ಚಿತ್ರಕಲಾ ಪರಿಷತ್ : ಕರಕುಶಲ ವಸ್ತು ಪ್ರದರ್ಶನ ಮಾರಾಟ ಮೇಳ

ಬೆಂಗಳೂರು ನವೆಂಬರ್ 20: ಭಾರತ ದೇಶದ ಮೂಲೆ ಮೂಲೆಗಳಲ್ಲೂ ಅತ್ಯಂತ ಹೆಮ್ಮೆಯ ಕರಕುಶಲ ಕಲಾವಿದರಿದ್ದಾರೆ. ಅವರ ಬಹುತೇಕ ಕಲಾಕೃತಿಗಳು ಹಾಗೂ ಕಲಾಪ್ರಕಾರಗಳು ಮರೆಯಾಗುವ ಆತಂಕವನ್ನು ಎದುರಿಸುತ್ತಿವೆ.

ಇಂಥ ಪ್ರಾಚೀನ ಹಾಗೂ ಭಾರತ ದೇಶದ ಸಾಂಸ್ಕೃತಿಕ ಭವ್ಯತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ನವೆಂಬರ್ 23 ರಿಂದ ಡಿಸೆಂಬರ್ 2 ರ ವರೆಗೆ ನಗರದ ಕರ್ನಾಟಕ ಚಿತ್ತಕಲಾ ಪರಿಷತ್ತಿನ ಆವರಣದಲ್ಲಿ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ.

ಈ ಮಾರಾಟ ಮತ್ತು ಪ್ರದರ್ಶನ ಮೇಳದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗಿನ ಕಲಾವಿದರು ಹಾಗೂ ಕಲಾಪ್ರಕಾರಗಳು ಪಾಲ್ಗೊಳ್ಳಲಿವೆ.

ದ ಸೋಕ್ ಮಾರ್ಕೇಟ್ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ
ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್
(ಶಿವಾನಂದ ವೃತ್ತದ ಬಳಿ)
ದಿನಾಂಕ: ನವೆಂಬರ್ 23 ರಿಂದ ಡಿಸೆಂಬರ್ 2 ರ ವರೆಗೆ
ಸಮಯ: ಬೆಳಿಗ್ಗೆ 11 ಗಂಟೆಯಿಂದ ಸಂಜೆ 7.30 ರ ವರೆಗೆ

ನೇಕಾರರು ಮತ್ತು ಕುಶಲಕರ್ಮಿಗಳು ಉತ್ಪಾದಿಸುವ ಉತ್ಪನ್ನಗಳಿಗೆ ದೇಶದ ಮುಖ್ಯ ನಗರಗಳಲ್ಲಿ ಮಾರಾಟ ಮೇಳವನ್ನು ಆಯೋಜಿಸುವ ಮೂಲಕ ನೇರವಾಗಿ ಅವರ ಉತ್ಪನ್ನಗಳು ಗ್ರಾಹಕರಿಗೆ ತಲುಪಿಸುವಂತೆ ವ್ಯವಸ್ಥೆ ಮಾಡುವುದು ಮತ್ತು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇಕಾರರೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭವನ್ನು ಹೆಚ್ಚು ಗಳಿಸುವಂತೆ ಮಾಡುವ ಉದ್ದೇಶವನ್ನು ದ ಸೋಕ್ ಮಾರ್ಕೇಟ್ ಪ್ರದರ್ಶನ ಹಾಗೂ ಮಾರಾಟ ಮೇಳ ಹೊಂದಿದೆ.

ಕಾಶ್ಮೀರದಿಂದ ಕಾಂಚಿಪುರಂವರೆಗಿನ ರೇಷ್ಮೆ ಸೀರೆ ಉತ್ಪಾದಕರು

ಕಾಶ್ಮೀರದಿಂದ ಕಾಂಚಿಪುರಂವರೆಗಿನ ರೇಷ್ಮೆ ಸೀರೆ ಉತ್ಪಾದಕರು

ನಗರದ ಶಿವಾನಂದ ವೃತ್ತದ ಬಳಿ ಇರುವ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ 23/11/2018 ರಿಂದ ಈ ಪ್ರದರ್ಶನ ಮತ್ತು ಮಾರಾಟ ಮೇಳ ಪ್ರಾರಂಭವಾಗಲಿದ್ದು, 02/12/2018 ರ ವರೆಗೆ ನಡೆಯಲಿದೆ.

ಈ ಮೇಳದಲ್ಲಿ ಕಾಶ್ಮೀರದಿಂದ ಕಾಂಚಿಪುರಂವರೆಗಿನ ರೇಷ್ಮೆ ಸೀರೆ ಉತ್ಪಾದಕರು, ರೇಷ್ಮೆ ಸೀರೆ ವಿನ್ಯಾಸಗಾರರು ಮತ್ತು ರೇಷ್ಮೆ ಸಹಕಾರ ಸಂಘಗಳು 100 ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ತಮ್ಮ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳನ್ನು ಬೆಂಗಳೂರು ಜನತೆಯ ಮುಂದೆ ಪ್ರತಿದಿನ ಬೆಳಿಗ್ಗೆ 11 ರಿಂದ ರಾತ್ರಿ 7.30 ರವರೆಗೆ ಪ್ರದರ್ಶಿಸಿ ಮಾರಾಟ ಮಾಡುವರು.

ವಿವಿಧ ಶೈಲಿಯ ಬಗೆ ಬಗೆ ಸೀರೆಗಳು

ವಿವಿಧ ಶೈಲಿಯ ಬಗೆ ಬಗೆ ಸೀರೆಗಳು

ಮೇಳದಲ್ಲಿ ತಸ್ಸರ್ ರೇಷ್ಮೆ ಸೀರೆಗಳು, ಕ್ರೇಪ್ ಮತ್ತು ಜಾರ್ಜೆಟ್ ಸಿಲ್ಕ್ ಸೀರೆಗಳು, ಅರಿಣಿ ರೇಷ್ಮೆ ಸೀರೆಗಳು, ಧರ್ಮಾವರಂ ಸೀರೆಗಳು, ಕಾಂಚಿಪುರಂ ಸಿಲ್ಕ್ ಮತ್ತು ಮದುವೆ ಸೀರೆಗಳು, ರಾ ಸಿಲ್ಕ್ ಮತ್ತು ಕೋಸಾ ಸೀರೆಗಳು, ಕಲ್ಕೊತ್ತಾ ಗಣಪತಿ ಸೀರೆಗಳು, ಢಾಕ ಸೀರೆಗಳು, ಡಿಸೈನರ್ ಎಂಬ್ರಾಯಿಡರಿ ಸೀರೆ ಮತ್ತು ಡ್ರೆಸ್, ಬಲ್‍ಚೂರಿ ರೇಷ್ಮೆ, ಮಟ್ಕಾ ಸೀರೆಗಳು, ಪ್ರೀಂಟೆಡ್ ಸೀರೆಗಳು, ಪಶ್ಮೀನಾ ಸೀರೆಗಳು, ಡಿಸೈನರ್ ಡ್ರೆಸ್ ಮೇಟಿರಿಯಲ್ಸ್‍ಗಳು ಮತ್ತು ಸೀರೆಗಳು, ಬಾಗಲ್‍ಪುರ್ ರೇಷ್ಮೆ ಸೀರೆ ಮತ್ತು ಡ್ರೆಸ್, ಉಪ್ಪಡಾ ಮತ್ತು ಗೊಡ್ವಾಲ್ ಸೀರೆಗಳು, ಮಹೇಶ್ವರಿ ಮತ್ತು ಕೋಟಾ ಸಿಲ್ಕ್, ಟೆಂಪಲ್ ಬಾರ್ಡಾರ್‍ಉಳ್ಳ ಮುಲ್‍ಬಾರಿ ಸಿಲ್ಕ್, ಕಲ್ಕೋತ್ತಾ ರೇಷ್ಮೆ ಸೀರೆಗಳು, ಬನಾರಸ್ ಮತ್ತು ಜಮ್‍ದಾನಿ ರೇಷ್ಮೆ, ಶಿಫಾನ್ ಸೀರೆಗಳು, ಬುಟ್ಟಿ ಸೀರೆಗಳು, ಚಂದೇರಿ ಸಿಲ್ಕ್ ಮತ್ತು ಕೈ ಅಚ್ಚಿನ ಸೀರೆಗಳು ಪ್ರದರ್ಶನಗೊಳ್ಳಲಿದೆ.

ಬೆಳ್ಳಿಯ ಸೂಕ್ಷ ಕೆತ್ತನೆಯ ಆಭರಣಗಳು

ಬೆಳ್ಳಿಯ ಸೂಕ್ಷ ಕೆತ್ತನೆಯ ಆಭರಣಗಳು

ಇಲ್ಲಿ ಹುಲ್ಲಿನ ಹಾಸು, ಬೆಳ್ಳಿಯ ಸೂಕ್ಷ ಕೆತ್ತನೆಯ ಆಭರಣಗಳು, ಸೆಣಬಿನ ಚಪ್ಪಲಿ, ಅಂದದ ಆಟಿಕೆಗಳು, ಜವಳಿ ಮತ್ತು ಕಚೇರಿಗೆ ಉಪಯುಕ್ತ ಸಾಮಾಗ್ರಿಗಳು ಸೇರಿದಂತೆ ಅನೇಕ ಕರಕುಶಲ ವಸ್ತುಗಳು ಲಭ್ಯವಿದೆ. ಈ ಮೇಳದ ಮುಖ್ಯ ಉದ್ದೇಶ ಸಾಂಪ್ರದಾಯಿಕ ಕಲಾಕೌಶಲ್ಯವನ್ನು ಬಳಸಿ ಆಧುನಿಕ ಜೀವನ ಶೈಲಿಗೆ ತಕ್ಕ ಉತ್ಪನ್ನಗಳನ್ನು ತಯಾರಿಸುವುದಾಗಿದೆ. ಢಾಕದ ಬಿಸ್ವಾಜಿತ್ ಸಹಾ ಮನೆಮತಾಗಿರುವ ಢಾಕಾನಿ ಮಸ್ಲಿನ್ ಜಾಮಧಾನಿ ಸೀರೆಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದಾರೆ.

ಮುತ್ತಿನ ಆಭರಣದ ಕುಂಕುಮ ಬಾಕ್ಸ್

ಮುತ್ತಿನ ಆಭರಣದ ಕುಂಕುಮ ಬಾಕ್ಸ್

ಪುರಾನಾ ಸಾಹು ಅವರ ಕಣ್ಮನಸೆಳೆಯುವ ಪುರಾತನ ಹಿತ್ತಾಳೆಯ ಕರಕುಶಲವಸ್ತುಗಳು. ಅಲ್ಲದೆ ಅವರ ಸೌರ ಚಿತ್ರಕಲಾಕೃತಿಗಳು ಇಲ್ಲಿ ಲಭ್ಯ. ಪೌರ್ಣ ಚಂದ್ರ ಮೊಹಪಾತ್ರ ಅವರ ಬೆಳ್ಳಿಯ ಆಭರಣಗಳು ಆಧುನಿಕತೆಯ ಹಿನ್ನಲೆಯಲ್ಲಿ ಪುರಾತನ ಸೊಬಗನ್ನು ಬಿಂಬಿಸಲಿವೆ. ಪೆಂಡೆಟ್‍ಗಳು, ಬಳೆಗಳು, ಹೇರ್ ಪಿನ್‍ಗಳು ಅಲ್ಲದೆ ಮುತ್ತಿನ ಆಭರಣದ ಕುಂಕುಮ ಬಾಕ್ಸ್ ಗಳು ಇಲ್ಲಿ ಲಭ್ಯವಿವೆ.

ರಚಿತ ಸೆಣಬಿನಿಂದ ತಯಾರಿಸಲ್ಪಟ್ಟ ಚಪ್ಪಲಿಗಳು

ರಚಿತ ಸೆಣಬಿನಿಂದ ತಯಾರಿಸಲ್ಪಟ್ಟ ಚಪ್ಪಲಿಗಳು

ಪರಿಸರ ಸ್ನೇಹಿ ಕರಕುಶಲ ವಸ್ತುಗಳಾದ ಮಧುಕಾಟಿ ಗ್ರಾಸ್ ರನ್ನರ್ಸ್, ಟೇಬಲ್ ಮತ್ತು ನೆಲದ ಮೇಲೆ ಹಾಸುವಂತಹ ಮ್ಯಾಟ್‍ಗಳು ಹಾಗೂ ಗೋಡೆಯ ಮೇಲೆ ನೇತು ಹಾಕುವ ಮ್ಯಾಟ್‍ಗಳು ಇಲ್ಲಿ ಲಭ್ಯವಿವೆ. ಮಧುಬನಿ ಕಲಾ ಪ್ರಕಾರದ ವಸ್ತುಗಳು ಇಲ್ಲಿ ಲಭ್ಯವಿವೆ. ರಾಹುಲ್ ಸೇನ್‍ಗುಪ್ತ ಅವರ ರಚಿತ ಸೆಣಬಿನಿಂದ ತಯಾರಿಸಲ್ಪಟ್ಟ ಚಪ್ಪಲಿಗಳು ಇಲ್ಲಿ ಲಭ್ಯವಿವೆ.

ನ್ಯಾಯಯುತ ಬೆಲೆಯಲ್ಲಿ ದೊರಕಲಿವೆ.

ನ್ಯಾಯಯುತ ಬೆಲೆಯಲ್ಲಿ ದೊರಕಲಿವೆ.

ಇದಲ್ಲದೆ ಕುರ್ತಾ, ಸ್ಟೋಲ್ಸ್, ಶಾಲುಗಳು, ಸಲ್‍ವಾರ್ ಕಮೀಜ್ ಮತ್ತು ಉಡುಪಿನ ಬಟ್ಟೆಗಳು, ಕುಶನ್ ಕವರ್ ಗಳು ಮತ್ತು ಬೆಡ್‍ಶೀಟ್‍ಗಳನ್ನು ಈ ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಿ ಮಾರಾಟ ಮಾಡುವರು. ಈ ವಸ್ತುಗಳನ್ನು ಉತ್ವಾದಕರೆ ನೇರವಾಗಿ ಗ್ರಾಹಕರಿಗೆ ತಲುಪಿಸುತ್ತಿರುವುದರಿಂದ ವಸ್ತುಗಳು ನ್ಯಾಯಯುತ ಬೆಲೆಯಲ್ಲಿ ದೊರಕಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+