ಬೆಂಗಳೂರಿನಲ್ಲಿ ಇಂದಿನಿಂದ ನಡೆಯಲಿದೆ ಡಿಕೆಶಿ ಆಸ್ತಿ ಪರಿಶೀಲನೆ
ಡಿಕೆ ಪ್ರಕರಣದಲ್ಲಿ ಐಟಿ ದಾಳಿಯಿಂದ ವಶಪಡಿಸಿಕೊಳ್ಳಲಾಗಿದ್ದ ಆಸ್ತಿಯ ಪರಿಶೀಲನೆ ಆಗಸ್ಟ್ 7ರಿಂದ ಆರಂಭ. ಬೆಂಗಳೂರಿನ ಐಟಿ ಇಲಾಖೆಯ ಪ್ರಾದೇಶಿಕ ಕಚೇರಿಯಲ್ಲಿ ನಡೆಯಲಿರುವ ಪರಿಶೀಲನೆ.
ಬೆಂಗಳೂರು, ಆಗಸ್ಟ್ 7: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮನೆಯ ಮೇಲೆ ಇತ್ತೀಚೆಗೆ ನಡೆದಿದ್ದ ಆದಾಯ ತೆರಿಗೆ ಇಲಾಖೆಯ ದಾಳಿಯ ವೇಳೆ ವಶಪಡಿಸಿಕೊಳ್ಳಲಾಗಿದ್ದ ಆಸ್ತಿಯ ಪರಿಶೀಲನೆ ಕಾರ್ಯ ಆಗಸ್ಟ್ 7ರಿಂದ ಆರಂಭವಾಗಲಿದೆ.
ಬೆಂಗಳೂರಿನಲ್ಲಿರುವ ಆದಾಯ ತೆರಿಗೆ ಇಲಾಖೆಯ ಪ್ರಾದೇಶಿಕ ಕಚೇರಿಯಲ್ಲೇ ಈ ಪರಿಶೀಲನೆ ನಡೆಯಲಿದೆ ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ.

ಈ ಪರಿಶೀಲನೆಗಾಗಿಯೇ ಕೇಂದ್ರದಿಂದ ಉನ್ನತ ಮಟ್ಟದ ಅಧಿಕಾರಿಗಳ ವಿಶೇಷ ತಂಡವೊಂದು ಬೆಂಗಳೂರಿಗೆ ಈಗಾಗಲೇ ಆಗಮಿಸಿದ್ದು, ಸೋಮವಾರ (ಆಗಸ್ಟ್ 7) ಬೆಳಗ್ಗೆಯಿಂದಲೇ ತನ್ನ ಕರ್ತವ್ಯಕ್ಕೆ ಹಾಜರಾಗಲಿದೆ.
ಡಿಕೆ ಶಿವಕುಮಾರ್ ವಿರುದ್ಧದ ಐಟಿ ದಾಳಿಗೆ ಸಂಬಂಧಿಸಿದ ಎಲ್ಲರನ್ನೂ ವಿಚಾರಣೆಗೊಳಪಡಿಸಲು ನಿರ್ಧರಿಸಲಾಗಿದ್ದು, ಈ ನಿಮಿತ್ತ ಎಳ್ಲರಿಗೂ ಸಮನ್ಸ್ ಜಾರಿಗೊಳಿಸಲಾಗಿದೆ.












Click it and Unblock the Notifications