ಕಬ್ಬನ್ ಪಾರ್ಕ್‌ನಲ್ಲಿ 65 ಇಂಗು ಗುಂಡಿಗಳ ನಿರ್ಮಾಣ
ಬೆಂಗಳೂರು, ಮೇ 14 : ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ನೀರು ಇಂಗಿಸಲು 65 ಇಂಗು ಗುಂಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇಂಗು ಗುಂಡಿಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಎನ್‌ಜಿಓಗಳು ಈ ಕಾರ್ಯಕ್ಕೆ ಕೈ ಜೋಡಿಸಿವೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಎರಡು ವರ್ಷಗಳ ಹಿಂದೆ ಕಬ್ಬನ್ ಉದ್ಯಾನದಲ್ಲಿ 7 ಹಳೆಯ ಬಾವಿಗಳನ್ನು ನೀರು ಇಂಗಿಸಲು ಗುರುತಿಸಲಾಗಿತ್ತು. ಖಾಸಗಿ ಸಂಸ್ಥೆ, ಎನ್‌ಜಿಓಗಳ ನೆರವಿನಿಂದ ತೋಟಗಾರಿಕಾ ಇಲಾಖೆ ಬಾವಿಗಳಲ್ಲಿ ನೀರು ಇಂಗಿಸಲು ಅಗತ್ಯ ವ್ಯವಸ್ಥೆ ಮಾಡಿದೆ.
13 ರಿಂದ 16 ಅಡಿಯ 65 ಬಾವಿಗಳನ್ನು ಮಾಡಲಾಗುತ್ತಿದ್ದು, ಅದರಲ್ಲಿ ನೀರು ಇಂಗಿಸಲು ಬೇಕಾದ ವ್ಯವಸ್ಥೆಯನ್ನು ಮಾಡಲಾಗಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಬಾವಿಗಳಿಗೆ ನೀರನ್ನು ಹರಿಸಲಾಗುತ್ತದೆ.

ಇಂಡಿಯಾ ಕೇರ್ಸ್ ಫೌಂಡೇಷನ್ ಎಂಬ ಎನ್‌ಜಿಓ 'ಮಿಲಿಯನ್ ವೆಲ್ಸ್' ಎಂಬ ಅಭಿಯಾನದಡಿ ಇಂಗು ಗುಂಡಿಗಳ ನಿರ್ಮಾಣಕ್ಕೆ ಕೈ ಜೋಡಿಸಿದೆ. ಈ ಮೂಲಕ ಬೆಂಗಳೂರು ನಗರದಲ್ಲಿಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸಹಕಾರ ನೀಡಲಿದೆ.
ಬೆಂಗಳೂರಿನಲ್ಲಿರುವ ಬೋವಿ ಸಮುದಾಯದ 500 ಕುಟುಂಬಗಳನ್ನು ಗುರುತಿಸಲಾಗಿದೆ. ಬಾವಿ ತೆಗೆಯುವುದನ್ನು ಕೆಲಸವನ್ನು ಹಲವು ದಶಕಗಳಿಂದ ಅವರು ಮಾಡಿಕೊಂಡು ಬರುತ್ತಿದ್ದಾರೆ. ಅವರ ಮೂಲಕವೇ ಇಂಗು ಗುಂಡಿ ನಿರ್ಮಾಣ ಮಾಡಲಾಗುತ್ತಿದೆ.












Click it and Unblock the Notifications