ಶಾಸಕರ ಕಾನ್‌ಸ್ಟಿಟ್ಯೂಷನ್ ಕ್ಲಬ್‌ ನಿರ್ಮಾಣಕ್ಕೆ ಮಧ್ಯಂತರ ತಡೆ

ಬೆಂಗಳೂರು, ಅಕ್ಟೋಬರ್ 08; ಬೆಂಗಳೂರಿನ ಬಾಲಬ್ರೂಯಿ ಅತಿಥಿ ಗೃಹದಲ್ಲಿ ಶಾಸಕರಿಗೆ ಕಾನ್‌ಸ್ಟಿಟ್ಯೂಷನ್ ಕ್ಲಬ್ ನಿರ್ಮಾಣ ಮಾಡಲು ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಮುಂದಿನ ವಿಚಾರಣೆಯನ್ನು ಕೋರ್ಟ ನವೆಂಬರ್ 19ಕ್ಕೆ ಮುಂದೂಡಿದೆ.

ಬೆಂಗಳೂರು ಎನ್ವಿರಾನ್‌ಮೆಂಟ್ ಟ್ರಸ್ಟ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ಪೀಠ ನಡೆಸಿತು. ಕೋರ್ಟ್ ಮುಂದಿನ ಆದೇಶದ ತನಕ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿತು.

14 ಎಕರೆ ಪ್ರದೇಶದಲ್ಲಿರುವ ಬಾಲಬ್ರೂಯಿ ಅತಿಥಿ ಗೃಹ ನಗರದ ಪಾರಪರಿಕ ಕಟ್ಟಡವಾಗಿದೆ. 1850ರಲ್ಲಿ ಇದನ್ನು ನಿರ್ಮಿಸಲಾಗಿದೆ. ರವೀಂದ್ರನಾಥ ಟಾಗೋರ್, ಇಂದಿರಾ ಗಾಂಧಿ, ಸರ್. ಎಂ. ವಿಶ್ವೇಶ್ವರಯ್ಯ ಮುಂತಾದವರು ನಗರಕ್ಕೆ ಭೇಟಿ ನೀಡಿದಾಗ ಇಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

Constitution Club For Legislators High Court Directed To Maintain Status Quo

ಬಾಲಬ್ರೂಯಿ ಅತಿಥಿ ಗೃಹದ ಆವರಣದಲ್ಲಿ ಸಾವಿರಾರು ಮರಗಳಿವೆ. ಇವುಗಳಲ್ಲಿ ಕೆಲವು ಮರಗಳು 100 ವರ್ಷ ಹಿಂದಿನವು. ಶಾಸಕರಿಗೆ ಕಾನ್‌ಸ್ಟಿಟ್ಯೂಷನ್ ಕ್ಲಬ್ ನಿರ್ಮಾಣ ಮಾಡಲು ಇಲ್ಲಿ ಮರಗಳನ್ನು ಕಡಿಯಲು ಅವಕಾಶ ನೀಡಬಾರದು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಮುಂದಿನ ಆದೇಶದ ತನಕ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಮಧ್ಯಂತರ ಆದೇಶ ನೀಡಿತು. ಬೆಂಗಳೂರು ನಗರದ ಮರಗಳ ಗಣತಿ ನಡೆಸುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಅತಿಥಿ ಗೃಹದ ಆವರಣದಲ್ಲಿನ ಗಣತಿ ನಡೆಸಿ ವಿವರವಾದ ವರದಿಯನ್ನು ನೀಡಬೇಕು ಎಂದು ಕೋರ್ಟ್ ಸೂಚನೆ ನೀಡಿತು.

ಅರ್ಜಿಯ ವಿಚಾರಣೆಯನ್ನು ನವೆಂಬರ್ 19ಕ್ಕೆ ಮುಂದೂಡಿದ ಕರ್ನಾಟಕ ಹೈಕೋರ್ಟ್, ಮುಂದಿನ ವಿಚಾರಣೆ ವೇಳೆ ತೋಟಗಾರಿಕೆ ಇಲಾಖೆ ಸಹ ಬಾಲಬ್ರೂಯಿ ಅತಿಥಿ ಗೃಹದ ಆವರಣದಲ್ಲಿನ ಮರಗಳ ಕುರಿತು ವಿವರವಾದ ವರದಿಯನ್ನು ನೀಡಬೇಕು ಎಂದು ನಿರ್ದೇಶನ ನೀಡಿತು.

ನಗರದ ಪಾರಂಪರಿಕ ಕಟ್ಟಡವಾದ ಬಾಲಬ್ರೂಯಿ ಅತಿಥಿ ಗೃಹದಲ್ಲಿ ಶಾಸಕರಿಗೆ ಕಾನ್‌ಸ್ಟಿಟ್ಯೂಷನ್ ಕ್ಲಬ್ ನಿರ್ಮಾಣ ಮಾಡಲು ಪರಿಸರವಾದಿಗಳು ವಿರೋಧ ವ್ಯಕ್ತಡಿಸುತ್ತಿದ್ದಾರೆ. ನಗರದ ಪರಂಪರೆ ಸಾರುವ ಇಂತಹ ಕಟ್ಟಡಗಳನ್ನು ಸಂರಕ್ಷಣೆ ಮಾಡಬೇಕು. ಇಂತಹ ಕಟ್ಟಡದ ಮೂಲ ಸ್ವರೂಪ ನಾಶವಾದರೆ ಮತ್ತೆ ರೂಪಿಸುವುದು ಅಸಾಧ್ಯ ಎಂದು ಹೇಳಿದ್ದಾರೆ.

14 ಎಕರೆ ಪ್ರದೇಶದ ಬಾಲಬ್ರೂಯಿ ಅತಿಥಿ ಗೃಹದಲ್ಲಿ 150ಕ್ಕೂ ವಿವಿಧ ಜಾತಿಯ ಮರಗಳಿವೆ. ಬೆಂಗಳೂರು ನಗರದಲ್ಲಿ ವಿವಿಧ ಯೋಜನೆಯಾಗಿ ಈಗಾಗಲೇ ಹಲವು ಮರಗಳನ್ನು ಕಡಿಯಲಾಗಿದೆ. ಈಗ ಕ್ಲಬ್ ನಿರ್ಮಾಣಕ್ಕೆ ಪುರಾತನ ಮರಗಳನ್ನು ಕಡಿದರೆ ನಗರದ ಪರಿಸರಕ್ಕೆ ಧಕ್ಕೆಯಾಗಲಿದೆ ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ.

ಸೆಪ್ಟೆಂಬರ್‌ನಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯುವಾಗಲೇ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ನಡೆದ ಕರ್ನಾಟಕ ವಿಧಾನ ಮಂಡಲ ಆಡಳಿತ ಮಂಡಳಿ ಸಭೆಯಲ್ಲಿ ಶಾಸಕರಿಗೆ ಕಾನ್‌ಸ್ಟಿಟ್ಯೂಷನ್ ಕ್ಲಬ್ ನಿರ್ಮಾಣ ಮಾಡುವ ಕುರಿತು ಚರ್ಚೆ ನಡೆದಿತ್ತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ಸಚಿವರು, ಶಾಸಕರು ಇದ್ದ ಸಭೆಯಲ್ಲಿ ಶಾಸಕರಿಗೆ ಕಾನ್‌ಸ್ಟಿಟ್ಯೂಷನ್ ಕ್ಲಬ್ ನಿರ್ಮಾಣ ಮಾಡಲು ಸಹಮತ ವ್ಯಕ್ತವಾಗಿತ್ತು. ಸ್ಥಳ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು.

ಶಾಸಕರಿಗೆ ಕಾನ್‌ಸ್ಟಿಟ್ಯೂಷನ್ ಕ್ಲಬ್ ನಿರ್ಮಾಣ ಮಾಡಲು ಬಾಲಬ್ರೂಯಿ ಅತಿಥಿ ಗೃಹ, ಸಿಐಡಿ ಕಚೇರಿ ಇರುವ ಕಾರ್ಲಟನ್ ಸೇರಿದಂತೆ ಇತರ ಸ್ಥಳಗಳನ್ನು ಗುರುತಿಸಲಾಗಿತ್ತು. ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಕುಮಾರ ಕೃಪಾ ಅತಿಥಿಗೃಹ ಸಮೀಪದಲ್ಲಿರುವ ಸರ್ಕಾರಿ ಡಿ ಗ್ರೂಪ್ ನೌಕರರ ಕ್ವಾರ್ಟರ್ಸ್ ಜಾಗವನ್ನು ಪರಿಶೀಲಿಸಲಾಗಿತ್ತು.

ಈ ಹಿಂದೆಯೂ ಬಾಲಬ್ರೂಯಿ ಅತಿಥಿ ಗೃಹದ ಜಾಗದಲ್ಲಿ ಶಾಸಕರಿಗೆ ಕಾನ್‌ಸ್ಟಿಟ್ಯೂಷನ್ ಕ್ಲಬ್ ನಿರ್ಮಿಸಲು ಚಿಂತನೆ ನಡೆಸಲಾಗಿತ್ತು. ಆದರೆ ತೀವ್ರ ವಿರೋಧ ಎದುರಾದ ಹಿನ್ನಲೆಯಲ್ಲಿ ಪ್ರಸ್ತಾವನೆ ಕೈ ಬಿಡಲಾಗಿತ್ತು.

Recommended Video

      ಪಂದ್ಯ ಸೋತ ನಂತರ RCB coach ಹೇಳಿದ್ದೇನು | Oneindia Kannada

      ಶಾಸಕರಿಗೆ ಕಾನ್‌ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಜನಪ್ರತಿನಿಧಿಗಳಿಗೆ ಮನರಂಜನೆ, ಈಜುಕೊಳ, ಅಧ್ಯಯನ ಸೇರಿ ಇತರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಶಾಸಕರು, ಸಂಸದರು, ಮಾಜಿ ಶಾಸಕರು ಕ್ಲಬ್ ಸದಸ್ಯರಾಗಬಹುದು ಎಂಬುದು ಪ್ರಸ್ತಾವನೆಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+