ದೀಪಿಕಾ ಎದೆ ಸೀಳುನೋಟ ವಿವಾದದ ಮೇಲೆ ವಾರೆನೋಟ

ಬೆಂಗಳೂರು, ಸೆ.15: ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ ಅವರ ಹಳೆ ವಿಡಿಯೋ ತುಣುಕಿನಲ್ಲಿದ್ದ ಎದೆ ಸೀಳುನೋಟವನ್ನು ಜನಪ್ರಿಯ ಮಾಧ್ಯಮ ಸಂಸ್ಥೆ ಟ್ವೀಟ್ ಮಾಡಿತ್ತು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ್ದ ದೀಪಿಕಾ ಪಡುಕೋಣೆ ಕೆಂಡ ಕಾರಿದ್ದರು. ಈಗ ದೀಪಿಕಾ ಅವರಿಗೆ ಮಹಿಳಾ ಪರ ಸಂಘಟನೆಗಳು, ಬಾಲಿವುಡ್ದಿನ ಗೆಳೆಯ, ಗೆಳತಿಯರು ಸೇರಿದಂತೆ ಇತರೆ ಮಾಧ್ಯಮಗಳಿಂದಲೂ ಭಾರಿ ಬೆಂಬಲ ವ್ಯಕ್ತವಾಗಿದೆ.

ಆಂಗ್ಲ ದಿನಪತ್ರಿಕೆ ತಮ್ಮ ಎದೆ ಸೀಳು ನೋಟವನ್ನು ಪ್ರಕಟಿಸಿ ಟ್ವೀಟ್ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ್ದ ನಟಿ ದೀಪಿಕಾ ಪಡುಕೋಣೆ 'ಹೌದು! ನಾನು ಮಹಿಳೆ. ನನಗೆ ಸ್ತನಗಳಿವೆ. ಕ್ಲೀವೇಜ್ ಕೂಡಾ ಇದೆ. ನಿಮಗೆ ಇದರಿಂದ ಏನಾದರೂ ತೊಂದರೆ ಇದೆಯೇ? ತಮ್ಮನ್ನು ಭಾರತದ ಅಗ್ರ ದಿನಪತ್ರಿಕೆ ಎಂದು ಹೇಳಿಕೊಳ್ಳುವವರಿಗೆ ಇದೊಂದು ಸುದ್ದಿಯೇ? ಮಹಿಳೆಯರನ್ನು ಗೌರವಿಸಲು ಗೊತ್ತಿಲ್ಲದಿದ್ದರೆ ಮಹಿಳೆಯರ ಸಬಲೀಕರಣದ ಬಗ್ಗೆ ಮಾತನಾಡಬೇಡಿ' ಎಂದು ಗರಂ ಆಗಿ ಉತ್ತರಿಸಿದ್ದರು. [ಭರ್ಜರಿ ಡೀಲಿಗೆ ಸಹಿ ಹಾಕಿದ ದೀಪಿಕಾ?]

ಈ ರೀತಿ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ಅಭಿಮಾನಿಗಳು ಹಾಗೂ ಬಾಲಿವುಡ್ ಮಂದಿ ಅಲ್ಲದೆ, ಸಾರ್ವಜನಿಕರು ಮತ್ತು ಮಾಧ್ಯಮ ಸಂಸ್ಥೆಗಳು ದೀಪಿಕಾ ಅವರ ದಿಟ್ಟ ಉತ್ತರಕ್ಕೆ ಬೆಂಬಲ ಸೂಚಿಸಿ ಅಭಿನಂದಿಸಿದ್ದಾರೆ. ಇಂಥ ಆಕ್ರೋಶ ವ್ಯಕ್ತಪಡಿಸುವ ಮೂಲಕ ದೀಪಿಕಾ ಸರಿಯಾದ ಉತ್ತರವನ್ನೇ ನೀಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಭಾರಿ ಚರ್ಚೆಗೊಳಗಾದ ಈ ಟ್ವೀಟ್ ವಾರ್ ಬಗ್ಗೆ ಒಂದು ವಾರೆನೋಟ ಇಲ್ಲಿದೆ

ಇಷ್ಟಕ್ಕೂ ಅದು ಹಳೆ ವಿಡಿಯೋ ಟ್ವೀಟ್

ಇಷ್ಟಕ್ಕೂ ಅದು ಹಳೆ ವಿಡಿಯೋ ಟ್ವೀಟ್

ನಟ ಶಾರುಖ್ ಖಾನ್ ಜತೆ ನಟಿಸಿದ್ದ ಚೆನ್ನೈ ಎಕ್ಸ್‌ಪ್ರೆಸ್ ಚಿತ್ರದ ಬಿಡುಗಡೆ ವೇಳೆ ಬಿಳಿ ವರ್ಣದ ಅನಾರ್ಕಲಿ ಸೂಟ್ ಮತ್ತು ಆಮ್ರಪಾಲಿ ಆಭರಣಗಳನ್ನು ತೊಟ್ಟ ದೀಪಿಕಾ ಅವರ ವಿಡಿಯೋವನ್ನು ದಿನಪತ್ರಿಕೆ ತಮ್ಮ ವೆಬೈಸೈಟ್‌ನಲ್ಲಿ ಹಾಕಿತ್ತು.

ಆ ವಿಡಿಯೋ ಬಗ್ಗೆ ಬರೆಯಲಾಗಿದ್ದ ಸುದ್ದಿ ಏನೆಂದರೆ- 'ಓಹ್ ಮೈ ಗಾಡ್! ದೀಪಿಕಾ ಪಡುಕೋಣೆ ಅವರ ಕ್ಲೀವೇಜ್ ಶೋ'. ವಿಡಿಯೋದಲ್ಲಿ ದೀಪಿಕಾ ಅವರ ಕ್ಲೀವೇಜ ಅನ್ನೆ ಮತ್ತೆ-ಮತ್ತೆ ತೋರಿಸಲಾಗಿದೆ. ಇದರಿಂದ ರೊಚ್ಚಿಗೆದ್ದ ನಟಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನವನ್ನು ತೋರಿಸಿಕೊಂಡಿದ್ದಾರೆ.

ನಾವು ದೀಪಿಕಾರನ್ನು ಹೊಗಳಿದೆವು ಎಂದು ಸಮರ್ಥನೆ

ನಾವು ದೀಪಿಕಾರನ್ನು ಹೊಗಳಿದೆವು ಎಂದು ಸಮರ್ಥನೆ

ನಾವು ತಪ್ಪಾಗಿ ಟ್ವೀಟ್ ಮಾಡಿಲ್ಲ, ದೀಪಿಕಾ ಪಡುಕೋಣೆ ಅವರ ದೇಹಸಿರಿ ಪ್ರಶಂಸಿಸಿ ಟ್ವೀಟ್ ಮಾಡಿದೆವು. ಚೆನ್ನಾಗಿ ಕಾಣುವ ದೀಪಿಕಾರ ಬಗ್ಗೆ ಎಲ್ಲರಿಗೂ ತಿಳಿಯಲಿ ಎಂದು ಟ್ಟೀಟ್ ಮಾಡಲಾಯಿತು ಎಂದು ಮಾಧ್ಯಮ ಸಂಸ್ಥೆ ಸಮರ್ಥಿಸಿಕೊಂಡಿತ್ತು.

ನಟ ಬೋಮನ್ ಇರಾನಿ ಪ್ರತಿಕ್ರಿಯೆ

ನಟ ಬೋಮನ್ ಇರಾನಿ ಪ್ರತಿಕ್ರಿಯಿಸಿ ಇದು ಪ್ರಶಂಸಿಸಿದ ಟ್ವೀಟ್ ಅಲ್ಲ, ದೀಪಿಕಾ ನಿಮ್ಮ ನಿಲುವಿಗೆ ನನ್ನ ಅಭಿಮತವಿದೆ ಎಂದಿದ್ದಾರೆ

ಅರ್ಜುನ್ ರಾಮ್ ಪಾಲ್ ಮಾತು

ನಾನು ಮಲೇಷಿಯಾದಲ್ಲಿದ್ದೇನೆ. ದೀಪಿಕಾ ಅವರ ಬಗ್ಗೆ ಬಂದಿರುವ ಟ್ವೀಟ್ ತುಂಬಾ ಚೀಪ್ ಪಬ್ಲಿಸಿಟಿಯಾಗಿದೆ. ದೀಪಿಕಾ ನಿಮಗೆ ನನ್ನ ಬೆಂಬಲವಿದೆ

ಪ್ರಿಯಾಂಕಾ ಚೋಪ್ರಾರಿಂದ ಬೆಂಬಲ

ನಟಿ ಪ್ರಿಯಾಂಕಾ ಚೋಪ್ರಾರಿಂದ ಬೆಂಬಲ ಸೂಚಿಸಿ ನಮ್ಮೆಲ್ಲರ ಪ್ರತಿನಿಧಿಯಾಗಿ ಟ್ವೀಟ್ ಮಾಡಿದ್ದಿ ಎಂದಿದ್ದಾರೆ.

ರಾಜದೀಪ್ ಸರ್ದೇಸಾಯಿ ಪ್ರತಿಕ್ರಿಯಿಸಿ

ರಾಜದೀಪ್ ಸರ್ದೇಸಾಯಿ ಪ್ರತಿಕ್ರಿಯಿಸಿ ಸರಿಯಾದ ಉತ್ತರ ನೀಡಿದ್ದೀರಿ ಎಂದಿದ್ದಾರೆ

Array

ಕವಿತಾ ಕೃಷ್ಣನ್ ಅವರಿಂದ ಟ್ವೀಟ್

ಕವಿತಾ ಕೃಷ್ಣನ್ ಅವರು ಟ್ವೀಟ್ ಮಾಡಿ.. ಮಹಿಳಾ ಕ್ರೀಡಾಪಟುಗಳಿಗೆ ಈ ರೀತಿ ಮಾಡುತ್ತಿದ್ದವು ಎಂದಿದ್ದಾರೆ.

ಪತ್ರಕರ್ತೆ ಬರ್ಖಾದತ್ ರಿಂದ ಬೆಂಬಲ

ಪತ್ರಕರ್ತೆ ಬರ್ಖಾದತ್ ರಿಂದ ಬೆಂಬಲ ವ್ಯಕ್ತವಾಗಿದ್ದು ಹೀಗೆ

ನಿರ್ಮಿತ್ ಕೌರ್ ಪ್ರತಿಕ್ರಿಯಿಸಿದ್ದು ಹೀಗೆ

ಪತ್ರಿಕೆಯ ಟ್ವೀಟ್ ಹಾಕಿ ನಿರ್ಮಿತ್ ಕೌರ್ ಪ್ರತಿಕ್ರಿಯಿಸಿದ್ದು ಹೀಗೆ

ಪತ್ರಿಕೆಯ ಟ್ವೀಟ್ ಗೆ ದೀಪಿಕಾ ಕೊಟ್ಟ ಉತ್ತರ ಹೀಗಿತ್ತು

ಪತ್ರಿಕೆಯ ಟ್ವೀಟ್ ಗೆ ದೀಪಿಕಾ ಕೊಟ್ಟ ಉತ್ತರ ಹೀಗಿತ್ತು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+