ಕೊರೊನಾ ಸಂಕಷ್ಟ: ಮಹಿಳೆಯರಿಗೆ ನೀಡುವ 500 ರೂ ಜನಧನ್ ಖಾತೆಗೆ ವರ್ಗಾವಣೆ

ಬೆಂಗಳೂರು, ಏಪ್ರಿಲ್ 03: ಕೋವಿಡ್-19 ಸಾಂಕ್ರಾಮಿಕ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳು ಬಡವರ ಕಲ್ಯಾಣ ಯೋಜನೆಯಡಿ ಮಹಿಳೆಯರಿಗೆ 500 ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದ ಹಣವನ್ನು ಜನಧನ್ ಖಾತೆಗಳಿಗೆ ನೇರ ವರ್ಗಾಯಿಸುವುದಾಗಿ ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕುರಿತು ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಮಾಹಿತಿ ನೀಡಲಾಗಿದ್ದು, ಪ್ರಧಾನ ಮಂತ್ರಿಗಳ ಜನಧನ್ ಯೋಜನೆಯ ಖಾತೆ ಇರುವ ಮಹಿಳೆಯರಿಗೆ ಏಪ್ರಿಲ್‌ 2020ರ ಅವಧಿಯ 500 ರೂಪಾಯಿಗಳನ್ನು ಏಪ್ರಿಲ್‌ 2, 2020 ರಂದು ಬೆಳಗ್ಗೆ ಆಯಾ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಚಿಂದ್ರ ಮಿಶ್ರಾ ತಿಳಿಸಿದ್ದಾರೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದ್ದು, ಖಾತೆದಾರರು, ಬ್ಯಾಂಕ್‌ನಿಂದ ಹಣ ಪಡೆಯುವುದಕ್ಕೆ ಏಕಕಾಲಕ್ಕೆ ಧಾವಿಸುವಂತಾಗಬಾರದು ಎಂದು ಖಾತೆಗಳ ಸಂಖ್ಯೆಗಳ ಕಡೆಯ ಅಂಕಿಯನ್ನು ಆಧಾರದ ಮೇಲೆ ದಿನಾಂಕಗಳನ್ನು ನಿಗದಿ ಮಾಡಿದ್ದು, ಖಾತೆದಾರರು ಅದರಂತೆ ಹಣವನ್ನು ಪಡೆದುಕೊಳ್ಳಬಹುದಾಗಿದೆ.

Coronavirus Lockdown: Rs.500 For Ladies Will Be Transferred To Jan Dhan Account

0 ಅಥವಾ 1 ಅಂಕೆಯಿಂದ ಕೊನೆಗೊಳ್ಳುವ ಖಾತೆ ಸಂಖ್ಯೆಯುಳ್ಳವರು ಏಪ್ರಿಲ್‌ 3 ರಂದು, 2 ಅಥವಾ 3 ಅಂಕೆಯಿಂದ ಕೊನೆಗೊಳ್ಳುವ ಸಂಖ್ಯೆಯುಳ್ಳವರು ಏಪ್ರಿಲ್ 4 ರಂದು, 4 ಅಥವಾ 5 ಅಂಕೆಯುಳ್ಳವರು ಏಪ್ರಿಲ್‌ 7 ರಂದು, 6 ಅಥವಾ 7 ಅಂಕೆಯುಳ್ಳವರು ಏಪ್ರಿಲ್‌ 8 ರಂದು ಹಾಗೂ 8 ಅಥವಾ 9 ಅಂಕೆಯುಳ್ಳ ಖಾತೆ ಸಂಖ್ಯೆಯುಳ್ಳವರು ಏಪ್ರಿಲ್‌9 ರಂದು ಹಣವನ್ನು ಪಡೆದುಕೊಳ್ಳಬಹುದಾಗಿದೆ.

9ನೇ ತಾರೀಖಿನ ನಂತರ ಯಾವುದೇ ಬ್ಯಾಂಕ್‌ ಅವಧಿಯಲ್ಲಿ ಶಾಖೆಗಳಿಗೆ ಭೇಟಿ ನೀಡಿ ಹಣ ಪಡೆದುಕೊಳ್ಳಬಹುದು.

ಅಲ್ಲದೆ ಬ್ಯಾಂಕ್‌ ಗಳಿಗೆ, ಖಾತೆದಾರರಿಗೆ ಅವರ ಖಾತೆ ಸಂಖ್ಯೆಗಳನ್ನು ಆಧರಿಸಿ, ಹಣ ಜಮೆಯಾಗಿರುವ ಮಾಹಿತಿ ನೀಡುವ ಜೊತೆಗೆ ಯಾವ ಶಾಖೆಗೆ ಭೇಟಿಯಾಗಬೇಕು ಎಂಬುದನ್ನು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎಸ್‌.ಎಲ್‌.ಬಿ.ಸಿ ಸಮನ್ವಯಕಾರರು ಕೂಡಲೇ ರಾಜ್ಯ ಸರ್ಕಾರಗಳನ್ನು ಸಂಪರ್ಕಿಸಿ, ಖಾತೆದಾರರು ಏಕಕಾಲಕ್ಕೆ ಬ್ಯಾಂಕ್ ಶಾಖೆಗಳಿಗೆ ಎಡತಾಕದಂತೆ ಎಚ್ಚರ ವಹಿಸಲು ಸೂಚಿಸಲಾಗಿದೆ.

ರಾಜ್ಯ ಸರ್ಕಾರಗಳು ಸ್ಥಳೀಯವಾಗಿ ಜಿಲ್ಲಾಡಳಿತಗಳಿಗೆ ಅಗತ್ಯ ಸೂಚನೆಗಳನ್ನು ನೀಡಿ, ಪೊಲೀಸ್‌ ಬೆಂಬಲದೊಂದಿಗೆ ಫಲಾನುಭವಿಗಳಿಗೆ ಯಾವುದೇ ಅನಾನುಕೂಲವಾಗದಂತೆ ಹಣ ವಿತರಣೆಯಾಗುವಂತೆ ನೋಡಿಕೊಳ್ಳುವಂತೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಚಿಂದ್ರ ಮಿಶ್ರಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+