ಕೋವಿಶೀಲ್ಡ್ ಕೊರೊನಾ ಲಸಿಕೆ ತೆಗೆದುಕೊಂಡ ಶೇ.91ರಷ್ಟು ಮಂದಿ ಸುರಕ್ಷಿತ
ಬೆಂಗಳೂರು,ಫೆಬ್ರವರಿ 08: ಕೋವಿಶೀಲ್ಡ್ ಕೊರೊನಾ ಲಸಿಕೆ ಪಡೆದ ಶೇ.91ರಷ್ಟು ಮಂದಿ ಸುರಕ್ಷಿತವಾಗಿದ್ದಾರೆ ಎನ್ನುವ ವಿಷಯ ತಿಳಿದುಬಂದಿದೆ.
ಒಂದು ಸಮೀಕ್ಷೆಯ ಪ್ರಕಾರ, ಸಾರ್ವಜನಿಕರು ಯಾವುದೇ ಭಯವಿಲ್ಲದೆ ಲಸಿಕೆ ತೆಗೆದುಕೊಳ್ಳಬಹುದು ಎಂದು ಆರೋಗ್ಯ ಕಾರ್ಯಕರ್ತರು ಭರವಸೆ ನೀಡಿದ್ದು ಎಲ್ಲರಲ್ಲಿ ಕೊರೊನಾ ಲಸಿಕೆ ಕುರಿತು ಧೈರ್ಯ ಬಂದಿದೆ.
ಮೊದಲ ಹಂತದ ಲಸಿಕೆ ಪಡೆಯಲು ಶೇ.93.8 ರಷ್ಟು ಪಡೆದಿದ್ದು, ಶೇ.6.2 ರಷ್ಟು ಮಂದಿ ಅಡ್ಡ ಪರಿಣಾಮಗಳ ಭಯದಿಂದ ಲಸಿಕೆ ತೆಗೆದುಕೊಂಡಿಲ್ಲ. ಶೇ. 93.8 ರಲ್ಲಿ, ಶೇ. 92.5 ರಷ್ಟು ಜನರು ವ್ಯಾಕ್ಸಿನೇಟರ್ ಮತ್ತು ಸಂಸ್ಥೆ ಕೈಗೊಂಡ ಎಲ್ಲಾ ಮುನ್ನೆಚ್ಚರಿಕೆಗಳಿಂದ ತೃಪ್ತರಾಗಿದ್ದರೆ, ಶೇಕಡಾ 7.50 ರಷ್ಟು ಜನರರಿಗೆ ಸುರಕ್ಷಿತ ಭಾವನೆಯಿಲ್ಲ.

ರಾಮಯ್ಯ ಸ್ಮಾರಕ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಕುರಿತು ಸಮೀಕ್ಷೆ ಮಾಡಲಾಗಿದ್ದು, ಇದರಲ್ಲಿ 417 ಮಂದಿ ಸ್ಪಂದಿಸಿದ್ದಾರೆ. ಹಾಗೆಯೇ ಸಮೀಕ್ಷೆ ನಡೆಸಿದವರಲ್ಲಿ ಸುಮಾರು ಶೇ. 79 ಜನರು ಲಸಿಕೆ ತೆಗೆದುಕೊಳ್ಳುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಶೇ. 53.1 ಕ್ಕಿಂತ ಹೆಚ್ಚು ಜನರು ಯಾವುದೇ ಅಡ್ಡಪರಿಣಾಮಗಳನ್ನು ಎದುರಿಸಲಿಲ್ಲ ಎಂದು ತಿಳಿದು ಬಂದಿದೆ. ಶೆೇ. 20.4 ಜನರು ಮೈಕೈ ನೋವು ಮತ್ತು ಮೈಬಿಸಿ ಹೊಂದಿದ್ದರೆ, ಶೇಕಡಾ 18.9 ರಷ್ಟು ಜನರು ಶೀತ ಮತ್ತು ಜ್ವರದಿಂದ ಬಳಲುತ್ತಿದ್ದರು, ಇಂಜೆಕ್ಷನ್ ಸ್ಥಳದಲ್ಲಿಊತ, ಕೆಂಪು ಬಣ್ಣದ ಸಣ್ಣ ಸಣ್ಣ ಗುಳ್ಳೆಗಳು ಕಂಡು ಬಂದಿದ್ದವು.
ವೈದ್ಯರು, ವೈದ್ಯಕೀಯ ಸಿಬ್ಬಂದಿ, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ, ಸಂಶೋಧನಾ ಸಿಬ್ಬಂದಿ, ಮೇಲ್ವಿಚಾರಕರು, ವಿದ್ಯಾರ್ಥಿಗಳು, ನಿರ್ವಾಹಕ ಸಿಬ್ಬಂದಿ ಮತ್ತು ನಿರ್ವಾಹಕರು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು .
ದೇಶದಲ್ಲಿ ಕೊರೊನಾ ಲಸಿಕೆ ವಿತರಣೆಗೂ ಮುನ್ನ ಲಸಿಕೆಗಳಿಂದ ಅಡ್ಡಪರಿಣಾಮಗಳು ಹೆಚ್ಚಿವೆ ಪ್ರಾಣಕ್ಕೆ ಅಪಾಯ ಎನ್ನುವಂತಹ ಸುದ್ದಿಗಳು ಹರಿದಾಡಿದ್ದವು. ಸರ್ಕಾರವು ಜನರ ಮನವೊಲಿಸಲು ಸಾಕಷ್ಟು ಪ್ರಯತ್ನ ಮಾಡಿತ್ತು. ಇದೀಗ ಆಸ್ಪತ್ರೆಯಿಂದಲೇ ಬಂದಿರುವ ಮಾಹಿತಿ ಪ್ರಕಾರ ಕೋವಿಶೀಲ್ಡ್ ಲಸಿಕೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂಬುದನ್ನು ತಿಳಿಸಿದೆ.












Click it and Unblock the Notifications