Rain Alert: ಬೆಂಗಳೂರಿನ ಒಂದು ವಾರದ ಹವಾಮಾನ ವರದಿ, ಮಳೆ ಮುನ್ಸೂಚನೆ

ಬೆಂಗಳೂರು, ಮೇ 31: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಲ್ಲಲ್ಲಿ ತುಂತುರು ಮಳೆ ಆಗುತ್ತಿದೆ. ಕಳೆದೊಂದು ವಾರದ ಹಿಂದೆ ಜೋರಾಗಿ ಸುರಿದಿದ್ದ ಮಳೆ ತಣ್ಣಗಾಗಿದೆ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಚುರುಕಾಗಿರುವ ಮಳೆ, ಬೆಂಗಳೂರಿನಲ್ಲಿ ತಾತ್ಕಾಲಿಕವಾಗಿ ದುರ್ಬಲವಾಗಿದೆ. ಮುಂದಿನ ಒಂದು ವಾರದ ಕಾಲ ನಗರದಲ್ಲಿ ಇದೇ ರೀತಿ ಮೋಡ ಕವಿದ, ಕಡಿಮೆ ತಾಪಮಾನದ ತಂಪು ವಾತಾವರಣ ಕಂಡು ಬರಲಿದೆ.

ಮುಂಗಾರು ಮಳೆ ಆರಂಭವಾದ ಬಳಿಕ ಹೆಚ್ಚು ಮಳೆಯಾಗಿದ್ದ ಬೆಂಗಳೂರಿನಲ್ಲಿ ಇದೀಗ ತಂಪು ವಾತಾವರಣ ನಿರ್ಮಾಣವಾಗಿದೆ. ಆಗೊಮ್ಮೆ ಈಗೊಮ್ಮೆ ಸೂರ್ಯನ ದರ್ಶನವಾಗುತ್ತಿದೆ. ಸದ್ಯದ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಜೂನ್ 06ರವರೆಗೆ ತುಂತುರು ಮತ್ತು ಹಗುರ ಮಳೆ ಆಗುವ ನಿರೀಕ್ಷೆ ಇದೆ. ಕಪ್ಪು ಮೋಡ ತುಂಬಿದ ಆಗಸ ಕಂಡು ಬರಲಿದೆ. ಎಲ್ಲಿಯೂ ಭಾರೀ ಮಳೆಯ ಲಕ್ಷಣ ಇಲ್ಲ ಎಂದು ತಿಳಿಸಿದೆ.

Cloudy Sky and Light Rainfall in next one week at Bengaluru

ಇಂದಿನಿಂದ ಒಂದು ವಾರದವರೆಗೆ ನಗರದಲ್ಲಿ ಕೆಲವೆಡೆ ಲಘು ಮತ್ತು ತುಂತುರು ಮಳೆ ಆಗಬಹುದು. ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್, ಯಲಹಂಕ, ದೇವನಹಳ್ಳಿ ಭಾಗದಲ್ಲಿ ಜೋರು ಮಳೆ ಆಗಬಹುದು. ಅರಬ್ಬಿ ಸಮುದ್ರ ಮೇಲ್ಮೈನಲ್ಲಿ ಉಂಟಾಗಿರುವ ಹವಾಮಾನ ಬದಲಾವಣೆಗಳು ಬೆಂಗಳೂರಿನ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ.

ನಗರದ ತಾಪಮಾನ ಗರಿಷ್ಠ 27ರಿಂದ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 20-21ರಿಂದ ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ನಿತ್ಯ ಅಲ್ಲಲ್ಲಿ ಹಗುರ ಮಳೆ ಆಗಲಿದೆ. ಇನ್ನು ರಾಜ್ಯದ ಕರಾವಳಿ ಹಾಗೂ ಮಲೆನಾಡು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಳೆದೊಂದು ವಾರದಿಂದ ಕೊಡಗು, ಮಡಿಕೇರಿ, ಮೈಸೂರು, ದಕ್ಷಿಣ ಕನ್ನಡ, ಹಾಸನ ಸೇರಿದಂತೆ ವಿವಿಧ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣದಿಂದ ವ್ಯಾಪಕ ಮಳೆ ಆಗಿದೆ. ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+