ಚಾಮರಾಜಪೇಟೆ ಚುನಾವಣಾ ಫಲಿತಾಂಶ 2023: ಜಮೀರ್ ಅಹ್ಮದ್‌ಗೆ 20743 ಮತಗಳ ಮುನ್ನಡೆ

ಬೆಂಗಳೂರು, ಮೇ 13: ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದೆ. ಚಾಮರಾಜಪೇಟೆಯಲ್ಲಿ ಅಂಚೆ ಮತಗಳ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹಮದ್ ಖಾನ್ 20743 ಮತಗಳ ಮುನ್ನಡೆ ಪಡೆದುಕೊಂಡಿದ್ದಾರೆ . ಬಿಜೆಪಿಯ ಭಾಸ್ಕರ್ ರಾವ್ 3890 ಮತಗಳನ್ನು ಪಡೆದುಕೊಂಡಿದ್ದು, ಜಮೀರ್ ಅಹ್ಮದ್ 24633 ಮತಗಳನ್ನು ಪಡೆದುಕೊಂಡಿದ್ದಾರೆ.

2005ರಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದ ಜಮೀರ್ ಅಹ್ಮದ್ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ. 2008ರ ಚುನಾವಣೆಯಲ್ಲಿ ಜಮೀರ್‌ ಅಹ್ಮದ್‌ ಖಾನ್‌ ಜೆಡಿಎಸ್‌ನಿಂದ ಸ್ಪರ್ಧಿಸಿ, 43,004 ಮತ ಪಡೆದು ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾದರು. 2013ರ ಚುನಾವಣೆಯಲ್ಲಿ ಕೂಡ ಜೆಡಿಎಸ್‌ನಿಂದ ಸ್ಪರ್ಧಿಸಿ ಹ್ಯಾಟ್ರಿಕ್ ಗೆಲುವು ಸಾಧಿಸುತ್ತಾರೆ. 2018ರ ಚುನಾವಣೆ ಹೊತ್ತಿಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಜೊತೆಗೆ ಮನಸ್ತಾಪ ಮಾಡಿಕೊಂಡ ಜಮೀರ್ ಅಹಮದ್, ಜೆಡಿಎಸ್‌ನ 6 ಶಾಸಕರ ಜೊತೆ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಾರೆ. 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ ಲಕ್ಷ್ಮಿನಾರಾಯಣ ವಿರುದ್ಧ 33,137 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.

Chamrajpet Assembly Election Result 2023

ಈ ಬಾರಿ ಇಲ್ಲಿ ಕಾಂಗ್ರೆಸ್‌ಗೆ ಎದುರಾಳಿಯಾಗಿ ಬಿಜೆಪಿ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರನ್ನು ಕಣಕ್ಕಿಳಿಸಿದೆ. ಜಮೀರ್ ಅಹ್ಮದ್ ಖಾನ್ ಕ್ಷೇತ್ರದ ಮೇಲೆ ಪ್ರಬಲ ಹಿಡಿತ ಹೊಂದಿದ್ದು, ಅವರ ಭದ್ರಕೋಟೆಯನ್ನು ಬಿಜೆಪಿ ಛಿದ್ರ ಮಾಡುತ್ತಾ ಎನ್ನುವ ಕುತೂಹಲ ಮೂಡಿದೆ.

ಮುಸ್ಲಿಂ ಸಮುದಾಯದ ಪ್ರಾಬಲ್ಯ

ಚಾಮರಾಜಪೇಟೆ ಕ್ಷೇತ್ರದಲ್ಲಿ ಮುಸ್ಲಿಮ್ ಸಮುದಾಯ ಪ್ರಾಬಲ್ಯ ಹೊಂದಿದೆ. ಇಲ್ಲಿ 80 ಸಾವಿರ ಮುಸ್ಲಿಂ ಮತಗಳಿವೆ. ಉಳಿದತೆ ಎಸ್‌ಎಸ್, ಎಸ್‌ಟಿ ಸಮುದಾಯದ 65 ಸಾವಿರ ಮತದಾರರು ಇದ್ದಾರೆ. ಒಕ್ಕಲಿಗ 10 ಸಾವಿರ, ಕುರುಬರು 9500, ಕ್ರೈಸ್ತರು 12 ಸಾವಿರ, ಬ್ರಾಹ್ಮಣರು 5 ರಿಂದ 8 ಸಾವಿರ, ತಮಿಳು ಭಾಷಿಕರು 26 ಸಾವಿರ, ಇತರರು 35000 ಮತದಾರರು ಇದ್ದಾರೆ. ಮುಸ್ಲಿಮ್ ಮತ್ತು ತಮಿಳರು ಯಾರ ಪರವಾಗಿ ಇರುತ್ತಾರೋ ಅವರ ಗೆಲುವು ಸುಲಭವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+