'ಆರ್‌ಟಿಇ ಅಡಿ ಬರುವ ಮಕ್ಕಳಿಂದ ಹೆಚ್ಚುವರಿ ಶುಲ್ಕ ಪಡೆಯುವಂತಿಲ್ಲ'
Recommended Video

ಬೆಂಗಳೂರು, ಮಾರ್ಚ್ 29: ಆರ್‌ಟಿಇ ಅಡಿಯಲ್ಲಿ ದಾಖಲಾದ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ಪಡೆಯುವ ಖಾಸಗಿ ಮತ್ತು ಅನುದಾನ ರಹಿತ ಶಾಲೆಗಳ ವಿರುದ್ಧ ಕಢಿಣ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ಹೇಳಿದರು.
ಆರ್‌ಟಿಇ ಕಾಯ್ದೆಯ ಕಲಂ 13ರಲ್ಲಿ ಯಾವುದೇ ಶಾಲೆಯ ಡೊನೇಷನ್, ಕ್ಯಾಪಿಟೇಷನ್ ಹೆಸರಲ್ಲಿ ಪೋಷಕರಿಂದ ಹಣ ಪಡೆಯುವಂತಿಲ್ಲ, ಖಾಸಗಿ ಮತ್ತು ಅನುದಾನರಹಿತ ಶಾಲೆಗಳು ಆರ್‌ಟಿಇ ಮಕ್ಕಳ ಪೋಷಕರಿಂದ ಪುಸ್ತಕ, ಸಮವಸ್ತ್ರ, ಕಲಿಕಾ ಸಾಮಗ್ರಿ, ಕಂಪ್ಯೂಟರ್ ಕಲಿಕೆ ಇತ್ಯಾದಿ ಕಾರ್ಯಗಳಿಗೆ ರಸೀದಿ ನೀಡದೆಸಾವಿರಾರು ರೂ ಹಣವನ್ನು ವಸೂಲಿ ಮಾಡುತ್ತಿದೆ . ಈ ಬಗ್ಗೆ ಸುಮಾರು 20ಕ್ಕೂ ಹೆಚ್ಚು ದೂರುಗಳು ಬಂದಿವೆ ಎಂದರು.

ಶೀಕ್ಷಣ ಸಂಸ್ಥೆಗಳ ನಿಯಮ 1995ರ ಕಲಂ 11(3)ರ ಪ್ರಕಾರ ಖಾಸಗಿ ಶಾಲೆಗಳು ಸಮವಸ್ತ್ರ, ಪಠ್ಯಪುಸ್ತಕಗಳನ್ನು ನಿದಿಷ್ಟ ವ್ಯಕ್ತಿ, ಸಂಸ್ಥೆಯಿಂದಲೇ ಖರೀದಿಸುವಂತೆ ಒತ್ತಡ ಹೇರುವ ಹಾಗಿಲ್ಲ, ಒತ್ತಡ ಹಾಕಿದರೆ ಆರ್‌ಟಿಇ ಅಡಿ ದಾಖಲಾಗುವ ಮಕ್ಕಳ ಪೋಷಕರು ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾ ಅವರಿಗೆ ಮನವಿ ಮಾಡಬೇಕು ಎಂದರು.












Click it and Unblock the Notifications