Get Updates
Get notified of breaking news, exclusive insights, and must-see stories!

South India: ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಭಾವ: ತಮಿಳುನಾಡು ಮುನ್ನಡೆ, ಕರ್ನಾಟಕದಲ್ಲಿ ಏಕೆ ಹಿನ್ನಡೆ

ದಕ್ಷಿಣ ಭಾರತದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಕೇರಳದಲ್ಲಿ ಪ್ರಾದೇಶಿಕ ಪಕ್ಷಗಳ ಪರಿಸ್ಥಿತಿ ಹೇಗಿದೆ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಯಶಸ್ಸು ಸಿಗದೆ ಇರುವುದಕ್ಕೆ ಕಾರಣವೇನು ಎನ್ನುವ ವಿವರ ಇಲ್ಲಿದೆ.

Regional Parties in South India: ದಕ್ಷಿಣ ಭಾರತದ ಎರಡು ಪ್ರಮುಖ ರಾಜ್ಯಗಳಾದ ತಮಿಳುನಾಡು ಹಾಗೂ ಕೇರಳದಲ್ಲಿ 2026ನೇ ಸಾಲಿನ ವಿಧಾನಸಭೆ ಚುನಾವಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಈ ಬಾರಿ ಪ್ರಾದೇಶಿಕ ಪಕ್ಷಗಳು ಹೆಚ್ಚು ಸದ್ದು ಮಾಡುತ್ತಿವೆ. ದಕ್ಷಿಣ ಭಾರತದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಕೇರಳದಲ್ಲಿ ಪ್ರಾದೇಶಿಕ ಪಕ್ಷಗಳ ಪರಿಸ್ಥಿತಿ ಹೇಗಿದೆ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಯಶಸ್ಸು ಸಿಗದೆ ಇರುವುದಕ್ಕೆ ಕಾರಣವೇನು. ಒಟ್ಟಾರೆ ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳ ಪರಿಸ್ಥಿತಿ ಯಾವ ರೀತಿ ಇದೆ. ಕರ್ನಾಟಕದ ಹೊಸ ಪ್ರದೇಶಿಕ ಪಕ್ಷಗಳು ಯಾವುವು ಎನ್ನುವ ಸಂಪೂರ್ಣ ವಿವರ ಈ ಲೇಖನದಲ್ಲಿ ನೋಡೋಣ.

ಭಾರತದಲ್ಲಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆದಿದೆ. ಈ ಬಾರಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಗಳು ಹಾಗೂ ತಮಿಳುನಾಡಿನ ಪ್ರಾದೇಶಿಕ ಪಕ್ಷಗಳು ಹೆಚ್ಚು ಸದ್ದು ಮಾಡುತ್ತಿವೆ. ಕರ್ನಾಟಕದಲ್ಲಿ ಕನ್ನಡಿಗರೂ ಸಹ ಕನ್ನಡಿಗರ ಪರವಾಗಿ, ಕನ್ನಡ ನಾಡಿನ ಪರವಾಗಿ ಧ್ವನಿ ಎತ್ತುವ ಪ್ರಾದೇಶಿಕ ಪಕ್ಷವೊಂದರ ನಿರೀಕ್ಷೆಯಲ್ಲಿದ್ದಾರೆ. ಆದರೆ, ಪೂರ್ಣ ಪ್ರಮಾಣದಲ್ಲಿ ಇದು ಸಾಕಾರವಾಗುತ್ತಿಲ್ಲ. ಇದೇ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳು ವಿಧಾನಸಭೆ ಚುನಾವಣೆಗಳಲ್ಲಿ ಮಾತ್ರವಲ್ಲ, ಲೋಕಸಭೆ ಚುನಾವಣೆಗಳಲ್ಲೂ ಯಶಸ್ಸು ಗಳಿಸುತ್ತಿವೆ. ಕರ್ನಾಟಕದಲ್ಲೂ ಹೊಸ ರಾಜಕೀಯ ಪಕ್ಷಗಳ ಉದಯವಾಗಿದೆ. ಆದರೆ ಈ ಪಕ್ಷಗಳನ್ನು ಗೆಲ್ಲಿಸುವ ಮನಸ್ಸು ಕನ್ನಡಿಗರು ಮಾಡಿಲ್ಲ. ಇದೇ ಸಂದರ್ಭದಲ್ಲಿ ಹೊಸ ಪಕ್ಷಗಳು ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾಗಬೇಕಾದ ಅವಶ್ಯಕತೆಯೂ ಇದೆ.

South India

ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಹೊಸ ಪ್ರಾದೇಶಿಕ ಪಕ್ಷಗಳದ್ದೇ ಸದ್ದು. ಇನ್ನು ಈಚೆಗೆ ಆಂಧ್ರಪ್ರದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಹೊಸ ದಾಖಲೆಯನ್ನೇ ಬರೆದಿವೆ. ತೆಲಂಗಾಣದಲ್ಲಿ ಪ್ರಾದೇಶಿಕ ಪಕ್ಷದ ಆಡಳಿತ ವಿರೋಧಿ ಅಲೆಯಿಂದ ಈಚೆಗೆ ನಡೆದ ಚುನಾವಣೆಯಲ್ಲಿ ಸೋಲುಂಡಿದೆ. ದಕ್ಷಿಣ ಭಾರತದಲ್ಲಿ ತಮಿಳುನಾಡಿನಲ್ಲಿ ಮಾತ್ರ ಪ್ರಾದೇಶಿಕ ಪಕ್ಷಗಳು ನಿರಂತರವಾಗಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುತ್ತಿವೆ. ತಮಿಳುನಾಡಿನಲ್ಲಿ ಒಮ್ಮೆಯೂ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಬಿಜೆಪಿಯ ಸಿದ್ಧಾಂತ ಹಾಗೂ ಪ್ರಬಲ ದ್ರಾವಿಡ ಚಳವಳಿಯು ಬಿಜೆಪಿಗೆ ಸವಾಲಾಗಿದೆ.

ಕಾಂಗ್ರೆಸ್ ಪಕ್ಷವು ಇಲ್ಲಿ ಪ್ರಬಲವಾಗಿದ್ದ ಕಾಲವೊಂದಿತ್ತು. ಆದರೆ ಹಿಂದಿ ಕಾರಣಕ್ಕೆ ಕಾಂಗ್ರೆಸ್ ಪಕ್ಷಕ್ಕೂ ಇಲ್ಲಿನ ಜನ ಸೊಪ್ಪು ಹಾಕುತ್ತಿಲ್ಲ. ಈ ಎರಡೂ ಕಾರಣಗಳು ಸಹ ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳು ಹೆಚ್ಚು ಶಕ್ತಿಶಾಲಿಯಾಗಿ ಮುನ್ನುಗ್ಗುತ್ತಿವೆ. ಅಲ್ಲದೆ ಪ್ರಾದೇಶಿಕ ವಿಷಯಗಳು ಬಂದಾಗ ಇಲ್ಲಿನ ಎಲ್ಲಾ ಪ್ರಾದೇಶಿಕ ಪಕ್ಷಗಳು ಸಹ ಒಂದಾಗಿ ನಿಲ್ಲುವುದಿದೆ. ಪ್ರಾದೇಶಿಕ ವಿಷಯಗಳನ್ನು ಆದ್ಯತೆಯ ಮೇಲೆ ಪರಿಗಣಿಸುವುದು ಇದೆ. ಇದು ಸಹ ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷ ಬಲಗೊಳ್ಳುವುದಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಬಹುದು.

ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳು

ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ದರ್ಬಾರು ಎನ್ನುವಂತೆ ರಾಜಕೀಯ ಚಿತ್ರಣವಿದೆ. ಆದರೆ, ಎಲ್ಲಾ ಪ್ರಾದೇಶಿಕ ಪಕ್ಷಗಳು ಯಶಸ್ಸು ಕಂಡಿಲ್ಲ. ಕೆಲವೊಂದು ಪ್ರಾದೇಶಿಕ ಪಕ್ಷಗಳು ಒಂದೇ ಒಂದು ವಿಧಾನಸಭೆ / ಲೋಕಸಭೆ ಸ್ಥಾನ ಗೆಲ್ಲುವುದಕ್ಕೆ ಸಾಧ್ಯವಾಗಿಲ್ಲ. ತಮಿಳುನಾಡಿನಲ್ಲಿ ಎರಡು ಪ್ರಾದೇಶಿಕ ಪಕ್ಷಗಳು ಭದ್ರಕೋಟೆಯನ್ನು ಸ್ಥಾಪಿಸಿವೆ. ದ್ರಾವಿಡ ಮುನ್ನೇತ್ರ ಕಳಗಂ (DMK) ಹಾಗೂ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ಪ್ರಬಲವಾಗಿವೆ. 1967 ರಿಂದ ಈ ಎರಡು ಪಕ್ಷಗಳೇ ರಾಜ್ಯದಲ್ಲಿ ಅಧಿಕಾರದ ಗದ್ದುಗೆಗೇರುತ್ತಿವೆ. ತಮಿಳುನಾಡಿನಲ್ಲಿ ಇದೀಗ ನಟ, ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಹೊಸ ಸೇರ್ಪಡೆ. ಪಿಎಂಕೆ (PMK), ವಿಜಿಕೆ (VCK), ಡಿಎಂಡಿಕೆ (DMDK) ಹಾಗೂ ಇತ್ತೀಚಿನ ಎಂಎನ್‌ಎಂ (MNM) ನಂತಹ ಇತರ ಪ್ರಾದೇಶಿಕ ಪಕ್ಷಗಳು ಮೈತ್ರಿಕೂಟದ ಮೇಲೆ ಪ್ರಭಾವ ಬೀರುತ್ತಿವೆ. ಹಲವು ಪ್ರಾದೇಶಿಕ ಪಕ್ಷಗಳು ತಮಿಳುನಾಡಿನಲ್ಲಿ ಇರುವುದರಿಂದ ಇಲ್ಲಿ ಮತಗಳ ವಿಭಜನೆಯೂ ಆಗುತ್ತಿದೆ.

ತಮಿಳುನಾಡಿನ ಪ್ರಮುಖ ಪ್ರಾದೇಶಿಕ ಪಕ್ಷಗಳು

1. ದ್ರಾವಿಡ ಮುನ್ನೇತ್ರ ಕಳಗಂ (DMK): ಪ್ರಸ್ತುತ ಆಡಳಿತಾರೂಢ ಪಕ್ಷ, ದ್ರಾವಿಡ ಸಿದ್ಧಾಂತದ ಆಧಾರದ ಮೇಲೆ ರಚನೆಯಾಗಿದೆ.

2. ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK): ಡಿಎಂಕೆಯ ಪ್ರಮುಖ ಪ್ರತಿಸ್ಪರ್ಧಿ ಪಕ್ಷ ಇದಾಗಿದೆ.

3. ನಾಮ್ ತಮಿಳರ್ ಕಚ್ಚಿ (NTK): ಸೀಮಾನ್ ನೇತೃತ್ವದ ತಮಿಳು ರಾಷ್ಟ್ರೀಯತಾವಾದಿ ಪಕ್ಷ.

4. ಪಟ್ಟಾಲಿ ಮಕ್ಕಳ್ ಕಚ್ಚಿ (PMK): ರಾಮದಾಸ್ ನೇತೃತ್ವದ ಪಕ್ಷ, ಮುಖ್ಯವಾಗಿ ವನ್ನಿಯಾರ್ ಸಮುದಾಯದ ಬೆಂಬಲ ಈ ಪಕ್ಷಕ್ಕೆ ಇದೆ.

5. ವಿದುತಲೈ ಚಿರುತೈಗಲ್ ಕಚ್ಚಿ (VCK): ತೊಲ್. ತಿರುಮಾವಲವನ್ ನೇತೃತ್ವದ ದಲಿತ ಪರ ಪಕ್ಷ.

6. ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ (DMDK): ನಟ ವಿಜಯಕಾಂತ್ ಸ್ಥಾಪಿಸಿದ ಪಕ್ಷ.

7. ಮಕ್ಕಳ್ ನೀಧಿ ಮೈಯಂ (MNM): ನಟ ಕಮಲ್ ಹಾಸನ್ ಸ್ಥಾಪಿಸಿದ ಪಕ್ಷ.

8. ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (AMMK): ಟಿಟಿವಿ ದಿನಕರನ್ ನೇತೃತ್ವದ ಪಕ್ಷ.

9. ತಮಿಳಗ ವಾಜ್ವುರಿಮೈ ಕಚ್ಚಿ (TVK): ಟಿ. ವೇಲ್ಮುರುಗನ್ ಅವರು ಈ ಪಕ್ಷವನ್ನು ಸ್ಥಾಪಿಸಿದ್ದು, ತಮಿಳು ಭಾಷೆ, ನಾಡು - ನುಡಿ ಸಿದ್ಧಾಂತವನ್ನು ಒಳಗೊಂಡಿದೆ.

10. ತಮಿಳಗ ವೆಟ್ರಿ ಕಳಗಂ (TVK) ನಟ, ರಾಜಕಾರಣಿ ವಿಜಯ್ ಅವರ ಸ್ಥಾಪಿಸಿ, ಮುನ್ನಡೆಸಿರುವ ಹೊಸ ಪಕ್ಷ.

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಇರುವ ಸವಾಲು

ಕರ್ನಾಟಕದಲ್ಲೂ ದಕ್ಷಿಣ ಭಾರತದ ಉಳಿದ ರಾಜ್ಯಗಳಂತೆ ಪ್ರಾದೇಶಿಕ ಪಕ್ಷ ಪ್ರಬಲವಾಗಬೇಕು ಎನ್ನುವ ಆಸೆ ಕನ್ನಡಿಗರಲ್ಲೂ ಇದೆ. ಆದರೆ ಕರ್ನಾಟಕದ ವಿಭಿನ್ನ ಭಾಗಗಳಲ್ಲಿ ಕಲ್ಯಾಣ ಕರ್ನಾಟಕ, ಕರಾವಳಿ ಹಾಗೂ ಕಿತ್ತೂರು ಕರ್ನಾಟಕದಲ್ಲಿ ಭಿನ್ನ ಸಂಸ್ಕೃತಿಯಿದ್ದು, ಎಲ್ಲರನ್ನೂ ಒಂದು ಗೂಡಿಸುವಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಸಾಧ್ಯವಾಗುತ್ತಿಲ್ಲ. ಕೆಲವು ಪಕ್ಷಗಳು ಕೇವಲ ಜಾತಿಗೆ ಸೀಮಿತವಾಗುತ್ತಿರುವುದು, ಇನ್ನೂ ಕೆಲವು ಪಕ್ಷಗಳು ಹಳೆ ಮೈಸೂರು ಭಾಗಕ್ಕೆ ಸೀಮಿತವಾಗಿವೆ. ತಮಿಳುನಾಡು ಮತ್ತು ಆಂಧ್ರಪ್ರದೇಶದಂತೆ ಇಲ್ಲಿನ ಪ್ರಾದೇಶಿಕ ಪಕ್ಷಗಳು ಮತದಾರರಲ್ಲಿ ಬಲವಾದ ಪ್ರಾದೇಶಿಕ ಅಸ್ಮಿತೆಯನ್ನು ಮೂಡಿಸುವಲ್ಲಿ ವಿಫಲವಾಗಿವೆ. ಈ ಎಲ್ಲ ಕಾರಣಗಳಿಂದ ಕರ್ನಾಟಕದಲ್ಲಿ ಪ್ರಬಲ ಪ್ರಾದೇಶಿಕ ಪಕ್ಷ ಇಲ್ಲದಂತಾಗಿದೆ.

South India

ಕೇರಳದ ರಾಜಕೀಯವು ಭಿನ್ನವಾಗಿದೆ

ಇನ್ನು ದಕ್ಷಿಣ ಭಾರತದ ಕೇರಳ ರಾಜ್ಯದಲ್ಲಿ ರಾಜಕೀಯವು ಭಿನ್ನವಾಗಿದೆ. ಕೇರಳದಲ್ಲಿ ಪ್ರಾದೇಶಿಕ ಪಕ್ಷಗಳಿಗಿಂತಲೂ ಕಮ್ಯೂನಿಸ್ಟ್‌ ಪಾರ್ಟಿ ಹಾಗೂ ಎಡಪಂಥದ ಪರವಾದ ಒಲವು ಹೆಚ್ಚಾಗಿದೆ. ಇನ್ನು ಕೇರಳ ರಾಜಕೀಯದಲ್ಲಿ ಎರಡು ಪ್ರಮುಖ ಒಕ್ಕೂಟಗಳು ಇವೆ. ಕಮ್ಯುನಿಸ್ಟ್ ಪಕ್ಷದ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ (LDF) ಮತ್ತು ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ (UDF)ದ ನಡುವೆ ಪ್ರಬಲ ಪೈಪೋಟಿ ಇದೆ.

ದಕ್ಷಿಣ ಭಾರತದ ಪ್ರಮುಖ ಪ್ರಾದೇಶಿಕ ಪಕ್ಷಗಳ ವಿವರ ಇಲ್ಲಿದೆ

ಕರ್ನಾಟಕದ ಪ್ರಮುಖ ಪ್ರಾದೇಶಿ ಪಕ್ಷಗಳು

ಜನತಾದಳ (ಜಾತ್ಯತೀತ) - JD(S): ಹೆಚ್.ಡಿ. ದೇವೇಗೌಡ ಅವರ ನೇತೃತ್ವದ ಈ ಪಕ್ಷವು ದಶಕಗಳಿಂದ ಕರ್ನಾಟಕದ ಪ್ರಮುಖ ರಾಜಕೀಯ ಪಕ್ಷವಾಗಿದೆ. ಆದರೆ ಕಾಂಗ್ರೆಸ್ - ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಈ ಪಕ್ಷಕ್ಕೆ ಹಿನ್ನಡೆ ಆಗಿದೆ.

ಕರ್ನಾಟಕ ರಾಜ್ಯ ರೈತ ಸಂಘ (KRRS): ರೈತರ ಹಕ್ಕುಗಳಿಗಾಗಿ ಹೋರಾಡುವ ಪ್ರಮುಖ ಸಂಘಟನೆ, ಚುನಾವಣೆಯಲ್ಲೂ ಸ್ಪರ್ಧೆ ಮಾಡುತ್ತದೆ.

ಕನ್ನಡ ಚಳವಳಿ ವಾಟಾಳ್ ಪಕ್ಷ (KCVP): ವಾಟಾಳ್ ನಾಗರಾಜ್ ನೇತೃತ್ವದ ಪ್ರಾದೇಶಿಕ ಪಕ್ಷ.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ: ರವಿ ಕೃಷ್ಣಾರೆಡ್ಡಿ ಅವರು ಸಮಾನ ಮನಸ್ಕರೊಂದಿಗೆ ಸ್ಥಾಪಿಸಿರುವ ಪಕ್ಷವಾಗಿದೆ. ಭ್ರಷ್ಟಾಚಾರ ವಿರೋಧಿ ಅಭಿಯಾನದಲ್ಲಿ ಮುಂಚೂಣಿಯಲ್ಲಿದೆ.

ಉತ್ತಮ ಪ್ರಜಾಕೀಯ ಪಕ್ಷ: ನಟ ಉಪೇಂದ್ರ ಅವರು ಸ್ಥಾಪಿಸಿದ ಪ್ರಾದೇಶಿಕ ಪಕ್ಷ.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (KRPP): ಜನಾರ್ದನ ರೆಡ್ಡಿ ಸ್ಥಾಪಿಸಿದ ಇತ್ತೀಚಿನ ಪ್ರಾದೇಶಿಕ ಪಕ್ಷ.

ಇತರ ನೋಂದಾಯಿತ ಪಕ್ಷಗಳು: ಕರುನಾಡು ಪಕ್ಷ (KAP), ನಮ್ಮ ಕಾಂಗ್ರೆಸ್ (NAC), ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಕರ್ನಾಟಕ).

ಆಂಧ್ರಪ್ರದೇಶದ ಪ್ರಮುಖ ಪ್ರಾದೇಶಿಕ ಪಕ್ಷಗಳು

ತೆಲುಗು ದೇಶಂ ಪಾರ್ಟಿ (TDP): ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಪ್ರಬಲ ಪ್ರಾದೇಶಿಕ ಪಕ್ಷ.

ವೈ.ಎಸ್.ಆರ್. ಕಾಂಗ್ರೆಸ್ ಪಾರ್ಟಿ (YSRCP): ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಪಕ್ಷ.

ಜನಸೇನಾ ಪಾರ್ಟಿ (JSP): ನಟ ಮತ್ತು ರಾಜಕಾರಣಿ ಪವನ್ ಕಲ್ಯಾಣ್ ನೇತೃತ್ವದ ಪಕ್ಷ.

ತೆಲಂಗಾಣದ ಪ್ರಮುಖ ಪ್ರಾದೇಶಿಕ ಪಕ್ಷಗಳು

ತೆಲಂಗಾಣದಲ್ಲೂ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿವೆ. ಅವುಗಳಲ್ಲಿ ಪ್ರಮುಖ ಪಕ್ಷಗಳ ವಿವರ ಇಲ್ಲಿದೆ.

ಭಾರತ ರಾಷ್ಟ್ರ ಸಮಿತಿ (BRS - ಹಿಂದೆ TRS): ಇದು ತೆಲಂಗಾಣದ ಪ್ರಮುಖ ಪ್ರಾದೇಶಿಕ ಪಕ್ಷವಾಗಿದೆ. ಕೆ. ಚಂದ್ರಶೇಖರ್ ರಾವ್ (KCR) ನೇತೃತ್ವದ, ತೆಲಂಗಾಣ ಆಂದೋಲನವನ್ನು ಮುನ್ನಡೆಸಿದ ಮತ್ತು ರಾಜ್ಯದ ಮೊದಲ ಸರ್ಕಾರವನ್ನು ರಚಿಸಿದ ಪಕ್ಷ ಇದಾಗಿದೆ.

ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM): ಹೈದರಾಬಾದ್ (GHMC) ಪ್ರದೇಶದಲ್ಲಿ ಬಲವಾದ ಪ್ರಭಾವ ಹೊಂದಿರುವ ಪಕ್ಷ.

ತೆಲಂಗಾಣ ಜನ ಸಮಿತಿ (TJS): ಪ್ರೊ. ಕೋದಂಡರಾಮ್ ನೇತೃತ್ವದ ಪಕ್ಷ.

ಇತರ ಪ್ರಮುಖ ಪ್ರಾದೇಶಿಕ ಪಕ್ಷಗಳು: ತೆಲಂಗಾಣ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ತೆಲಂಗಾಣ ಪ್ರಜಾ ಫ್ರಂಟ್, ತೆಲಂಗಾಣ ಜನತಾ ಪಾರ್ಟಿ, ಮತ್ತು ತೆಲಂಗಾಣ ಲೇಬರ್ ಪಾರ್ಟಿ.

South India: ದಕ್ಷಿಣ ಭಾರತದ ಪ್ರಾದೇಶಿಕ ಪಕ್ಷಗಳ ಬಗ್ಗೆ ಜನ ಹೆಚ್ಚಾಗಿ ಕೇಳುವ ಪ್ರಶ್ನೆಗಳು

1. ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳು ಯಾವ ಕಾರಣಕ್ಕೆ ಬಲವಾಗಿವೆ

ಭಾಷೆ, ಸಂಸ್ಕೃತಿ ಮತ್ತು ರಾಜ್ಯ ಹಿತಾಸಕ್ತಿಗಳ ಮೇಲೆ ಒತ್ತು ನೀಡುವುದರಿಂದ ಪ್ರಾದೇಶಿಕ ಪಕ್ಷಗಳು ಬಲಗೊಂಡಿವೆ.

2. ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳು ದುರ್ಬಲವಾಗುವುದಕ್ಕೆ ಕಾರಣವೇನು

ದ್ರಾವಿಡ ಚಳವಳಿ ಪ್ರಭಾವ ಮತ್ತು ಪ್ರಾದೇಶಿಕ ವಿಚಾರಗಳಲ್ಲಿ ಏಕತೆ ರಾಷ್ಟ್ರೀಯ ಪಕ್ಷಗಳಿಗೆ ಸವಾಲಾಗಿದೆ.

3. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಯಶಸ್ಸು ಸಾಧ್ಯವಾಗುತ್ತಿಲ್ಲ ಯಾಕೆ

ಕಾಂಗ್ರೆಸ್ - ಬಿಜೆಪಿ ರಾಷ್ಟ್ರೀಯ ಪಕ್ಷಗಳ ಪ್ರಭಾವ, ಮತ ವಿಭಜನೆ ಮತ್ತು ಬಲವಾದ ಸಂಘಟನೆ ಕೊರತೆ.

4. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಪ್ರಾದೇಶಿಕ ಪಕ್ಷಗಳ ಸ್ಥಿತಿ ಹೇಗಿದೆ ?

TDP, YSRCP ಹಾಗೂ BRSಂತಹ ಪಕ್ಷಗಳು ರಾಜ್ಯ ರಾಜಕೀಯದಲ್ಲಿ ಪ್ರಭುತ್ವ ಸಾಧಿಸಿವೆ.

5. ಕೇರಳದಲ್ಲಿ ಪ್ರಾದೇಶಿಕ ಪಕ್ಷಗಳಿಗಿಂತ ಒಕ್ಕೂಟ ರಾಜಕೀಯ ಏಕೆ ಮುಖ್ಯವಾಗಿದೆ.

LDF ಮತ್ತು UDF ಒಕ್ಕೂಟಗಳ ನಡುವಿನ ನೇರ ಪೈಪೋಟಿಯಿಂದ ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚು ಅವಕಾಶ ಇಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+