ಅಷ್ಟಕ್ಕೂ ಮೋದಿಯವರ ಬಗ್ಗೆ ರೋಷನ್ ಬೇಗ್ ಹೇಳಿದ್ದೇನು?
Recommended Video

ಬೆಂಗಳೂರು, ಅಕ್ಟೋಬರ್ 14: ಪ್ರಧಾನಿ ನರೇಂದ್ರ ಮೋದಿಯವರನ್ನು ಅನಾಗರಿಕ, ಅವಾಚ್ಯ ಶಬ್ದಗಳಿಂದ ಟೀಕಿಸಿದ ಮೂಲಸೌಕರ್ಯ, ಮಾಹಿತಿ ಮತ್ತು ಹಜ್ ಖಾತೆ ಸಚಿವ ರೋಷನ್ ಬೇಗ್ ವಿರುದ್ಧಮೋದಿ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ, ದೇಶದ ಉನ್ನತ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಇಂಥ ಹೀನ ಭಾಷೆಗಳಿಂದ ನಿಂದಿಸುವುದು ತರವೇ ಎಂದು ಮೋದಿ ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ಅಷ್ಟಕ್ಕೂ ರೋಷನ್ ಬೇಗ್ ಹೇಳಿದ್ದೇನು?
ಇತ್ತೀಚೆಗೆ ಪುಲಕೇಶಿನಗರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ರೋಷನ್ ಬೇಗ್, ಪ್ರಧಾನಿ ಮೋದಿಯವರನ್ನು ಸೂ.... ಮಗ, ಬೋ... ಮಗ ಎಂದೆಲ್ಲ ನಿಂದಿಸಿದ ವಿಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿತ್ತು.
1000, 500 ರೂ.ಗಳ ನೋಟುಗಳನ್ನು ನಿಷೇಧಿಸಿದ ಮೋದಿಯವರ ನಡೆಯಿಂದ ಯಾರಿಗೆ ಉಪಕಾರವಾಯ್ತು? ಅವರ ಅಭಿಮಾನಿಗಳೇ ಎಷ್ಟೋ ಜನ ಇದನ್ನು ವಿರೋಧಿಸಲಿಲ್ಲವೇ? ಮೋದಿ ಸೂ... ಮಗ ಎಂದಿದ್ದರು.
ಕಾಂಗ್ರೆಸ್ ಪಕ್ಷಕ್ಕೆ ನೂರಾರು ವರ್ಷದ ಇತಿಹಾಸವಿದೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿಯಂಥವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಅಂಥ ರಾಜೀವ್ ಗಾಂಧಿಯವರ ಮಗ ರಾಹುಲ್ ಗಾಂಧಿಯವರನ್ನು ಪದೇ ಪದೇ ಟೀಕಿಸುವುದು ಸರಿಯೇ? ಎಂದು ಪ್ರಶ್ನಿಸಿದ್ದರು.
ಸಿದ್ದರಾಮಯ್ಯ 5 ರೂ. ಗೆ ತಿಂಡಿ, 10 ರೂ.ಗೆ ಊಟ ಕೊಡುತ್ತಿದ್ದಾರೆ. ಯಡಿಯೂರಪ್ಪನವರಿಗೇಕೆ ಅನ್ನಭಾಗ್ಯ ಯೋಜನೆ ಜಾರಿಗೆ ತರಲು ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications