ಸಹಪಾಠಿಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಿದ್ದ ಯುವಕ ಅರೆಸ್ಟ್

ಬೆಂಗಳೂರು, ಅಕ್ಟೋಬರ್ 8: ಹಳೆಯ ಸಹಪಾಠಿಗೆ ವಾಟ್ಸ್ ಆಪ್ ಮೂಲಕ ಅಶ್ಲೀಲ ವಿಡಿಯೋ ಸಂದೇಶ ಕಳುಹಿಸಿ ನಿತ್ಯ ಹಿಂಸೆ ನೀಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಭಾರ್ಗವ್ ಕೆ ಬಂಧಿತ ಯುವಕ.

ಭಾರ್ಗವ್ ಮೂಲತಹ ಆಂಧ್ರಪ್ರದೇಶದವನು, ಲಾಲ್‌ಬಾಗ್‌ ಬಳಿ ಇರುವ ಕಾಲೇಜು ಒಂದರಲ್ಲಿ ಪ್ರಥಮ ಬಿಎ ವ್ಯಾಸಂಗ ಮಾಡುತ್ತಿದ್ದ, ಮೂರು ವಿಷಯಗಳಲ್ಲಿ ಫೇಲ್ ಆದ ಕಾರಣ ಅರ್ಧಕ್ಕೇ ಕಾಲೇಜು ಬಿಟ್ಟಿದ್ದ ಆದರೆ ಸಹಪಾಠಿಯನ್ನು ಕಾಡಿಸುವುದು ಮಾತ್ರ ಮುಂದುವರೆಸಿದ್ದ.

ದಿನನಿತ್ಯ ಯುವತಿಗೆ ಅಶ್ಲೀಲ ವಿಡಿಯೋ, ಸಂದೇಶಗಳನ್ನು ಕಳುಹಿಸಿ ಆಕೆಗೆ ಮಾನಸಿಕ ಹಿಂಸೆ ನೀಡುತ್ತಿದ್ದಆತ ಕಾಲೇಜಿನಲ್ಲಿದ್ದ ಸಂದರ್ಭದಲ್ಲೂ ಕೂಡ ಸಾಕಷ್ಟು ವಿದ್ಯಾರ್ಥಿಗಳು ಆಡಳಿತ ಮಂಡಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮವನ್ನು ತೆಗೆದುಕೊಂಡಿರಲಿಲ್ಲ, ಭಾರ್ಗವ್ ಬಳಿ ಅವನ ಕ್ಲಾಸಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರು ಸೇರಿದಂತೆ ಅನೇಕ ಹುಡುಗಿಯರ ನಂಬರ್ ಪಡೆದಿದ್ದ. ಮನೆಗೆ ಬಂದ ನಂತರ ಎಲ್ಲರಿಗೂ ಕೆಟ್ಟ ಸಂದೇಶಗಳನ್ನು ಕಳುಹಿಸುತ್ತಿದ್ದ.

College dropout held for sending obscene videos on WhatsApp in Bengaluru

ಎಲ್ಲಾ ವಿದ್ಯಾರ್ಥಿನಿಯರು ಸೇರಿ ಪ್ರಾಂಶುಪಾಲರ ಮೇಲೆ ಒತ್ತಡ ಹಾಕಿದಾಗ ಎಚ್ಚೆತ್ತ ಅವರು ಭಾರ್ಗವ್ ಮೇಲೆ ದೂರು ದಾಖಲಿಸಿದ್ದಾರೆ.ಆದರೆ ಸಂದೇಶ ಕಳುಹಿಸುತ್ತಿದ್ದವನು ಆತನೇ ಎಂದು ಅನುಮಾನವಿದ್ದರೂ ದೃಢಪಟ್ಟಿರಲಿಲ್ಲ.

ಟ್ರೂ ಕಾಲರ್ ನಲ್ಲಿ ನೋಡಿದಾಗ ಅದರಲ್ಲಿ ಬೇರೆಯೇ ಹೆಸರಿತ್ತು ಆದರೆ ವಿದ್ಯಾರ್ಥಿನಿಯರು ಆತನ ಮೇಲೆ ಸಂಶಯ ವ್ಯಕ್ತಪಡಿಸಿದ್ದರು. ಬಳಿಕ ಭಾರ್ಗವ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಬೇರೆಯವರ ಹೆಸರಿನಲ್ಲಿ 5 ಸಿಮ್ ಕಾರ್ಡ್ ಗಳನ್ನು ಖರೀದಿಸಿದ್ದ. ಅಷ್ಟೇ ಅಲ್ಲದೆ ವಿದ್ಯಾರ್ಥಿನಿಯರಿಗೆ ಕರೆ ಮಾಡಿ ಕೆಟ್ಟ ಶಬ್ದಗಳನ್ನು ಬಳಸಿ ಮಾತನಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+