BMTC: ನಿಗಮದಲ್ಲಿ ಕೋಟ್ಯಂತರ ಹಣ ಅವ್ಯವಹಾರ, ಏಳು ಮಂದಿ ಮೇಲೆ FIR, ಬಂಧನ

ಬೆಂಗಳೂರು, ಅಕ್ಟೋಬರ್ 04: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಹಿರಿಯ ಅಧಿಕಾರಿಗಳ ಸಹಿ ನಕಲು ಮಾಡಿದ ಆರೋಪದ ಮೆರೆಗೆ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಿಲ್ಸನ್ ಗಾರ್ಡನ್‌ ಪೊಲೀಸರು ಒಬ್ಬರನ್ನು ಬಂಧಿಸಿದ್ದಾರೆ.

ಹೌದು, ಬಿಎಂಟಿಸಿ ಕಮರ್ಷಿಯಲ್ ವಿಭಾಗದಲ್ಲಿ ಕೋಟಿಗಟ್ಟಲೆ ರೂಪಾಯಿಯ ಅವ್ಯವಹಾರ ನಡೆದಿದ್ದು, ಬಿಎಂಟಿಸಿಯ ಹಿರಿಯ ಅಧಿಕಾರಿಗಳ ಸೇರಿದಂತೆ ಒಟ್ಟು 7 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ಎಂದು ಟಿವಿ ನೈನ್ ವರದಿ ಮಾಡಿದೆ.

Crores of Scam in BMTC: FIR Filed on 7 Officers and Single Arrested by Police

ಸಹಾಯಕ ಭದ್ರತಾ ಮತ್ತು ವಿಜಿಲೆನ್ಸ್ ಅಧಿಕಾರಿಗಳಾದ ಸಿ.ಕೆ ರಮ್ಯ ನೀಡಿದ ದೂರಿನ ಆಧಾರದಲ್ಲಿ ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೋಲಿಸ್ ಠಾಣೆಯಲ್ಲಿ ಆರೋಪಿತ 7 ಮಂದಿ ಹಿರಿಯ ಅಧಿಕಾರಿಗಳ ಮೆಲೆ ಎಫ್‌ಐಆರ್‌ ದಾಖಲಿಸಲಾಗಿದೆ. ಒಬ್ (A1) ಆರೋಪಿ ಶ್ರೀರಾಮ್ ಮುಲ್ಕಾವನ್ ಅಧಿಕಾರಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ದಾಖಲೆಗಳ ಸೃಷ್ಟಿಗೆ ಸಹಿ ಕಲರ್ ಜೆರಾಕ್ಸ್

ಬಿಎಂಟಿಸಿ ನಿಗಮಕ್ಕೆ ಈ ಹಿಂದೆ ವ್ಯವಸ್ಥಾಪಕ ನಿರ್ದೇಶಕರಾದ (MD) ಶಿಖಾ ಅವರ ಮತ್ತು ಹಿಂದಿದ್ದ ಭದ್ರತಾ ಮತ್ತು ಜಾಗೃತ ದಳದ ನಿರ್ದೇಶಕ ಅರುಣ್.ಕೆ ಅವರ ಸಹಿಗಳನ್ನು ಕಲರ್ ಜೆರಾಕ್ಸ್ ಮಾಡುವ ಮೂಲಕ ನಕಲು ಮಾಡಿದ್ದಾರೆ ಈ ಮೂಲಕ ಫೇಕ್ ದಾಖಲೆ ಸೃಷ್ಟಿ ಕೋಟಿ ಕೋಟಿ ಹಣ ವಂಚಿಸಿದ್ದಾರೆ ಎಂದು ದೂರು ನೀಡಲಾಗಿದೆ.

Crores of Scam in BMTC: FIR Filed on 7 Officers and Single Arrested by Police

ಕೋಟ್ಯಂತರ ರೂಪಾಯಿ ಅಕ್ರಮ ಆರೋಪ ಮತ್ತು ದೂರಿನ ಮೇರೆಗೆ ಪೊಲೀಸರು ಎಚ್ಚೆತ್ತು ತನಿಖೆ ನಡೆಸುತ್ತಿದ್ದಾರೆ. ಅವ್ಯವಹಾರ ಕೇಳಿ ಬಂದ ಬೆನ್ನಲ್ಲೆ ಏಳು ಅಧಿಕಾರಿಗಳನ್ನು ಕಮರ್ಷಿಯಲ್ ವಿಭಾಗದಿಂದ ಬೇರೆ ವಿಭಾಗಗಳಿಗೆ ವರ್ಗಾಯಿಸಲಾಗಿದೆ.

BMTC ಯಲ್ಲಿ ಈ ಹಿಂದೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶಿಖಾ, ರೇಜು ಮತ್ತು ಭದ್ರತಾ ಮತ್ತು ‌ಜಾಗೃತದಳದ ನಿರ್ದೇಶಕ ಅರುಣ್. ಕೆ ಸಹಿಯನ್ನು ಪೋರ್ಜರಿ ಆಗಿದೆ. ನಕಲಿ ದಾಖಲೆಗಳ ಸೃಷ್ಟಿ ಮೂಲಕ 10.50 ಕೋಟಿ, 6.91 ಲಕ್ಷ ಹಾಗೂ 21.64 ಲಕ್ಷ, 1.5ಲಕ್ಷ ಹೀಗೆ ಒಟ್ಟು ಸುಮಾರು 17ಕೋಟಿ ರೂಪಾಯಿಗೆ ಹೆಚ್ಚು ಹಣ ಲಪಟಾಯಿಸಲು ನೋಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

ಆರೋಪಿಗಳ ಹೆಸರು

ಆರೋಪಿತ ಹೆಸರುಗಳನ್ನು ನೋಡುವುದಾದರೆ, ಹಿಂದಿನ ಮುಖ್ಯ ಸಂಚಾರ ವ್ಯವಸ್ಥಾಪಕ ಶ್ರೀ‌ರಾಮ್ ಮುಲ್ಕಾವನ್ (ಬಂಧಿಸಲಾಗಿದೆ), ವಿಭಾಗೀಯ ಸಂಚಾರ ಅಧಿಕಾರಿ ಶ್ಯಾಮಲಾ ಎಸ್. ಮದ್ದೋಡಿ, ಸಹಾಯಕ ಸಂಚಾರ ವ್ಯವಸ್ಥಾಪಕರು ಮಮತಾ. ಬಿ.ಕೆ, ಸಹಾಯಕ ಸಂಚಾರ ಅಧೀಕ್ಷಕಿ ಅನಿತಾ.ಟಿ, ಸಹಾಯಕ ಸಂಚಾರ ನಿರೀಕ್ಷಕಿ ಗುಣಶೀಲ, ಕಿರಿಯ ಸಹಾಯಕರಾದ ವೆಂಕಟೇಶ್. ಆರ್ ಮತ್ತು ಪ್ರಕಾಶ್ ಕೊಪ್ಪಳ ಅವರ ವಿರುದ್ಧ ದೂರು ನೀಡಲಾಗಿದೆ. ಬಾಕಿ ಆರು ಮಂದಿಗೆ ಶೋಧ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+