ದರ್ಶನ್ ಜೈಲು: ಪೊಲೀಸರು ಫುಲ್ ಆಕ್ಟಿವ್; ಈ ಕೆಲಸವನ್ನು ಬೇಗ ಮಾಡುವ ಪ್ಲ್ಯಾನ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಅವರ ಸಹಚರರು ಈಗ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಈ ವರೆಗೆ ಪೊಲೀಸ್ ಇಲಾಖೆ ಮಾಡಿದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಇಷ್ಟೆಲ್ಲಾ ಆದಮೇಲೂ ಪೊಲೀಸರು ತಣ್ಣಗಂತೂ ಕೂತೇ ಇಲ್ಲ. ಇನ್ನು ಸ್ಪೀಡ್ ಆಗಿ ಕೆಲಸವನ್ನು ಮುಂದುವರೆಸಿದ್ದಾರೆ. ದರ್ಶನ್ ಜೈಲಿಗೆ ಹೋದ ಬಳಿಕ ಪೊಲೀಸರ ಕಾರ್ಯಕ್ಕೆ ಚುರುಕು ಮುಟ್ಟಿದೆ.
ಈ ಕೇಸ್‌ಗೆ ಸಂಬಂಧಿಸಿದಂತೆ ಪೊಲೀಸರು ಬಾಕಿ ಇರುವ ಹಲವು ಕೆಲಸಗಳನ್ನು ಶೀಘ್ರದಲ್ಲಿ ಮುಗಿಸುವ ಯೋಜನೆಯನ್ನು ಹೆಣೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ತಂಡಗಳನ್ನು ರಚಿಸಿಕೊಂಡು ಸಮನ್ವಯದೊಂದಿಗೆ ಕೆಲಸ ಮಾಡಲು ಮುಂದಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 12 ದಿನ ಪೊಲೀಸ್ ಕಸ್ಟಡಿ ಬಳಿಕ, ಈಗ ಪೊಲೀಸರು ಸಾಕ್ಷ್ಯ ಸಂಗ್ರಹಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಪ್ರಕರಣವನ್ನು ಬೇಗ ತಾರಕ ಅಂತ್ಯ ಕಾಣಿಸಲು ಪೊಲೀಸರು ಪಣ ತೊಟ್ಟಂತೆ ಕಾಣುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಗ ಸಾಕ್ಷ್ಯಗಳನ್ನು ಕಲೆ ಹಾಕುವ ಕಾರ್ಯಕ್ಕೆ ಮುಂದಾಗಿದ್ದಾರೆ. ಆನ್ ಫೀಲ್ಡ್ ಹಾಗೂ ಡಿಜಿಟಲ್ ಸಾಕ್ಷ್ಯ ಸಂಗ್ರಹಕ್ಕೆ ತಲಾ ಒಂದೊಂದು ತಂಡಗಳನ್ನು ನೇಮಿಸಲಾಗಿದೆ. ಖಾಕಿ ಪಡೆಯ ಇನ್ನೊಂದು ತಂಡ ಚಾರ್ಜ್ ಶೀಟ್, ಪೇಪರ್ ವರ್ಕ್‌ಗಳನ್ನು ಮಾಡುತ್ತಿದೆ. ಇದೇ ವೇಳೆ ಇಲಾಖೆ ಅಭಿಮಾನಿಗಳ ನೆರವನ್ನು ಸಹ ಪಡೆಯಲಿದೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ಮಹತ್ವದ ಟೆಕ್ನಿಕಲ್ ಸಾಕ್ಷ್ಯಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹದಿನೇಳು ಮೊಬೈಲ್ಗಳ ಡಾಟಾ ರಿಟ್ರೀವ್ ಕಾರ್ಯ ಪ್ರಾರಂಭಿಸಿದ್ದಾರೆ. ಸಿಐಡಿ ಟೆಕ್ನಿಕಲ್ ಸೆಲ್ ನಲ್ಲಿ ಡಿಜಿಟಲ್ ಸಾಕ್ಷ್ಯಗಳ ಸಂಗ್ರಹ ಕಾರ್ಯ ನಡೆಯುತ್ತಿದೆ. ದರ್ಶನ್, ಪವಿತ್ರಾ, ಪವನ್ ಮತ್ತು ವಿನಯ್ ಮೊಬೈಲ್ ಸೇರಿದಂತೆ ಇನ್ನೂ ಕೆಲವು ಆರೋಪಿಗಳ ಮೊಬೈಲ್ ಡಾಟಾ ರಿಟ್ರೀವ್ ನಡೆಯುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದಾಗಲೇ ಸುಮಾರು 62 ಸಿಸಿಟಿವಿಗಳ ಕ್ಯಾಮೆರಾಗಳ ದೃಶ್ಯಗಳನ್ನು ಸಂಗ್ರಹಿಸಿದ್ದಾರೆ. ಇದರಲ್ಲಿ ಚಿತ್ರದುರ್ಗದಿಂದ ಹಿಡಿದು ಪಟ್ಟಣಗೆರೆ ಶೆಡ್ಡವರೆಗೆ ಕರೆತಂದ ದೃಶ್ಯಗಳು ಸಹ ಸೇರಿವೆ. ಇನ್ನು ಪಟ್ಟಣಗೆರೆ ಶೆಡ್‌ನಿಂದ ಸುಮ್ಮನಹಳ್ಳಿ ಮೋರಿಯವರೆಗೆ ಬರೋಬ್ಬರಿ 36 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಸಂಗ್ರಹಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿ ಚಾರ್ಜ್ ಶೀಟ್ ಸಿದ್ಧ ಪಡಿಸಲು ಯೋಜನೆ ರೂಪಿಸಲಾಗಿದೆ. ಈ ಪ್ರಕರಣದ ವಿಚಾರಣ ಪ್ರಕ್ರಿಯೆಯನ್ನೇ 8 ತಿಂಗಳ ಒಳಗೆ ಮುಗಿಸು ಪ್ಲ್ಯಾನ್ ಖಾಕಿ ಪಡೆಯದ್ದಾಗಿದೆ. ತಮ್ಮ ಮೇಲಿನ ಎಲ್ಲ ಒತ್ತಡವನ್ನು ಮೆಟ್ಟಿನಿಂತ ಅಧಿಕಾರಿಗಳು ಪ್ರಕರಣವನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಬೇಗ ಶಾರ್ಜ್ ಶೀಟ್ ಸಲ್ಲಿಸುವ ಪ್ಲ್ಯಾನ್ ಖಾಕೆ ಪಡೆಯದ್ದಾಗಿದೆ. ಇಲ್ಲದಿದ್ದರೆ ಆರೋಪಿಗಳು ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications