Get Updates
Get notified of breaking news, exclusive insights, and must-see stories!

Finn Allen: ಆರ್‌ಸಿಬಿಯಲ್ಲಿ ಅವಕಾಶ ವಂಚಿತರಾಗಿ ಬೆಂಚ್ ಕಾದಿದ್ದ ಫಿನ್‌ ಅಲೆನ್ ವಿಶ್ವದಾಖಲೆ

Finn Allen RCB: ಟಿ20 ವಿಶ್ವಕಪ್ 2026ರ ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್‌ ಅಬ್ಬರದ ಬ್ಯಾಟಿಂಗ್ ಮಾಡಿ ತಂಡ ಫೈನಲ್‌ ಪ್ರವೇಶಿಸಲು ಪ್ರಮುಖ ಪಾತ್ರವಹಿಸಿದರು. ಅಷ್ಟೇ ಅಲ್ಲದೆ, ಹೊಸ ದಾಖಲೆಯೊಂದನ್ನು ಸಹ ಮಾಡಿದರು. ಕೇವಲ 33 ಎಸೆತಗಳಲ್ಲಿ ಶತಕ ಸಿಡಿಸಿ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದರು. ಇದರ ಬೆನ್ನಲ್ಲೇ ಆರ್‌ಸಿಬಿ ಹೆಸರು ಮುನ್ನೆಲೆಗೆ ಬಂದಿದೆ.

ವಿಶ್ವ ಕ್ರಿಕೆಟ್‌ನಲ್ಲಿ ಹೆಸರು ಮಾಡುತ್ತಿರುವ ಇದೇ ಫಿನ್ ಅಲೆನ್ ಒಮ್ಮೆ ಐಪಿಎಲ್‌ನಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದ ಆಟಗಾರರಾಗಿದ್ದರು ಎಂಬುದು ಹಲವರಿಗೆ ಅಚ್ಚರಿಯ ಸಂಗತಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಇದ್ದರೂ ಅವರಿಗೆ ಹಲವು ಸೀಸನ್‌ಗಳ ಕಾಲ ಒಂದು ಪಂದ್ಯವನ್ನೂ ಆಡಲು ಅವಕಾಶ ಸಿಕ್ಕಿರಲಿಲ್ಲ.

Finn Allen Record T20 World Cup 2026 Century Puts Spotlight Back on RCB s Missed Opportunity

ಮೂರು ವರ್ಷ ಬೆಂಚ್ ಕಾದ ಅಲೆನ್

2021ರ ಮಾರ್ಚ್ 10ರಂದು ಆಸ್ಟ್ರೇಲಿಯಾದ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಜೋಶ್ ಫಿಲಿಪೆ ಗಾಯಗೊಂಡ ಕಾರಣ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿಯಬೇಕಾಯಿತು. ಈ ವೇಳೆ ನ್ಯೂಜಿಲೆಂಡ್‌ನ ಟಿ20 ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಫಿನ್ ಅಲೆನ್ ಅವರಿಗೆ ಅವಕಾಶ ದೊರೆಯಿತು. ಫಿಲಿಪೆ ಬದಲಿಗೆ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರಿಸಿಕೊಳ್ಳಲಾಯಿತು.

ಆದರೆ, ಆರ್‌ಸಿಬಿ ತಂಡದಲ್ಲಿ ಸೇರ್ಪಡೆಯಾದ ಬಳಿಕವೂ ಅಲೆನ್‌ಗೆ ಪಂದ್ಯಾವಕಾಶ ಸಿಗಲಿಲ್ಲ. ಮೂರು ಸೀಸನ್‌ಗಳ ಕಾಲ ತಂಡದಲ್ಲೇ ಇದ್ದರೂ ಅವರು ಒಂದು ಪಂದ್ಯವೂ ಆಡಲಿಲ್ಲ. ಪ್ರತಿ ಸೀಸನ್‌ನಲ್ಲಿ ಅವರನ್ನು ತಂಡದಲ್ಲಿ ಉಳಿಸಿಕೊಂಡಿದ್ದರೂ, ಒಂದು ಒಂದು ಆಡುವ ಅವಕಾಶ ಕೂಡ ಸಿಗಲಿಲ್ಲ. ಈ ಅವಧಿಯಲ್ಲಿ ಆರ್‌ಸಿಬಿ ತಂಡ ಒಟ್ಟು 45 ಪಂದ್ಯಗಳನ್ನು ಆಡಿತ್ತು.
ಐಪಿಎಲ್‌ನಲ್ಲಿ ಸಿಗದ ಅವಕಾಶ

ಅಂದರೆ, ಅಲೆನ್ ಸುಮಾರು 45 ಪಂದ್ಯಗಳಲ್ಲಿ ಹೊರಗಡೆಯೇ ಕೂರಬೇಕಾಯಿತು. ಈ ನಡುವೆ ಅವರು ನ್ಯೂಜಿಲೆಂಡ್ ರಾಷ್ಟ್ರೀಯ ತಂಡಕ್ಕೂ ಪದಾರ್ಪಣೆ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನಾರ್ಹ ಪ್ರದರ್ಶನ ನೀಡಿದರು. ಹಲವು ಟಿ20 ಲೀಗ್‌ಗಳಲ್ಲಿ ಸ್ಫೋಟಕ ಇನಿಂಗ್ಸ್ ಆಡಿದರೂ, ಐಪಿಎಲ್‌ನಲ್ಲಿ ಮಾತ್ರ ಅವರಿಗೆ ಅವಕಾಶ ಸಿಗಲಿಲ್ಲ. 2022 ಮತ್ತು 2023ರ ಆವೃತ್ತಿಗಳಲ್ಲಿ ರಾಯಲ್‌ ಚಾಲೆಂಜರ್ಡ್‌ ಬೆಂಗಳೂರು ತಂಡ ಮಧ್ಯಮ ಕ್ರಮಾಂಕದಲ್ಲಿ ಹಲವು ಬಾರಿ ವೈಫಲ್ಯ ಅನುಭವಿಸಿತು. ಆದರೂ ತಂಡದ ಬ್ಯಾಟಿಂಗ್ ಕ್ರಮದಲ್ಲಿ ದೊಡ್ಡ ಬದಲಾವಣೆ ಮಾಡಲಾಗಲಿಲ್ಲ. ಅಲೆನ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸುವ ಅವಕಾಶವೂ ಇತ್ತು. ಆದರೂ, ತಂಡ ಈ ಸಾಹಸವನ್ನು ಮಾಡಲಿಲ್ಲ.

ಫಿನ್ ಅಲೆನ್ ಕೆಕೆಆರ್‌ಗೆ ಸೇರ್ಪಡೆ

ಕೊನೆಗೆ 2024ರ ವೇಳೆಗೆ ಫಿನ್ ಅಲೆನ್ ಆರ್‌ಸಿಬಿ ತಂಡವನ್ನು ತೊರೆದು ಹೊರಬಂದರು. ನಂತರ ಅವರು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸೇರ್ಪಡೆ ಆದರು. ಇದೀಗ ಅವರ ಇತ್ತೀಚಿನ ಅದ್ಭುತ ಫಾರ್ಮ್ ನೋಡಿದರೆ, ಮುಂದಿನ ಐಪಿಎಲ್ ಸೀಸನ್‌ನಲ್ಲಿ ಕೆಕೆಆರ್ ಪರ ಅಲೆನ್ ಸ್ಫೋಟಕ ಪ್ರದರ್ಶನ ನೀಡುವ ನಿರೀಕ್ಷೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಐಪಿಎಲ್‌ನಲ್ಲಿ ಅವಕಾಶ ಸಿಗದೆ ಬೆಂಚ್ ಕಾಯಬೇಕಾದ ಆಟಗಾರನೇ ಇಂದು ವಿಶ್ವಕಪ್ ವೇದಿಕೆಯಲ್ಲಿ ದಾಖಲೆ ಬರೆಯುತ್ತಿರುವುದು ಕ್ರಿಕೆಟ್‌ನ ವಲಯದಲ್ಲಿ ಅಚ್ಚರಿ ಮೂಡಿಸಿದೆ. ವಿಶೇಷ ಅಂದ್ರೆ ಕೊಲ್ಕತ್ತಾದಲ್ಲೇ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿರುವುದು. ಹೀಗಾಗಿ ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಅಲೆನ್ ಅವರನ್ನು ಟಾಪ್ ಆರ್ಡರ್‌ನಲ್ಲಿ ಬ್ಯಾಟಿಂಗ್‌ಗೆ ಇಳಿಸುವ ಸಾಧ್ಯತೆ ಹೆಚ್ಚಿದೆ. ಟಿ20 ವಿಶ್ವಕಪ್‌ ಟೂರ್ನಿ ಮುಗಿದ ತಕ್ಷಣವೇ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭ ಆಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+