ಯ ಎಂದು ಸೂಚಿಸುವ ಗೆರೆ ಎಳೆದು ಓದುಗರಿಗೆ ಅನುಕೂಲ ಮಾಡಬಹುದಿತ್ತು.

ಅಪ್ಲಿಕೇಷನ್ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಲು ಯಾವುದೇ ಷೇರ್ ಲಿಂಕ್ ಕೊಟ್ಟಿಲ್ಲ. ಈ ಬಗ್ಗೆ ಲೋಹಿತ್ ಅವರು ಗಮನ ಹರಿಸುತ್ತಾರೆ ಎಂಬ ಆಶಯವಿದೆ.

English summary
Lohith DS of Pada Software fame now comes out with Dasa Sahitya Android app. This application works on all Android OS based mobilephone. Dasa Sahitya is the literature of Bhakti movement composed by devotees in honor of Lord Vishnu or one of his Avatars. The bhakti literature of these Haridasas is collectively referred to as Dasa Sahitya. It is in the Kannada language.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X