BBMP: ವೈಟ್ ಟಾಪಿಂಗ್ ಕಾಮಗಾರಿ ಸೇರಿ ವಿವಿಧ ಕಾಮಗಾರಿ ಗಡುವು ಕೊಟ್ಟ ಆಯುಕ್ತರು
ಬೆಂಗಳೂರು, ಡಿಸೆಂಬರ್ 13: ಬೆಂಗಳೂರಿನಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಗಡುವು ಫಿಕ್ಸ್ ಮಾಡಿದೆ. ಈಗಲಾದರೂ ನಗರದ ನಾಗರಿಕ ಸಮಸ್ಯೆಗಳಿಗೆ ಮುಕ್ತ ಸಿಗುತ್ತಾ? ಅಭಿವೃದ್ಧಿ ಯೋಜನೆಗಳಿಗೆ ವೇಗ ಸಿಕ್ಕು, ನಿಗದಿತ ದಿನಾಂಕದೊಳಗೆ ಪೂರ್ಣಗೊಳ್ಳುತ್ತಾ ಎಂದು ಕಾದು ನೋಡಬೇಕಿದೆ.
ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಆರ್.ಆರ್ ನಗರ ವಲಯ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಅವರು ಶುಕ್ರವಾರ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಧಿಕಾರಿಗಳು ಹಾಗೂ ಕಾಮಗಾರಿ ಗುತ್ತಿಗೆದಾರರಿಗೆ ಗಡುವು ನೀಡಿದರು.

ಯಶವಂತಪುರ ರೈಲ್ವೆ ನಿಲ್ದಾದ ಬಳಿಯ ತಣ್ಣೀರಹಳ್ಳ ಹಾಗೂ ರೈಲ್ವೆ ಕ್ವಾಟ್ರಸ್ ಬಳಿ ಮಳೆಗಾಲದಲ್ಲಿ ಜಲಾವೃತವಾಗುವುದನ್ನು ತಪ್ಪಿಸಬೇಕಿದೆ. ಈ ಸಲುವಾಗಿ 200 ಮೀಟರ್ ಉದ್ದ ಪೈಪ್ ಲೈನ್ ಅಳವಡಿಕೆ ಕಾಮಗಾರಿ ನಡೆದಿದ್ದು, ಆಯುಕ್ತ ಪರಿಶೀಲಿಸಿಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚನೆ ನೀಡಿದರು.
ತಣ್ಣೀರಹಳ್ಳ ಪ್ರದೇಶದಲ್ಲಿ ಜಲಾವೃತವಾಗುವುದನ್ನು ತಡೆಯಲು 1.8 ಮೀಟರ್ ನ ಸೀಮೆಂಟ್ ಕೊಳವೆ(ಪೈಪ್) ಅಳವಡಿಸಲಾಗುತ್ತಿದ್ದು, ಈ ಕಾಮಗಾರಿಯನ್ನು 1.5 ಕೋಟಿ ರೂ. ವೆಚ್ಚದಲ್ಲಿ ಕೈಗತ್ತಿಕೊಳ್ಳಲಾಗಿದೆ. ಕಾಮಗಾರಿ ಪೂರ್ಣಗೊಂಡರೆ ಇಲ್ಲಿ ಯಾವುದೇ ರೀತಿಯ ಜಲಾವೃತವಾಗುವುದಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ವೈಟ್ ಟಾಪಿಂಗ್ ಕಾಮಗಾರಿಗೆ ಮಾರ್ಚ್ 2025ರ ಗುಡುವು
ಯಶವಂತಪುರದ ಎಂಇಐ ರಸ್ತೆಯಲ್ಲಿ ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ಮಾರ್ಚ್ 2025ರ ಅಂತ್ಯೊಳಗಾಗಿ ಪೂರ್ಣಗೊಳಿಸಬೇಕು. 950 ಮೀ. ಉದ್ದದ ಎಂಇಐ ರಸ್ತೆಯಲ್ಲಿ ಸಂಚಾರಿ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು ಕಳೆದ 2 ತಿಂಗಳಿಂದ ವೈಟ್ ಟಾಪಿಂಗ್ ಕಾಮಗಾರಿ ಆರಂಭಿಸಲಾಗಿದೆ. ಎರಡೂ ಬದಿಯ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಿ ಕಾಮಗಾರಿ ನಡೆಸಲಾಗುತ್ತಿದೆ.
ಈ ರಸ್ತೆಯಲ್ಲಿ ನೀರುಗಾಲುವೆ, ಸ್ಯಾನಿಟರಿ ಲೈನ್, ಡಕ್ಟ್ ಅಳವಡಿಕೆ, ವಿದ್ಯುತ್ ಲೈನ್ ಚೇಂಬರ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಪಾದಚಾರಿ ಮಾರ್ಗ ಕಾಮಗಾರಿ ಪ್ರಗತಿಯಲ್ಲಿದೆ. ವೈಟ್ ಟಾಪಿಂಗ್ ಕಾಮಗಾರಿಯನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸುವಂತೆ ನಿರ್ದೇಶಿಸಿದರು.
ನಾಗರಭಾವಿ ಕೆರೆ: ಸರ್ವೇ ಇಲಾಖೆಗೆ ಸೂಚನೆ
ನಗರದ ನಾಗರಭಾವಿ ಕೆರೆಗೆ ಸಂಬಂಧಿಸಿದಂತೆ ಸರ್ವೆ ಇಲಾಖೆಯ ವತಿಯಿಂದ ಕೂಡಲೇ ಸರ್ವೆ ವರದಿ ಪಡೆದು, ಅದರಂತೆ ಫೆನ್ಸಿಂಗ್ ಕಾರ್ಯ ಕೈಗೊಳ್ಳಬೇಕು. ಈ ಕೆರೆಯು 4 ಎಕರೆ 7 ಗುಂಟೆ ಇದ್ದು, ಕೆರೆಯ ಇನ್ಲೆಟ್ ಭಾಗದಲ್ಲಿ ಆರ್.ಸಿ.ಸಿ ವಾಲ್ ಕಾಮಗಾರಿ ನಡೆಯುತ್ತಿದ್ದು, ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಹೇಳಿದರು.
ಕೆರೆ ಪಕ್ಕದಲ್ಲಿ ಉದ್ಯಾನಕ್ಕೆಂದು ಮೀಸಲಿಟ್ಟಿರುವ ಖಾಲಿ ಜಾಗ ಇದೆ. ಅದನ್ನು ಸರ್ವೇ ಮಾಡಿ ಗಡಿ ಗುರುತಿಸಿ ಫೆನ್ಸಿಂಗ್ ಮಾಡಲು ಸೂಚಿಸಿದರು.
ಕುವೆಂಪು ರಸ್ತೆ ಟಾಪಿಂಗ್ ಕಾಮಗಾರಿಗೆ ಮುಕ್ತಿ ಯಾವಾಗ?
ಕೆಂಗೇರಿ ಹಳೆ ರಿಂಗ್ ರಸ್ತೆಯಿಂದ ಅಮ್ಮ ಆಶ್ರಮದ ವರೆಗಿನ ಕುವೆಂಪು ಮುಖ್ಯರಸ್ತೆಯಲ್ಲಿ 1.04 ಕಿ.ಮೀ ಉದ್ದ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅದನ್ನು ಮುಂದಿನ ವರ್ಷ ಪೆಬ್ರವರಿ ಅಂತ್ಯದೊಳಗಾಗಿ ಕಾಮಗಾರಿ ಪೂರ್ಣಗೊಳಿಬೇಕು. ಜನ ಸಂಚಾರಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಬೇಕು.
ಕುವೆಂಪು ಮುಖ್ಯ ರಸ್ತೆ ಸಬ್ ಆರ್ಟಿರಿಯಲ್ ರಸ್ತೆಯಾಗಿದೆ. ಈಗಾಗಲೇ ಪೈಪ್ ಲೈನ್, ಡಕ್ಟ್, ಯುಜಿಡಿ, ಚೇಂಬರ್ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಇದೀಗ ವೈಟ್ ಟಾಪಿಂಗ್ ಕಾಮಗಾರಿ ಶೀಘ್ರ ಕೈಗೆತ್ತೊಕೊಂಡು ಕಾಲಮಿತಿಯೊಳಾಗಿ ಪೂರ್ಣಗೊಳಿಸುವುದಾಗಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.












Click it and Unblock the Notifications