ಮನೆಯಲ್ಲಿ ಅಡುಗೆ ಅನಿಲ ಸೋರಿಕೆ: ಉಸಿರುಗಟ್ಟಿ ಮಗು ಸಾವು
ಬೆಂಗಳೂರು, ಮಾರ್ಚ್ 8: ಅಡುಗೆ ಅನಿಲ ಸೋರಿಕೆಯಾಗಿ ಉಸಿರುಗಟ್ಟಿ ಮಗುವೊಂದು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಗ್ಯಾಸ್ ಸೋರಿಕೆಯಾಗಿ ಉಸಿರುಗಟ್ಟಿ ಸಾವನ್ನಪ್ಪಿದ್ದು ಇನ್ನೊಂದು ಮಗು ತೀವ್ರವಾಗಿ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಎಚ್‌ಎಎಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮನೆಯಲ್ಲಿ ಪೋಷಕರಿಲ್ಲದ ವೇಳೆ ಅನಿಲ ಸೋರಿಕೆಯಾಗಿದ್ದು, ಮನೆಯ ಒಳಗಿದ್ದ ಮಗು ಮೃತಪಟ್ಟಿದೆ. ಇನ್ನೊಂದು ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಪೋಷಕರು ಮನೆಗೆ ಹಿಂದಿರುಗಿದಾಗ ಮಗು ಮೃತಪಟ್ಟಿರುವುದು ನೋಡಿ ಹೃದಯವೇ ಚೂರಾದಂತಾಗಿದೆ.












Click it and Unblock the Notifications