Condom matter: ಇದು ವಿಶ್ವದ ಅತ್ಯಂತ ದುಬಾರಿ ಕಾಂಡೋಮ್, ಏನಿದರ ವಿಶೇಷತೆ!
ವಿಶ್ವದಲ್ಲೇ ಯಾರೂ ಅಂದಾಜು ಸಹ ಮಾಡಲಾಗದ ಬೆಲೆಯ ಕಾಂಡೋಮ್ ಬಳಕೆಯ ಬಗ್ಗೆ ಈಗ ಎಲ್ಲೆಡೆ ಚರ್ಚೆಯಾಗ್ತಿದೆ. ಅಷಕ್ಕೂ ಈ ಕಾಂಡೋಮ್‌ಗೆ ಅಷ್ಟೊಂದು ಬೇಡಿಕೆ ಯಾಕೆ, ಈ ಕಾಂಡೋಮ್ ಎಷ್ಟು ದುಬಾರಿ ಎನ್ನುವ ಮಾಹಿತಿ ಇಲ್ಲಿದೆ. ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲೇ ಉಚಿತವಾಗಿ ಕಾಂಡೋಮ್ ಸಿಗುತ್ತವೆ. ಮೆಡಿಕಲ್ ಶಾಪ್‌ಗಳಲ್ಲೂ ಅಷ್ಟೇನು ದುಬಾರಿ ಇರುವುದಿಲ್ಲ. ಆದರೆ, ಈ ಬ್ರ್ಯಾಂಡ್‌ನ ಹಳೇಯ ಕಾಂಡೋಮ್ ಬಗ್ಗೆ ಜಗತ್ತಿನ ಜನ ಇನ್ನಿಲ್ಲದಂತೆ ತಲೆಕೆಡಿಸಿಕೊಂಡಿದ್ದಾರೆ. ಅಲ್ಲದೇ ಒಂದು ಕಾಂಡೋಮ್‌ಗೆ ಇಷ್ಟೊಂದು ಬೆಲೆಯಾದರೂ ಯಾಕೆ, ಇದರಲ್ಲಿ ಏನಿದೆ ಉಳಿದ ಪ್ರಾಡೆಕ್ಟ್‌ನಲ್ಲಿ ಇಲ್ಲದೆ ಇರುವುದು ಅಂತ ತಲೆಗೆ ಹುಳು ಬಿಟ್ಕೊಂಡಿದ್ದಾರೆ.
ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸುವುದಕ್ಕೆ ಹಾಗೂ ಗರ್ಭಧರಿಸುವುದನ್ನು ಮುಂದೂಡುವುದು ಇಲ್ಲವೇ ತಪ್ಪಿಸುವ ಕಾರಣಕ್ಕೆ ಸಾಮಾನ್ಯವಾಗಿ ಕಾಂಡೋಮ್ ಬಳಕೆ ಮಾಡಲಾಗುತ್ತದೆ. ಇನ್ನೂ ಕೆಲವರಿಗೆ ಕಾಂಡೋಮ್ ಬಳಕೆ ಮಾಡುವುದು ಫ್ಯಾಷನ್. ಅದರ ವಾಸನೆಗಾಗಿಯೂ ಕೆಲವರು ಅದನ್ನು ಬಳಸುವುದು ಇದೆ. ಆದರೆ, ಈಗ ಮಾರುಕಟ್ಟೆಯಲ್ಲಿ ಚರ್ಚೆಯಾಗ್ತಿರೋದು ರಾಜರ ಕಾಲದ ಹಾಗೂ ಒಂದು ದುಬಾರಿ ಪೋನ್ ಅನ್ನೇ ಖರೀದಿ ಮಾಡುವ ಬೆಲೆಯ ಕಾಂಡೋಮ್ ಬಗ್ಗೆ!

ಹೌದು ನೀವು ಓದಿದ್ದು ಸರಿಯಾಗಿಯೇ ಇದೆ. ಜಗತ್ತಿನಲ್ಲಿ ಅಂದಾಜು 200ಕ್ಕೂ ಹೆಚ್ಚು ಹಳೆಯ ಕಾಲದ ಕಾಂಡೋಮ್‌ನ ಕ್ರೇಜ್ ಈಗ ಶುರುವಾಗಿದೆ. ಮಜಾ ಅಂದರೆ ಜಗತ್ತಿನಲ್ಲಿ ಹಲವು ಪ್ರಾಡೆಕ್ಟ್‌ಗಳ ಮಾರ್ಕೆಟ್ ಅಪ್ ಮತ್ತು ಡೌನ್ ಆಗುತ್ತೆ. ಆದರೆ, ಈ ಪ್ರಾಡೆಕ್ಟ್‌ನ ಮಾರ್ಕೆಟ್ ಕೆಳಗೆ ಇಳಿದಿದ್ದು, ಇತಿಹಾಸದಲ್ಲೇ ಇಲ್ಲ. ಕೊರೊನಾ ಸಂದರ್ಭದಲ್ಲಿ ಭಾರತ ಹಾಗೂ ವಿಶ್ವದಲ್ಲೇ ಕಾಂಡೋಮ್ ಮಾರಾಟ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿತ್ತು. ಆ ಸಮಯದಲ್ಲಿ ವರ್ಕ್‌ಫ್ರಮ್ ಹೋಮ್ ಹೆಚ್ಚಾಗಿತ್ತು. ಮಾತ್ರವಲ್ಲ ಲಾಕ್‌ಡೌನ್ ಇದಿದ್ದರಿಂದ ಕೆಲವರು ಹೊರಗೆ ಕೆಲಸಕ್ಕೆ ಹೋಗ್ತಾ ಇರಲಿಲ್ಲ.
ವಿಶ್ವದ ದುಬಾರಿ ಕಾಂಡೋಮ್!
ಈಗ ಬಾರಿ ಚರ್ಚೆಯಾಗ್ತಿರುವ ಕಾಂಡೋಮ್ ಬರೋಬ್ಬರಿ 200 ವರ್ಷಗಳಿಗೂ ಹಳೆಯದು. 18 ಮತ್ತು 19ನೇ ಶತಮಾನದಲ್ಲಿ ಇದನ್ನು ಬಳಸಲಾಗುತ್ತಿತ್ತಂತೆ. ಅಂದರೆ ಆಗಲೇ ಜಗತ್ತಿನಲ್ಲಿ ಈ ರೀತಿಯ ಒಂದು ಕಲ್ಪನೆ ಇತ್ತು ಎನ್ನುವುದು ತಿಳಿಯುತ್ತದೆ. ಇನ್ನು ಈಗಾಗಲೇ ಹೇಳಿರುವಂತೆ ಇದು 200 ವರ್ಷ ಹಳೆಯದು.
ಸ್ಪೇನ್‌ನ ಸಿಟಿಯ ಬಾಕ್ಸ್‌ವೊಂದರಲ್ಲಿ ಇದು ಸಿಕ್ಕಿದೆಯಂತೆ. ಜಗತ್ತಿನ ಅತ್ಯಂತ ಹಳೆಯ ಕಾಂಡೋಮ್‌ನ ಹಾರಾಜಿಗೆ ಇರಿಸಲಾಗಿತ್ತು. ಈ ಹರಾಜಿನಲ್ಲಿ ಇದು ಬರೋಬ್ಬರಿ 42,500 ರೂಪಾಯಿಗೆ ಹರಾಜಾಗಿದೆ. ಹೀಗಾಗಿ, ಇದು ಈ ಹಿಂದೆ ಎಂದೂ ಇಷ್ಟೊಂದು ದೊಡ್ಡ ಬೆಲೆಗೆ ಮಾರಾಟವಾಗದ ಹಾಗೂ ಹೊಸ ದಾಖಲೆ ಬರೆದ ಕಾಂಡೋಮ್ ಎನ್ನುವ ಖ್ಯಾತಿ ಗಳಿಸಿದೆ. ಇದು ಬರೋಬ್ಬರಿ 19 ಸೆಂ.ಟಿ ಮೀಟರ್ ಉದ್ದವಿದೆ.
ಎರಡು ಮೂರು ಶತಮಾನಗಳ ಹಿಂದೆ ವಿಶ್ವದ ಅತ್ಯಂತ ಶ್ರೀಮಂತರು ಇದನ್ನ ಬಳಸ್ತಿದ್ರಂತೆ. ಇದನ್ನು ಕುರಿಗಳ ಕರುಳು ಬಳಸಿ ತಯಾರಿಸಲಾಗಿದೆ. ಈ ಮಾದರಿಗೆ ಸಾಕಷ್ಟು ಸಮಯ ಹಿಡಿಸುತ್ತಿತ್ತು. ಅಲ್ಲದೇ ಆಗಿನ ಕಾಲದಲ್ಲಿ ಇದು ಎಲ್ಲರಿಗೂ ಸಿಗ್ತರಲಿಲ್ಲವಂತೆ. ಶ್ರೀಮಂತರು ಹಾಗೂ ರಾಜಮನೆತನಕ್ಕೆ ಸೇರಿದವರು ಮಾತ್ರ ಬಳಸುತ್ತಿದ್ದರು. ಹೀಗಾಗಿ, ಇದಕ್ಕೆ ಈಗ ಭಾರೀ ಬೆಲೆ ಬಂದಿದೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಸಹ ಆಗ್ತಿದೆ.












Click it and Unblock the Notifications