ದೇವನಹಳ್ಳಿಯಲ್ಲಿ ಮೆಗಾ ರೈಲ್ವೆ ಟರ್ಮಿನಲ್ ನಿರ್ಮಾಣ: ಇದು ಎಷ್ಟು ಕೋಟಿಯ ಯೋಜನೆ ಗೊತ್ತಾ..?

ಬೆಂಗಳೂರು, ಮಾರ್ಚ್ 25: ಬೆಂಗಳೂರು ನಗರದ ಇತರ ರೈಲು ನಿಲ್ದಾಣಗಳ ದಟ್ಟಣೆ ಕಡಿಮೆ ಮಾಡಲು ದೇವನಹಳ್ಳಿಯಲ್ಲಿ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ಅತಿ ದೊಡ್ಡ ರೈಲು ಟರ್ಮಿನಲ್ ನಿರ್ಮಾಣ ಮಾಡಲಿದೆ. ಈ ಯೋಜನೆಗೆ ಸುಮಾರು 2,500 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಇದರ ಅಧ್ಯಯನ ಬಹುತೇಕ ಪೂರ್ಣಗೊಂಡಿದೆ ಎಂದು ರೈಲ್ವೆ ಅಧಿಕಾರಿ ವಿವರಿಸಿದ್ದಾರೆ.

ವಿಕ್ಷಿತ್ ಭಾರತ್ ಯೋಜನೆಯಡಿಯಲ್ಲಿ ದೇವನಹಳ್ಳಿಯಲ್ಲಿ ಅತಿ ದೊಡ್ಡ ರೈಲು ಟರ್ಮಿನಲ್ ನಿರ್ಮಾಣವಾಗಲಿದ್ದು, 200 ಎಕರೆಯ ವಿಶಾಲವಾಗ ಸ್ಥಳದಲ್ಲಿ ನಿರ್ಮಿಸಲು ನೈಋತ್ಯ ರೈಲ್ವೆ ಮುಂದಾಗಿದೆ. ಸದ್ಯ ಜಾಗ ಲಭ್ಯತೆಯ ಕೆಲಸ ನಡೆಯುತ್ತಿದೆ. ಈ ಟರ್ಮಿನಲ್‌ನಲ್ಲಿ ಕನಿಷ್ಠ 10 ಪ್ಲಾಟ್‌ಫಾರ್ಮ್‌ಗಳು ಇರಲಿದ್ದು, ಇದರಿಂದ ಕೆಎಸ್‌ಆರ್ ಬೆಂಗಳೂರು, ಯಶವಂತಪುರ ಮತ್ತು ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣಗಳ ದಟ್ಟಣೆ ಕಡಿಮೆಯಾಗುತ್ತದೆ.

Construction Of Mega Railway Terminal In Devanahall

ಸದ್ಯ ಹೊಸ ಟರ್ಮಿನಲ್‌ ನಿರ್ಮಿಸಲು ದೇವನಹಳ್ಳಿ ಹಾಲ್ಟ್ ನಿಲ್ದಾಣದಿಂದ 4 ಅಥವಾ 5 ಕಿಮೀ ವ್ಯಾಪ್ತಿಯಲ್ಲಿ ಸ್ಥಳ ಗುರುತಿಸಲಾಗುತ್ತಿದೆ. ಈ ಯೋಜನೆಗೆ ಭಾರೀ ವೆಚ್ಚ ತಗಲುವುದರಿಂದ ರೈಲ್ವೆ ಮಂಡಳಿ ಮತ್ತು ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಪಡೆಯಬೇಕಿದೆ ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಘೋಷಿಸಿದ ವೃತ್ತಾಕಾರದ ರೈಲ್ವೆ ಯೋಜನೆಯು ನಿಡವಂಡ, ದೊಡ್ಡಬಳ್ಳಾಪುರ, ದೇವನಹಳ್ಳಿ, ಮಾಲೂರು, ಹೀಲಲಿಗೆ ಮತ್ತು ಸೋಲೂರನ್ನು ಸಂಪರ್ಕಿಸುವ ಮೂಲಕ ನಗರದ ಜನದಟ್ಟಣೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ವೃತ್ತವು ನಿಡ್ವಂಡದಲ್ಲಿ ಕೊನೆಗೊಳ್ಳುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+