Bengaluru Weather: ಕೊನೆಗೂ ತಂಪಾಯ್ತು ಉದ್ಯಾನನಗರಿ ಬೆಂಗಳೂರು

ಬೆಂಗಳೂರು, ಮೇ. 11 : ಸುಮಾರು ಎರಡು ತಿಂಗಳ ಕಾಲ ವಿಪರೀತ ಬಿಸಿಲಿನ ವಾತಾವರಣವನ್ನು ಅನುಭವಿಸಿರುವ ಬೆಂಗಳೂರಿನಲ್ಲಿ ಮಳೆ ಸುರಿಯಲು ಆರಂಭವಾಗಿದೆ. ಮಳೆ ಇದ್ದರೂ ಬಿಸಿಲು ಹೆಚ್ಚಾಗಿಯೇ ಇತ್ತು. ಆದರೆ, ಕಳೆದೊಂದು ವಾರದಿಂದ ವರುಣ ದೇವ ಕೃಪೆ ತೋರಿದ್ದು, ಮಾರ್ಚ್‌ನಿಂದ ಇಲ್ಲಿಯವರೆಗೆ ಕೊನೆಗೂ ಕನಿಷ್ಠ ತಾಪಮಾನ ದಾಖಲಾಗಿದೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಂಕಿ ಅಂಶಗಳ ಪ್ರಕಾರ ಶುಕ್ರವಾರ ನಗರದಲ್ಲಿ ಗರಿಷ್ಠ ತಾಪಮಾನ 31.9 ಡಿಗ್ರಿ ಸೆಲ್ಸಿಯಸ್‌ನಲ್ಲಿದೆ. ಫೆಬ್ರುವರಿಯಲ್ಲಿ ಕೇವಲ ಒಂದೆರಡು ದಿನ ಮಾತ್ರ ತಾಪಮಾನ ಕಡಿಮೆಯಾಗಿತ್ತು. ತೀವ್ರವಾದ ಬಿಸಿ ವಾತಾವರಣದ ದೀರ್ಘಾವಧಿಯ ಬಳಿಕ ಶುಕ್ರವಾರದ ಗರಿಷ್ಠ 31.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಬೆಂಗಳೂರಿಗೆ ಮೇ ತಿಂಗಳ ಸರಾಸರಿಗಿಂತ 1.3 ಡಿಗ್ರಿ ಕಡಿಮೆಯಾಗಿದೆ.

City recorded lowest maximum temperature since March IMD

ಕಳೆದೆರಡು ತಿಂಗಳಿಂದ ಬೆಂಗಳೂರಿಗರಿಗೆ ಬಿಸಿಲಿನ ಬೇಗೆ ಕಾಡಿದೆ. ಫೆಬ್ರವರಿಯಲ್ಲಿ ಕಡಿಮೆ ಗರಿಷ್ಠ ತಾಪಮಾನವು 30.4 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಅದು ಬಿಟ್ಟು ಶುಕ್ರವಾರವೇ ಗರಿಷ್ಠ ತಾಪಮಾನ 31.9 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ.

ಮಾರ್ಚ್ 22 ರಂದು ನಗರದಲ್ಲಿ ದಾಖಲಾದ ಕಡಿಮೆ ಗರಿಷ್ಠ ತಾಪಮಾನ (ಮಾರ್ಚ್‌ಗೆ) 32.6 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಏಪ್ರಿಲ್‌ನಲ್ಲಿ, ಮಳೆಯ ಕೊರತೆಯಿಂದಾಗಿ ನಗರದಲ್ಲಿ ತೀವ್ರ ತಾಪಮಾನ ದಾಖಲಾಗಿದೆ. ಆದರೂ, ಏಪ್ರಿಲ್‌ನಲ್ಲಿ ದಾಖಲಾದ ಅತ್ಯಂತ ಕಡಿಮೆ ಗರಿಷ್ಠ ತಾಪಮಾನವು ಕೇವಲ 34 ಡಿಗ್ರಿ ಸೆಲ್ಸಿಯಸ್ ಎಂದು ಹವಾಮಾನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

City recorded lowest maximum temperature since March IMD

ಬೆಂಗಳೂರಿನಲ್ಲಿ ಮುಂದಿನ ವಾರದಲ್ಲಿ ಹೆಚ್ಚಾಗಲಿದೆ ಮಳೆ

ಇತ್ತ, ಮೇ ತಿಂಗಳ ಆರಂಭದಿಂದ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದೆ. ಹೀಗಾಗಿ ತಾಪಮಾನ ಗಮನಾರ್ಹವಾಗಿ ಕಡಿಮೆಯಾಗಿದೆ. ಮೇ 1 ರಂದು 38.1 ಡಿಗ್ರಿ ಸೆಲ್ಸಿಯಸ್‌ ಇದ್ದ ತಾಪಮಾನ 10 ದಿನಗಳ ಅಂತರದಲ್ಲಿ 31.9 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಮಳೆ ಇನ್ನು ಒಂದು ವಾರ ಮುಂದುವರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೇ ತಿಂಗಳಲ್ಲಿ 128.7 ಮಿಮೀ ಮಳೆಯಾಗುತ್ತದೆ.

ಮೇ 14 ರವರೆಗೆ ಬಿರುಗಾಳಿ ಸಹಿತ ಮಳೆ

ಬೆಂಗಳೂರಿನಲ್ಲಿ ಮೇ 14 ರವರೆಗೆ ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ನಗರದಲ್ಲಿ ಹೆಚ್ಚಾಗಿ ಸಂಜೆ ಅಥವಾ ರಾತ್ರಿಯಲ್ಲಿ ಮಳೆ ಬರಲಿದೆ ಎಂದು ಮಾಹಿತಿ ನೀಡಿದೆ. ಮುಂದಿನ ಎರಡು ದಿನಗಳಲ್ಲಿ ತಾಪಮಾನವು ಕ್ರಮವಾಗಿ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ ಎಂದು ಅಂದಾಜಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+