ಮನೆ ಖರೀದಿ ಮಾಡಬೇಕೆ?, ಕ್ರೆಡಾಯ್ ಎಕ್ಸ್‌ಪೋಗೆ ಬನ್ನಿ

ಬೆಂಗಳೂರು, ಆಗಸ್ಟ್ 20 : ಕಾನ್ಫೆಡೆರೇಶನ್ ಆಫ್ ರಿಯಲ್ ಎಸ್ಟೇಟ್ ಅಸೋಸಿಯೇಶನ್ಸ್ ಆಫ್ ಇಂಡಿಯಾದ ಬೆಂಗಳೂರು ವಿಭಾಗ ಎರಡು ದಿನಗಳ ಕ್ರೆಡಾಯ್ ಎಕ್ಸ್‌ಪೋ ಪ್ರದರ್ಶನವನ್ನು ಆಯೋಜಿಸಿದೆ. ಬೆಂಗಳೂರು ಪಶ್ಚಿಮ ಮತ್ತು ಕೇಂದ್ರ ಭಾಗದಲ್ಲಿ ಮನೆ ಖರೀದಿ ಮಾಡುವ ಇಚ್ಛೆ ಉಳ್ಳವರು ಎಕ್ಸ್‌ಪೋಗೆ ಭೇಟಿ ನೀಡಬಹುದಾಗಿದೆ.

ಹೋಟೆಲ್ ಪಾರ್ಕ್ ಪ್ಲಾಝಾದಲ್ಲಿ ಆಗಸ್ಟ್ 22ರ ಶನಿವಾರ ಮತ್ತು ಮತ್ತು 23ರ ಭಾನುವಾರ ಕ್ರೆಡಾಯ್ ಎಕ್ಸ್‌ಪೋ ಪ್ರದರ್ಶನ ನಡೆಯಲಿದೆ. ಕೈಗೆಟುಕುವ ಬೆಲೆಗಳಿಂದ ಲಕ್ಷುರಿ ವಿಭಾಗದ ತನಕ ವಿವಿಧ ಪ್ರಾಜೆಕ್ಟ್‌ಗಳ ಡೆವಲಪರ್‌ಗಳು ಪ್ರರ್ಶನದಲ್ಲಿ ಭಾಗವಹಿಲಿದ್ದಾರೆ.

house

ವಿವಿಧ ಡೆವಲಪರ್‌ಗಳ ಜೊತೆ ಹಣಕಾಸು ಅವಕಾಶವನ್ನೂ ಒದಗಿಸುವುದು ಅಗತ್ಯ ಎಂದು ಕ್ರೆಡಾಯ್ ತಿಳಿದಿದ್ದು, ಪ್ರತಿ ಪ್ರದರ್ಶನದಲ್ಲೂ ಹಣಕಾಸು ಸಂಸ್ಥೆಗಳಿಗೆ ಸಮಾನ ಆದ್ಯತೆ ನೀಡುತ್ತಿದೆ. ಈ ಎಕ್ಸ್‌ಪೋಗಳು ವಾರಾಂತ್ಯದಲ್ಲಿ ನಡೆಯುವುದರಿಂದ ಹೆಚ್ಚಿನ ಜನರು ಪಾಲ್ಗೊಳ್ಳಲು ಸಹಾಯವಾಗಿದೆ.

ಪ್ರತಿ ಎಕ್ಸ್‌ಪೋಗಳು ಉತ್ತರ, ದಕ್ಷಿಣ ಅಥವಾ ಕೇಂದ್ರ ಬೆಂಗಳೂರಿನ ಸ್ಥಳಗಳಲ್ಲಿ ನಡೆಯುತ್ತಿದ್ದು, ಆ ಪ್ರದೇಶಗಳ ಆಸ್ತಿಗಳು ಪ್ರದರ್ಶನಗೊಳ್ಳಲಿವೆ. ಆಸಕ್ತ ಖರೀದಿದಾರರು ಆಸ್ತಿಯ ಅನ್ವೇಷಣೆಗಾಗಿ ಎಕ್ಸ್‌ಪೋಗೆ ಆಗಮಿಸುತ್ತಿದ್ದು, ಇವುಗಳು ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತಿವೆ.

ಎರಡು ದಿನಗಳ ಕಾಲ ಬೆಳಗ್ಗೆ 10 ರಿಂದ ರಾತ್ರಿ 8 ರ ತನಕ ಪ್ರದರ್ಶನ ನಡೆಯಲಿದೆ. ವಾಸಕ್ಕೆ ಸಿದ್ಧವಾಗಿರುವ ಯೋಜನೆಗಳ ಜೊತೆ, ಹೊಸ ಯೋಜನೆಗಳನ್ನು ಪ್ರದರ್ಶನದಲ್ಲಿ ಕಾಣಬಹುದಾಗಿದೆ. ಎಕ್ಸ್‌ಪೋದಲ್ಲಿ ಸಾಕಷ್ಟು ರಿಯಾಯಿತಿಗಳನ್ನು ಜನರ ಅನುಕೂಲಕ್ಕಾಗಿ ಒದಗಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+