36, 13, 100+, ದರ್ಶನ್ ಬಂಧನಕ್ಕೂ ಇದ್ದಕೆ ಏನು ಸಂಬಂಧ?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನರನ್ನು ಬಂಧಿಸಲಾಗಿದೆ. ಮೈಸೂರಿನಲ್ಲಿ ದರ್ಶನ್‌ರನ್ನು ಬಂಧಿಸಿರುವ ಸುದ್ದಿ ಎಲ್ಲರಿಗೂ ತಿಳಿದೆ. ಆದರೆ ಇದಕ್ಕೂ ಮೊದಲು ನಡೆದ ಕಾರ್ಯಾಚರಣೆ ಏನು?, ಪೊಲೀಸರು ಹೆಣೆದು ಕೊಂಡಿದ್ದ ಜಾಡು ಹೇಗಿತ್ತು?, ಈ ಎಲ್ಲ ಇಂಟ್ರಸ್ಟಿಂಗ್ ವಿಷಯಗಳ ಬಗ್ಗೆ ಈಗ ಕೆಲವೊಂದು ಮಾಹಿತಿಗಳು ಹೊರಕ್ಕೆ ಬರುತ್ತಿವೆ.
ದರ್ಶನ್ ಒಬ್ಬ ಚಿತ್ರ ನಟ. ಅವರನ್ನು ಹಿಡಿಯಲು ಪೊಲೀಸರು ಸಹ ಇಂತಹದ್ದೇ ಒಂದು ಸ್ಕ್ರೀಪ್ಟ್ ತಯಾರಿಸಿದ್ದಾರೆ. ಅಬ್ಬಾ ಈ ಸ್ಕ್ರಿಪ್ಟ್ ತರಾತುರಿಯಲ್ಲಿ ಸಿದ್ಧವಾಗಿದ್ದು ಅಲ್ಲ. ಟೈಮ್ ತೆಗೆದುಕೊಂಡು ಹೆಣೆಯಲಾಗಿದೆ. ಈ ಸ್ಕ್ರಿಪ್ಟ್ ಒಂದು ಹಂತಕ್ಕೆ ಬಂದ ಮೇಲೆ, ಶೂಟಿಂಗ್ ನಡೆಸಲು ಸಿದ್ಧವಾಗಿದೆ. ಈ ಕಾರ್ಯಚರಣೆ ಸಹ ಯಾವುದೇ ಫಿಲ್ಮ್ ಶೂಟಿಂಗ್‌ಗೆ ಏನು ಕಮ್ಮಿ ಇರಲಿಲ್ಲ ಎಂಬ ಮಾಹಿತಿಗಳು ತಿಳಿದು ಬಂದಿದೆ.

ಶವ ಪತ್ತೆ
ರೇಣುಕಾಸ್ವಾಮಿ ಶವ ಸಿಕ್ಕಾಗಿನಿಂದ ಪ್ರಕರಣದಲ್ಲಿ ಏನೆಲ್ಲಾ ಆಗಿದೆ ಎಂಬುದು ಎಲ್ಲರಿಗೂ ತಿಳಿದೇ ಇದೆ. ಆದರೆ ಇದಕ್ಕೂ ಮೊದಲು ನಡೆದಿದ್ದು ಏನು ಎಂಬುದರ ಬಗ್ಗೆ ಈಗ ಕ್ಯೂರಿಯಾಸಿಟಿ ಹೆಚ್ಚಾಗಿದೆ. ಪೊಲೀಸರು ಈ ಕೇಸ್‌ನಲ್ಲಿ ಹೇಗೆ ಕೆಲಸ ಮಾಡಿದರು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಈಗ ಈ ಬಗ್ಗೆ ಕೆಲವು ಸುದ್ದಿಗಳು ತಿಳಿದು ಬಂದಿವೆ.
ಭರ್ಜರಿ ಕಾರ್ಯಾಚರಣೆ
ನಟ ದರ್ಶನರನ್ನು ಬಂಧಿಸಲು ಸುಮಾರು 36 ಗಂಟೆಗಳ ಕಾರ್ಯಚರಣೆಯನ್ನು ಪೊಲೀಸರು ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ರೇಣುಕಾಸ್ವಾಮಿ ಶವ ಸಿಕ್ಕಾಗಿನಿಂದಲೂ ಕಾರ್ಯಾಚರಣೆ ಆರಂಭವಾಗಿದೆ. ಈ ಕಾರ್ಯಚಾರಣೆಯ ಬಗ್ಗೆ ಎಲ್ಲಿಯೂ ಮಾಹಿತಿ ಸೋರಿಕೆ ಆಗದಂತೆ ನೋಡಿಕೊಳ್ಳಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 9ರಂದು ನಾಲ್ವರು ಆರೋಪಿಗಳು ಸರೆಂಡರ್ ಆಗಿದ್ದರು. ಇವರು ಸರೆಂಡರ್ ಆಗಿದ್ದೇ ಅನುಮಾನ ಹುಟ್ಟಿಸಿತ್ತು. ಪೊಲೀಸರು ಕೇಳುತ್ತಿದ್ದ ಖಡಕ್ ಪ್ರಶ್ನೆಗಳು ಆರೋಪಿಗಳು ಉತ್ತರಿಸಲು ಹೆಣಗಾಡಿದ್ದಾನೆ. ಇದೇ ಅನುಮಾನ ಮೂಡಲು ಕಾರಣವಾಗಿ ವಿಚಾರಣೆಯನ್ನು ನಡೆಸಿದಾಗ ದರ್ಶನ್ ಹೆಸರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಹೆಸರು ಬಯಲು
ಸರೆಂಡರ್ ಆದವರ ಬಾಯಲ್ಲಿ ದರ್ಶನ್ ಹೆಸರು ಬರುತ್ತಿದ್ದಂತೆ, ಉನ್ನತ ಮಟ್ಟದ ಅಧಿಕಾರಿಗಳು, ಈ ಕೇಸ್ ಕಾರ್ಯಚಾರಣೆಯ ತೀವ್ರ ಗೊಳಿಸಿದ್ದಾರೆ. ಅಲ್ಲದೆ ಇವರು ಹೇಳುತ್ತಿರುವುದು ನಿಜಾನಾ ಸುಳ್ಳ ಎಂದು ತಿಳಿಯಲು, ಕ್ರಾಸ್ ಚೆಕ್ ಸಹ ಮಾಡಿದ್ದಾರೆ. ನಾಲ್ವರ ಮೊಬೈಲ್ ವಶಕ್ಕೆ ಪಡೆದು, ಕಾಲ್ ಡಿಟೇಲ್ಸ್ ಪರಿಶೀಲಿಸಿದ್ದಾರೆ. ಆಗಲೇ ವಾಸನೆ ಘಮ್ಮ ಎಂದು ಬಂದಿದೆ. ತಡ ಮಾಡದೆ ಪೊಲೀಸ ಅಧಿಕಾರಿಗಳು ಕಾರ್ಯಾಚರಣೆಯ ಬ್ಲ್ಯೂ ಪ್ರಿಂಟ್ ಸಿದ್ಧ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ದರ್ಶನ್ ಬಂಧಿಸಲು ಪೊಲೀಸರು 13 ಅಧಿಕಾರಿಗಳ ತಂಡದಿಂದ 36 ಗಂಟೆ ಕಾರ್ಯಚರಣೆ ನಡೆಸಿದ್ದಾರೆ. ಇನ್ನು ಠಾಣೆಯಲ್ಲಿ 100ಕ್ಕೆ ಹೆಚ್ಚು ಜನ ಪೊಲೀಸರಿದ್ದರೂ ಗುಟ್ಟು ರಟ್ಟಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications