ಸಿಸಿಬಿ ಪೊಲೀಸರಿಗೆ ಸೆರೆ ಸಿಕ್ಕ ಕೊಕೇನ್ ಕಿಂಗ್ ಪಿನ್
ಬೆಂಗಳೂರು, ಡಿಸೆಂಬರ್ 15: ರಾಜಧಾನಿಯಲ್ಲಿ ಕೊಕೇನ್ ಮಾರಾಟ ಜಾಲ ವಿಸ್ತರಿಸಿದ್ದ ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಚೀಫ್ ಎಂದೇ ಕರೆಸಿಕೊಳ್ಳುತ್ತಿದ್ದ ಈತನ ಡ್ರಗ್ ನೆಟ್ ವರ್ಕ್ ನೋಡಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.
ಚಿಡಿಬೇರ್ ಅಂಬ್ರೋಸ್ ಬಂಧಿತ ಆರೋಪಿ. ನೈಜೀರಿಯಾ ಮೂಲದ ಸಿಲಿಕಾನ್ ಸಿಟಿ ಕೊಕೇನ್ ಡ್ರಗ್ ಜಾಲದ ಮುಖ್ಯಸ್ಥ ಎಂದೇ ಪರಿಚಿತನಾಗಿದ್ದ. ನೈಜೀರಿಯಾ ಪ್ರಜೆಗಳ ಮೂಲಕವೇ ಬೆಂಗಳೂರಿನ ಕಾಲೇಜುಗಳಿಗೆ ಕೊಕೇನ್ ಪೂರೈಸುತ್ತಿದ್ದ.

Recommended Video
ಬೆಂಗಳೂರು: ಚಿಂತಕರ ಚಾವಡಿ ಪರಿಷತ್ ನಲ್ಲಿ ಗಲಾಟೆ-ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ | Oneindia Kannada
ಡಾರ್ಕ್ ವೆಬ್ ಹಾಗೂ ಇತರೆ ಮಾರ್ಗದ ಮೂಲಕ ಕೊಕೇನ್ ತರಿಸಿಕೊಳ್ಳುತ್ತಿದ್ದ. ಈವರೆಗೂ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಡ್ರಗ್ ಪೆಡ್ಲರ್ ಗಳು ಕೊಕೇನ್ ಕಿಂಗ್ ಪಿನ್ ಅಂಬ್ರೋಸ್ ಹೆಸರು ಬಾಯಿಬಿಟ್ಟಿದ್ದರು. ಖಚಿತ ಮಾಹಿತಿ ಆಧರಿಸಿ ಅಂಬ್ರೂಸ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈತನೊಂದಿಗೆ ಸಂಪರ್ಕ ಹೊಂದಿರುವ ಇತರೆ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.











Click it and Unblock the Notifications