Lok Sabha Election 2024: ಪ್ರಧಾನಿ ಮೋದಿ ಗೆಲುವಿಗೆ ಹೊಸ ತಂತ್ರ, 2014ರಿಂದ 2024ರ ತನಕ ವೆರೈಟಿ ವೆರೈಟಿ ಮಂತ್ರ!

2024ರ ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನ ಟಾರ್ಗೆಟ್ ಮಾಡಿರುವ ಬಿಜೆಪಿ, ದಕ್ಷಿಣ ಭಾರತದಲ್ಲಿ ತನ್ನ ಬಾವುಟ ನೆಟ್ಟು ಬಲ ಪ್ರದರ್ಶನ ಮಾಡಲು ಸಿದ್ಧತೆ ನಡೆಸಿದೆ. ಹೀಗಿದ್ದಾಗ ದೇಶಾದ್ಯಂತ ಹೊಸ ಸ್ಟ್ರಾಟಜಿ ಶುರುವಾಗಿದೆ. 2014 ರಲ್ಲಿ ಮೊದಲನೆ ಬಾರಿಗೆ, ಪ್ರಧಾನಿ ಮೋದಿ ಅವರು ಪ್ರಧಾನಿ ಆಗಿ ಆಯ್ಕೆ ಆಗುವಾಗಿನಿಂದ ಇಲ್ಲಿಯವರೆಗೂ ಹೊಸ ಹೊಸ ರಣತಂತ್ರಗಳನ್ನ ಜಾರಿಗೆ ತರಲಾಗಿದೆ. ಆ ಬಗ್ಗೆ ಸಂಪೂರ್ಣ ವಿವರ ತಿಳಿಯೋಣ ಬನ್ನಿ.

ಕಣ್ಣು ಮುಚ್ಚಿ ಕಣ್ಣು ಬಿಡುವುದರ ಒಳಗಾಗಿ, 2024ರ ಲೋಕಸಭೆ ಚುನಾವಣೆಯು ಬಂದೇ ಬಿಡುತ್ತೆ. ಯಾಕಂದ್ರೆ 2024ರ ಲೋಕಸಭೆ ಚುನಾವಣೆಗೆ ಕಡಿಮೆ ಸಮಯ ಇದೆ. ಹೀಗಾಗಿಯೇ ದೇಶದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಪೈಪೋಟಿ ಶುರು ಮಾಡಿವೆ. ಎಲ್ಲ ರೀತಿ ತಯಾರಿ ನಡೆಯುತ್ತಿರುವ ಸಮಯದಲ್ಲೇ, ಹೊಸ ರಣತಂತ್ರ ಪ್ರಯೋಗ ಮಾಡುವ ಮೂಲಕ ವಿರೋಧ ಪಕ್ಷಗಳಿಗು ಬಿಜೆಪಿ ನೇರವಾಗಿ ಸವಾಲು ಎಸೆದಿದೆ. ಹಾಗಾದರೆ ಇದೀಗ ಬಿಜೆಪಿ ಪ್ರಯೋಗ ಮಾಡಿರುವ ಹೊಸ ಅಸ್ತ್ರ ಯಾವುದು ಗೊತ್ತೆ? ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

Chaiwala To Modi Ka Pariwar This Is How BJP Did Big Strategy Against The Opposition Parties

ಚಾಯ್ ವಾಲಾ ಟು ಪರಿವಾರ್!

ಅದು 2014 ಯಾರೂ ಅಂದುಕೊಳ್ಳದ ಘಟನೆಯೊಂದು ಸಂಭವಿಸಿತ್ತು ಪ್ರಧಾನಿ ಮೋದಿಯವರ ಭರ್ಜರಿ ಗೆಲುವು ದೇಶದಲ್ಲಿ ಬಿಜೆಪಿಗೆ ಅಧಿಕಾರ ತಂದುಕೊಟ್ಟಿತ್ತು. ಆಗ ಸಖತ್ ಸದ್ದು ಮಾಡಿದ್ದ ಪದ ಅಂದ್ರೆ 'ಚಾಯ್ ವಾಲಾ'. ಹೀಗೆ 'ಚಾಯ್ ವಾಲಾ' ಎಂಬ ವಿರೋಧ ಪಕ್ಷಗಳ ಮಾತನ್ನೇ ಅಸ್ತ್ರ ಮಾಡಿಕೊಂಡಿದ್ದರು ಬಿಜೆಪಿ ನಾಯಕರು. ಈ ಮೂಲಕ ಮೊದಲ ಬಾರಿಗೆ ಬಿಜೆಪಿ ಕೇಂದ್ರ ಸರ್ಕಾರ ರಚಿಸುವಲ್ಲಿ, ಅತಿಹೆಚ್ಚು ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುವಲ್ಲಿ ಈ ಅಸ್ತ್ರ ಸಹಾಯವನ್ನ ಮಾಡಿತ್ತು. ಆ ನಂತರ 2019 ರಲ್ಲಿ ಯಾವ ತಂತ್ರ ಬಳಸಿದ್ದರು ಗೊತ್ತೆ?

2019ರಲ್ಲಿ 'ನಾನು ಚೌಕಿದಾರ' ಹವಾ!

ಹೀಗೆ 2014 ರಲ್ಲಿ ಗೆಲುವು ಕಂಡ ನಂತರ 2019ರ ಲೋಕಸಭೆ ಚುನಾವಣೆಯಲ್ಲಿ ತನ್ನ ಗೆಲುವಿಗೆ ಬಿಜೆಪಿ ಆಯ್ಕೆ ಮಾಡಿಕೊಂಡ ಪದ 'ನಾನು ಚೌಕಿದಾರ'. ಹೀಗೆ ಲೋಕಸಭೆಯಲ್ಲಿ ಮತದಾರರ ಗಮನ ಸೆಳೆಯುವಲ್ಲಿ ಬಿಜೆಪಿ ಯಶಸ್ವಿ ಕೂಡ ಆಗಿತ್ತು. ಈ ಮೂಲಕ ಮತ್ತೊಮ್ಮೆ, ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಿತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ. ಇದೀಗ 2024 ರಲ್ಲಿ ಹೊಸ, ರಣತಂತ್ರವನ್ನು ರೂಪಿಸಿರುವ ಬಿಜೆಪಿ 'ಮೋದಿ ಕಾ ಪರಿವಾರ್' ಎಂಬ ಹೊಸ ಅಸ್ತ್ರ ಪ್ರಯೋಗ ಮಾಡಿದೆ.

ಒಟ್ನಲ್ಲಿ ಈ ಬಾರಿ ಅದ್ಭುತವಾದ ಗೆಲುವು ಸಾಧಿಸಲು ಬಿಜೆಪಿ ಭರ್ಜರಿ ರಣತಂತ್ರ ರೂಪಿಸುತ್ತಿದೆ. ಪ್ರತಿಬಾರಿ ಟ್ರೆಂಡ್ ಆಗುವ ಪದದ ರೀತಿಯೇ ಈಗ 'ಮೋದಿ ಕಾ ಪರಿವಾರ್' ಪದದ ಹವಾ ಕೂಡ ಬಲು ಜೋರಾಗಿದೆ. ಇನ್ನೇನು ಕೆಲ ದಿನದಲ್ಲಿ ಲೋಕಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗಲಿದೆ. ಹೀಗಾಗಿ ಇಡೀ ದೇಶದ ಗಮನ ಈಗ ಶಕ್ತಿ ಕೇಂದ್ರ ದೆಹಲಿ ಮೇಲೆ ನೆಟ್ಟಿದೆ. ಅಲ್ಲದೆ ಅತ್ತ ವಿರೋಧ ಪಕ್ಷಗಳಿಗೆ ಇದು ಅಗ್ನಿ ಪರೀಕ್ಷೆಯಾಗಿದ್ದರೆ, ಆಡಳಿತ ಪಕ್ಷ ಬಿಜೆಪಿಗೆ ಇದು ಮತ್ತೊಂದು ಸುಲಭದ ಚುನಾವಣೆ ಆಗುವ ಎಲ್ಲಾ ಲಕ್ಷಣ ಗೋಚರಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+