ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

16 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಬಡಾವಣೆ ಅಭಿವೃದ್ಧಿಗೆ ಸಿಎಂ ಚಾಲನೆ

By Manjunatha
|
Google Oneindia Kannada News

ಬೆಂಗಳೂರು, ಮಾರ್ಚ್‌ 05: ನಾಡ ಪ್ರಭು ಕೆಂಪೇಗೌಡ ಬದಾವಣೆಗೆ ಎರಡು ಹಂತಗಳಲ್ಲಿ ನೀರು, ಒಳಚರಂಡಿ ಮತ್ತು ವಿದ್ಯುತ್ ಸೌಲ್ಯ ಕಲ್ಪಿಸುವ ರೂ 16000 ಕೋಟಿ ವೆಚ್ಚದ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಶಂಕು ಸ್ಥಾಪನೆ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳು ವಿಶ್ವೇಶ್ವರಯ್ಯ ಬಡಾವಣೆಯಿಂದ ಮಾಗಡಿ ಮುಖ್ಯ ರಸ್ತೆ ಸಂಪರ್ಕಿಸುವ 150 ಅಡಿ ರಸ್ತೆ, ಮಾಗಡಿ ರಸ್ತೆಯಿಂದ ಏರೋಹಳ್ಳಿ ಮಾರ್ಗವಾಗಿ ತುಮಕೂರು ಮೂಖ್ಯ ರಸ್ತೆ ಸಂಪರ್ಕ ರಸ್ತೆ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.

ನವಕರ್ನಾಟಕ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ಸಿದ್ದರಾಮಯ್ಯನವಕರ್ನಾಟಕ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ಸಿದ್ದರಾಮಯ್ಯ

ಮಾಗಡಿ ರಸ್ತೆ, ನೈಸ್ ರಸ್ತೆ, ಜಂಕ್ಷನ್ ಬಳಿ ಗೊಲ್ಲರಹಟ್ಟಿಯಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಮುಖ್ಯ ಮಂತ್ರಿಯವರು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಬಯಸಿದವರಿಗೆ ಈಗಾಗಲೆ 5000 ನಿವೇಶನಗಳನ್ನು ಹಂಚಿದ್ದೇವೆ. ಭೂಮಿ ಕಳೆದುಕೊಂಡವರಿಗೆ 2000 ನಿವೇಶನ ಹಂಚಿದ್ದೇವೆ ಎರಡನೇ ಹಂತದಲ್ಲಿ 5000 ನಿವೇಶನಗಳನ್ನು ಅಪೇಕ್ಷಿಸಿದವರಿಗೆ ಮತ್ತು 3000 ನಿವೇಶನಗಳನ್ನು ಭೂಮಿ ಕಳೆದುಕೊಂಡವರಿಗೆ ನೀಡಲಾಗುತ್ತದೆ.

ಜಪಾನ್‌ನಿಂದ ನೆರವು

ಜಪಾನ್‌ನಿಂದ ನೆರವು

ಬಡಾವಣೆಗೆ ಮೂಲ ಸೌರ್ಕಗಳ ಅಗತ್ಯವಿದ್ದು ನೀರು, ಒಳಚರಂಡಿ ಹಾಗೂ ವಿದ್ಯುತ್ ಸೌಕರ್ಯ ಒದಗಿಸುವ ಕೆಲಸವನ್ನೂ ಸಹ ಕೈಗೊಳ್ಳಲಾಗುತ್ತದೆ ಅದಕ್ಕೆ ಇಂದು ಚಾಲನೆ ನೀಡಲಾಗಿದೆ. ಮುಂದಿನ 20-30 ವರ್ಷಗಳಲ್ಲಿ ನಗರಕ್ಕೆ ಕುಡಿಯುವ ನೀರಿಗೆ ಸಮಸ್ಯೆಯಾಗದಿರಲಿ ಎಂಬ ದೂರಗಾಮಿ ಚಿಂತನೆಯಿಂದ ಜಪಾನ್ ಅಂತರ ರಾಷ್ಟ್ರೀಯ ಸಹಕಾರ ಸಂಸ್ಥೆಯ ಆರ್ಥಿಕ ನೆರವಿನಿಂದ ನಗರಕ್ಕೆ ಹೆಚ್ಚಿನ ಕಾವೇರಿ ನೀರನ್ನು ತರುವ ಯೋಜನೆ ಕೈಗೊಳ್ಳಲಾಗುತ್ತಿದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.

30 ಲಕ್ಷ ಕುಟುಂಬಕ್ಕೆ ಗ್ಯಾಸ್

30 ಲಕ್ಷ ಕುಟುಂಬಕ್ಕೆ ಗ್ಯಾಸ್

ರಾಜ್ಯದ 4 ಕೋಟಿ ಬಡ ಜನರಿಗೆ ತಲಾ 7 ಕೆಜಿ ಅಕ್ಕಿಯನ್ನು ಪ್ರತಿತಿಂಗಳು ನೀಡಿದ ಹೆಗ್ಗಳಿಗೆ ಕರ್ನಾಟಕ ಸರ್ಕಾರದ್ದಾಗಿದೆ ಈ ಸೌಕರ್ಯ ದೇಶದ ಬೇರೆ ಯಾವುದೇ ರಾಜ್ಯ ನೀಡಿಲ್ಲ. ಅದೇ ರೀತಿ ಅನಿಲ ಭಾಗ್ಯ ಯೋಜನೆಯಡಿ 30 ಲಕ್ಷ ಕುಟುಂಬಗಳಿಗೆ ತಲಾ ರೂ 4254 ವೆಚ್ಚದಲ್ಲಿ ಗ್ಯಾಸ್ ಸೌಲಭ್ಯ ಕಲ್ಪಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.

ದೇವದಾಸಿಯರ ಮಕ್ಕಳಿಗೆ ಆಶಾಕಿರಣವಾದ ಬಜೆಟ್ದೇವದಾಸಿಯರ ಮಕ್ಕಳಿಗೆ ಆಶಾಕಿರಣವಾದ ಬಜೆಟ್

ಎಪಿಎಲ್ ಕಾರ್ಡ್‌ದಾರರಿಗೂ ಸೌಲಭ್ಯ

ಎಪಿಎಲ್ ಕಾರ್ಡ್‌ದಾರರಿಗೂ ಸೌಲಭ್ಯ

ಸರ್ವರಿಗೂ ಆರೋಗ್ಯ ಸೇವೆ ಕಾರ್ಯಕ್ರಮದಡಿಯಲ್ಲಿ ಒಂದು ಕೋಟಿ ನಲವತ್ತಮೂರು ಲಕ್ಷ ಬಿಪಿಎಲ್ ಕಾರ್ಡು ಹೊಂದಿದವರಿಗೆ ಸರ್ಕಾರಿ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಲಾದ ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ ಒದಗಿಸುವ ವಿನೂತನ ಯೋಜನೆಯನ್ನು ಜಾರಿ ಮಾಡಲಾಗಿದೆ, ಬಡತನದ ರೇಖೆಗಿಂತ ಮೇಲಿರುವವರಿಗೆ ಈ ಯೋಜನೆಯಡಿ ಶೇ 30ರಷ್ಟು ವೆಚ್ಚವನ್ನು ಸರ್ಕಾರ ಭರಿಸಲಿದ್ದು ಉಳಿಕೆ ಹಣವನ್ನು ಸಂಬಂಧಿಸಿದವರು ಭರಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಮೆಟ್ರೋ ವಿಸ್ತರಣೆ

ಮೆಟ್ರೋ ವಿಸ್ತರಣೆ

ಬೆಳೆಯುತ್ತಿರುವ ನಗರದಲ್ಲಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ಪ್ರಯತ್ನವಾಗಿ ಮೊದಲ ಹಂತದಲ್ಲಿ 42 ಕಿ ಮೀ ಮೆಟ್ತೋ ಮಾರ್ಗ ಕಾರ್ಯಾರಂಭ ಮಾಡಿದ್ದು ಎರಡನೇ ಹಂತದ 72 ಕಿ ಮೀ ಕಾಮಗಾರಿ ಪ್ರಗತಿಯಲ್ಲಿದೆ .2025ರ ವೇಳೆಗೆ 260 ಕಿಮೀ ಮೆಟ್ರೋ ಮಾರ್ಗ ನಿರ್ಮಿಸುವ ಗುರಿಹೊಂದಲಾಗಿದೆ ಎಂದರು.

ಇನ್ನೂ ಹಲವರು ಭಾಗಿ

ಇನ್ನೂ ಹಲವರು ಭಾಗಿ

ಪ್ರಾಸ್ತಾವಿಕ ಭಾಷಣ ಮಾಡಿದ ಯಶವಂತಪುರ ವಿಧಾನಸಭಾಕ್ಷೇತ್ರದ ಶಾಸಕರಾದ ಶ್ರೀ ಎಸ್ ಟಿ ಸೋಮಶೇಖರ್‍ಗೌಡ ಅವರು ವಿವಿಧ ಅಭಿವೃಧ್ದಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ಅಭಿವೃದ್ಧಿ ಮತ್ತು ಯೋಜನಾ ಸಚಿವರಾದ ಶ್ರೀ ಕೆ.ಜೆ ಜಾರ್ಜ್, ಲೋಕೋಪಯೋಗಿ ಸಚಿವ ಡಾ.ಹೆಚ್ ಸಿ ಮಹದೇವಪ್ಪ , ಶಾಸಕರಾದ ಭೈರತಿ ಬಸವರಾಜು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಶಾಸಕರಾದ ಶ್ರೀ ವೆಂಕಟೇಶ್,ಪೂಜ್ಯ ಮಹಾ ಪೌರರಾದ ಶ್ರೀ ಸಂಪತ್ ರಾಜು , ಹಿರಯ ಅಧೀಕಾರಗಳು ಪಾಲ್ಗೊಂಡಿದ್ದರು . ಇದೇ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳು ವಿವಿಧ ಯೋಜನೆ ಫಲಾನುಭವಿಗಳಿಗೆ ಹಕ್ಕು ಪತ್ತ ವಿತರಣೆ ಮಾಡಿದರು

English summary
CM Siddaramaiah inaugurated rs 16 crore worth Kempegowda layout development program. He also inaugurated Magadi road construction work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X