ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಸಸಾಹಿತ್ಯ ಮಾಹಿತಿ ಬೆರಳ ತುದಿಯಲ್ಲೇ ಲಭ್ಯ

By Mahesh
|
Google Oneindia Kannada News

Dasasahithya mahiti website launch
ಬೆಂಗಳೂರು, ಸೆ.8: ದಾಸ ಸಾಹಿತ್ಯವು ಭಾರತೀಯ ಸಂಸ್ಕೃತಿಯ ಮೌಲ್ಯವನ್ನು ಒಳಗೊಂಡಿದೆ ಎಂದು ಪೂರ್ಣಪ್ರಜ್ಞಾ ವಿದ್ಯಾಪೀಠದ ಪ್ರಾಚಾರ್ಯ ಡಾ.ನಾಗಸಂಪಿಗೆ ವ್ಯಾಖ್ಯಾನಿಸಿದರು. ಕತ್ರಿಗುಪ್ಪೆಯ ಪೂರ್ಣಪ್ರಜ್ಞಾ ವಿದ್ಯಾಪೀಠದ ಸಭಾಂಗಣದಲ್ಲಿ ಹರಿದಾಸ ಸಾಹಿತ್ಯ ಮಾಹಿತಿಯುಳ್ಳ 'ದಾಸಸಾಹಿತ್ಯಮಾಹಿತಿ' ಎಂಬ ವೆಬ್ ತಾಣವನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ವಾದಿರಾಜ, ತ್ಯಾಗರಾಜ, ಪುರಂದರದಾಸ, ಕನಕದಾಸ ಮುಂತಾದ ದಾಸವರೇಣ್ಯರು ಈ ಕ್ಷೇತ್ರಕ್ಕೆ ವಿಶೇಷವಾದ ಕೊಡುಗೆ ನೀಡಿದ್ದಾರೆ. ದಾಸ ಸಾಹಿತ್ಯವು ಸಾಮಾಜಿಕ ಹಾಗೂ ಧಾರ್ಮಿಕತೆಯ ವಿವಿಧ ಆಯಾಮಗಳನ್ನು ಹಾಗೂ ಭಾರತೀಯ ಸಂಸ್ಕೃತಿಯ ಮೌಲ್ಯವನ್ನು ಒಳಗೊಂಡಿವೆ. ಅವುಗಳನ್ನು ಎಲ್ಲರೂ ಅರಿಯುವಂತೆ ಮಾಡುವ ಕಾರ್ಯ ಇಂದು ಆಗಬೇಕಿದೆ ಎಂದರು.

ದಾಸ ಸಾಹಿತ್ಯ ಮಾಹಿತಿಯ ವೆಬ್‌ಸೈಟ್ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಜಿ. ವೆಂಕಟೇಶ್ ಮಾತನಾಡಿ, ಉಚಿತ ವೆಬ್‌ಸೈಟ್‌ನ ವಿಶೇಷತೆಗಳ ಬಗ್ಗೆ ವಿವರಿಸಿದರು. ವೆಬ್‌ಸೈಟ್‌ನಲ್ಲಿ ಒಟ್ಟು ಆರು ಭಾಗಗಳಾಗಿ ವಿಂಗಡಿಸಿದೆ. ವೆಬ್‌ಸೈಟ್ ಉದ್ದೇಶ ವಿನ್ಯಾಸಕರ ಪರಿಚಯ, ಸಂಗೀತ ಲಹರಿ,ಬ್ಲಾಗ್, ಗ್ರಂಥಸೂಚಿ, ಜೀವನ ಇತಿಹಾಸ ಮತ್ತು ನಿಯತಕಾಲಿಕೆಗಳು ಸೇರಿಕೊಂಡಿದೆ.

ಆಯ34 ದಾಸರ ಪದಗಳನ್ನು ಕನ್ನಡ, ಇಂಗ್ಲೀಷ್, ಹಿಂದಿ, ಮಲೆಯಾಳಂ, ತಮಿಳು ಮತ್ತು ತೆಲುಗು ಲಿಪಿಯಲ್ಲಿ ಸಾಹಿತ್ಯ ಮತ್ತು ಕರ್ನಾಟಕ ಸಂಗೀತ ಅಳವಡಿಸಿ ಧ್ವನಿ ಮುದ್ರಣ ಮಾಡಲಾಗಿದೆ. ದಾಸ ಸಾಹಿತ್ಯದ ಕುರಿತಾದ ಮಾಹಿತಿಗಳನ್ನು ಹಂಚಿಕೊಳ್ಳಲು ಅವಕಾಶವಿದೆ . ವಿವಿಧ ಕಡೆ ಪ್ರಕಟವಾಗಿರುವ 420 ಪುಸ್ತಕಗಳ ಲೇಖಕರು, ಪ್ರಕಾಶನ ವಿಳಾಸವನ್ನು ಪ್ರಕಟಿಸಲಾಗಿದೆ.

372 ದಾಸವರೇಣ್ಯರ ಸಂಕ್ಷಿಪ್ತ ಜೀವನದ ಪರಿಚಯ ಹಾಗೂ ಬರಹಗಳ ಕುರಿತು ಜಿ. ವೆಂಕಟೇಶ ಅವರು ಬರೆದಿರುವ ಈಗಾಗಲೇ ದಾಸ ಸಾಹಿತ್ಯ ಕೋಶ ಪ್ರಕಟವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X