Viral video: ಅಮೆಜಾನ್‌ನಲ್ಲಿ ಆರ್ಡರ್ ಮಾಡಿದ್ದೇ ಬೇರೆ.. ಬಂದಿದ್ದು ಮಾತ್ರ ಬುಸ್ ಬುಸ್ ನಾಗಪ್ಪ!
ಬೆಂಗಳೂರು, ಜೂನ್. 19: ಆನ್‌ಲೈನ್ ಶಾಪಿಂಗ್ ಈಗ ಸಕತ್ ಟ್ರೆಂಡ್‌ನಲ್ಲಿದೆ. ಮನೆಯಲ್ಲಿಯೇ ಕುಳಿತು ಮೊಬೈಲ್ ಹಿಡುದು ಏನು ಬೇಕಿದ್ದರೂ ಆರ್ಡರ್ ಮಾಡಿ ತೆಗೆದುಕೊಳ್ಳುವ ಕಾಲದಲ್ಲಿ ನಾವಿದ್ದೇವೆ. ನಾವು ಆರ್ಡರ್ ಮಾಡಿರುವುದು ಬಿಟ್ಟು ಬೇರೆ ವಸ್ತು ಬಂದರೆ ಅದನ್ನು ಬದಲಿಸಬಹುದು. ಆದರೆ, ಡಿಲಿವರಿ ಬಾಕ್ಸ್‌ನಲ್ಲಿ ಬುಸ್ ಬುಸ್ ನಾಗಪ್ಪ ಬಂದರೆ....!
ಹೌದು... ಎಕ್ಸ್‌ಬಾಕ್ಸ್ ಕಂಟ್ರೋಲರ್ ಅರ್ಡರ್ ಮಾಡಿದ್ದ ದಂಪತಿಗೆ ಅಮೆಜಾನ್ ಬಾಕ್ಸ್‌ನಲ್ಲಿ ಬಂದಿದ್ದು ಮಾತ್ರ ಹಾವು. ಈ ಘಟನೆ ನಡೆದಿರುವುದು ಸಿಲಿಕಾನ್ ಸಿಟಿ ಬೆಂಗಳೂರುನಲ್ಲಿ. ತಮಗೆ ಬಂದ ಅಮೆಜಾನ್ ಪ್ಯಾಕೇಜ್‌ನಲ್ಲಿ ಜೀವಂತ ನಾಗರಹಾವು ಕಂಡುಬಂದಿದೆ ಎಂದು ಜೋಡಿ ಹೇಳಿದೆ. ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗಿದೆ.

ಹಾವು ಬಂತು ಹಾವು....!
ವರದಿಯ ಪ್ರಕಾರ, ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ವಾಸವಿರುವ ಇಂಜಿನಿಯರ್ ದಂಪತಿ ಆನ್‌ಲೈನ್ ವಿತರಣಾ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಎಕ್ಸ್‌ಬಾಕ್ಸ್ ಕಂಟ್ರೋಲರ್ ಅನ್ನು ಆರ್ಡರ್ ಮಾಡಿದ್ದರು. ಆದರೆ, ಅವರು ಪ್ಯಾಕೇಜ್ ಸ್ವೀಕರಿಸಿದಾಗ ಮಾತ್ರ ದಂಪತಿ ದೊಡ್ಡ ಶಾಕ್‌ಗೆ ಒಳಗಾಗಿದ್ದಾರೆ. ಏಕೆಂದರೆ.. ಪಾರ್ಸಲ್‌ನಲ್ಲಿ ಇದ್ದದ್ದು ನಾಗರಹಾವು.
"ನಾವು ಅಮೆಜಾನ್‌ನಿಂದ 2 ದಿನಗಳ ಹಿಂದೆ ಎಕ್ಸ್‌ಬಾಕ್ಸ್ ಕಂಟ್ರೋಲರ್ನ್ನು ಆರ್ಡರ್ ಮಾಡಿದ್ದೇವು. ಅಮೆಜಾನ್‌ನಿಂದ ಬಂದ ಪ್ಯಾಕೇಜ್‌ನಲ್ಲಿ ಜೀವಂತ ಹಾವು ಬಂದಿದೆ. ಪ್ಯಾಕೇಜ್ ಅನ್ನು ನೇರವಾಗಿ ಡಿಲೆವರಿ ಪಾರ್ಟ್ನರ್ ನಮಗೆ ನೀಡಿದ್ದಾರೆ. ಅವರು ಹೊರಗೆ ಇಟ್ಟು ಹೋಗಿಲ್ಲ. ನಾವು ಸರ್ಜಾಪುರ ರಸ್ತೆಯಲ್ಲಿ ವಾಸಿಸುತ್ತಿದ್ದೇವೆ. ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದೇವೆ, ಜೊತೆಗೆ ನಮ್ಮಲ್ಲಿ ಪ್ರತ್ಯಕ್ಷದರ್ಶಿಗಳು ಇದ್ದಾರೆ" ಎಂದು ಪಾರ್ಸಲ್‌ನಲ್ಲಿ ಹಾವು ಪಡೆದ ಗ್ರಾಹಕರು ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
In a shocking incident, a family on Sarjapur Road received a live Spectacled Cobra with their Amazon order for an Xbox controller.
— Prakash (@Prakash20202021) June 19, 2024
The venomous snake was fortunately stuck to packaging tape, preventing harm.#ITReel #Sarjapur #AmazonOrder #SnakeInAmazonOrder pic.twitter.com/EClaQrt1B6
ಅಮೆಜಾನ್ ಪ್ರತಿಕ್ರಿಯಿಸಿದ್ದು ಹೇಗೆ?
ಬಳಿಕ ಗ್ರಾಹಕರು ತಾವು ಮರುಪಾವತಿ ಪಡೆದಿದ್ದಾರೆ. ಆದರೆ, ಈ ಘಟನೆಯು ತಮ್ಮ ಜೀವಕ್ಕೆ ಒಡ್ಡಿದ ಅಪಾಯದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. "ನಾವು ಸಂಪೂರ್ಣ ಮರುಪಾವತಿಯನ್ನು ಪಡೆದಿದ್ದೇವೆ. ಆದರೆ, ಇಲ್ಲಿ ಇಷ್ಟೊಂದು ವಿಷಪೂರಿತ ಹಾವು ನಮ್ಮ ಜೀವಕ್ಕೆ ತಮದ ಅಪಾಯದ ಬಗ್ಗೆ ನಮಗೆ ಆತಂಕವಿದೆ. ಇದು ಸ್ಪಷ್ಟವಾಗಿ ಅಮೆಜಾನ್‌ನ ನಿರ್ಲಕ್ಷ್ಯ ಮತ್ತು ಅವರ ಕಳಪೆ ಸಾರಿಗೆ/ಗೋಡೌನ್ ನೈರ್ಮಲ್ಯ ಮತ್ತು ಮೇಲ್ವಿಚಾರಣೆಯಿಂದ ಉಂಟಾದ ಸುರಕ್ಷತಾ ಉಲ್ಲಂಘನೆಯಾಗಿದೆ. ಸುರಕ್ಷತೆಯಲ್ಲಿ ಇಂತಹ ಗಂಭೀರ ಲೋಪ ಮಾಡಲು ಹೇಗೆ ಸಾಧ್ಯ" ಎಂದು ಕಿಡಿಕಾರಿದ್ದಾರೆ.
ಪಾರ್ಸಲ್‌ನಲ್ಲಿ ಇರುವ ಹಾವಿನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅರ್ಧ ತೆರೆದಿರುವ ಅಮೆಜಾನ್ ಪ್ಯಾಕೇಜ್ ಅನ್ನು ಬಕೆಟ್‌ನೊಳಗೆ ಇರಿಸಿರುವುದನ್ನು ವೀಡಿಯೊದಲ್ಲಿ ನೋಡಬಹುದು. ಪ್ಯಾಕೇಜಿಂಗ್ ಟೇಪ್‌ನಲ್ಲಿ ಸಿಲುಕಿರುವ ಹಾವು ಅಲುಗಾಡುತ್ತಿದೆ ಮತ್ತು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಹಾವನ್ನು ಸೆರೆಹಿಡಿದು ನಂತರ ಜನರ ಕೈಗೆ ಸಿಗದಂತೆ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ ಎಂದು ವರದಿಯಾಗಿದೆ.












Click it and Unblock the Notifications