Get Updates
Get notified of breaking news, exclusive insights, and must-see stories!

ಮಹಿಳಾ ದಿನಾಚರಣೆ ದಿನ ಮೋದಿ ಜತೆ ಚಹಾ ಚರ್ಚೆ

ಬೆಂಗಳೂರು, ಮಾ.6: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾ.8 ರಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರೊಂದಿಗೆ ಚಹಾದೊಂದಿಗೆ ಚರ್ಚೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಸಹ ವಕ್ತಾರೆ ನಟಿ ಮಾಳವಿಕಾ ಅವಿನಾಶ್ ಅವರು ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಳವಿಕಾ ಅವರು, ಪ್ರಶ್ನಿಸಿ, ಹಂಚಿಕೊಳ್ಳಿ, ಸಲಹೆ ನೀಡಿ ಎಂಬ ಮೂರು ಅಂಶಗಳೊಂದಿಗೆ ಈ ಚರ್ಚೆ ನಡೆಯಲಿದೆ. ಇದರಲ್ಲಿ ಮಹಿಳೆಯರು, ಮಹಿಳಾ ಸಾಧಕಿಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಮಹಿಳಾ ದಿನಾಚರಣೆ ಕರ್ನಾಟಕದಲ್ಲಿ 110 ಪ್ರಸಾರ ಕೇಂದ್ರ ಸೇರಿದಂತೆ ದೇಶದಾದ್ಯಂತ 1500 ಕಡೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಮಾರು 15 ದೇಶಗಳಲ್ಲಿ 30 ಕಡೆ ಚರ್ಚಾ ಕಾರ್ಯಕ್ರಮ ನಡೆಯಲಿದೆ.

ರಾಜ್ಯದಲ್ಲಿ ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ನೇರ ಪ್ರಸಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರಲ್ಲಿ ಮೋದಿ ಅವರು ಗುಜರಾತಿನಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಚಿತ್ರಣವು ಕೂಡಾ ಪ್ರದರ್ಶನವಾಗಲಿದೆ ಮತ್ತು ಮಹಿಳೆಯರು ಕೇಳುವಂಥ ಕೆಲವು ಪ್ರಶ್ನೆಗಳಿಗೆ ಮೋದಿ ಅವರು ನೇರವಾಗಿ ಉತ್ತರಿಸಲಿದ್ದಾರೆ.

ಮಹಿಳಾ ಸಬಲೀಕರಣ, ಮಹಿಳೆಯರ ಸುರಕ್ಷತೆ, ಯುಪಿಎ ಸರ್ಕಾರದ ವೈಫಲ್ಯಗಳು, ಬೆಲೆ ಏರಿಕೆ ನೀತಿ, ಬೆಂಗಳೂರಿನ ಎಟಿಎಂ ಕೇಂದ್ರದಲ್ಲಿ ಮಹಿಳಾ ಅಧಿಕಾರಿ ಮೇಲೆ ಹಲ್ಲೆ ಮುಂತಾದ ವಿಷಯಗಳು ಚರ್ಚೆ ನಡೆಯಲಿವೆ.

ಕರ್ನಾಟಕದಲ್ಲೂ ಚಹಾ ಚರ್ಚೆ ನೇರ ಪ್ರಸಾರ

ಕರ್ನಾಟಕದಲ್ಲೂ ಚಹಾ ಚರ್ಚೆ ನೇರ ಪ್ರಸಾರ

ರಾಜ್ಯದಲ್ಲಿ ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ನೇರ ಪ್ರಸಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಮೋದಿ ಅವರು ನೇರವಾಗಿ ಉತ್ತರಿಸಲಿದ್ದಾರೆ

ಮೋದಿ ಅವರು ನೇರವಾಗಿ ಉತ್ತರಿಸಲಿದ್ದಾರೆ

ಮೋದಿ ಅವರು ಗುಜರಾತಿನಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಚಿತ್ರಣವು ಕೂಡಾ ಪ್ರದರ್ಶನವಾಗಲಿದೆ ಮತ್ತು ಮಹಿಳೆಯರು ಕೇಳುವಂಥ ಕೆಲವು ಪ್ರಶ್ನೆಗಳಿಗೆ ಮೋದಿ ಅವರು ನೇರವಾಗಿ ಉತ್ತರಿಸಲಿದ್ದಾರೆ.

ಮಹಿಳಾ ಸಬಲೀಕರಣ, ಮಹಿಳೆಯರ ಸುರಕ್ಷತೆ ಚರ್ಚೆ

ಮಹಿಳಾ ಸಬಲೀಕರಣ, ಮಹಿಳೆಯರ ಸುರಕ್ಷತೆ ಚರ್ಚೆ

ಮಹಿಳಾ ಸಬಲೀಕರಣ, ಮಹಿಳೆಯರ ಸುರಕ್ಷತೆ, ಯುಪಿಎ ಸರ್ಕಾರದ ವೈಫಲ್ಯಗಳು, ಬೆಲೆ ಏರಿಕೆ ನೀತಿ, ಬೆಂಗಳೂರಿನ ಎಟಿಎಂ ಕೇಂದ್ರದಲ್ಲಿ ಮಹಿಳಾ ಅಧಿಕಾರಿ ಮೇಲೆ ಹಲ್ಲೆ ಮುಂತಾದ ವಿಷಯಗಳು ಚರ್ಚೆ ನಡೆಯಲಿವೆ.

ಆರು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ಕೊಡಬೇಕು

ಆರು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ಕೊಡಬೇಕು

ರಾಜ್ಯದಲ್ಲಿ ಆರು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ಕೊಡಬೇಕು ಎಂಬ ಒತ್ತಾಯವನ್ನು ನಾಯಕರ ಮುಂದೆ ಇಡಲಾಗಿದೆ. ನಮ್ಮ ಬೇಡಿಕೆಯನು ನಾಯಕರು ಈಡೇರಿಸುತ್ತಾರೆ ಎಂಬ ಭರವಸೆ ಇದೆ. ಈಗಾಗಲೇ ಮಹಿಳಾ ಮತದಾರರಲ್ಲಿ ಜಾಗೃತಿ ಮೂಡಿಸಲು ಮನೆ ಮನೆಗೆ ಬಿಜೆಪಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ

 'ಹಂಚಿಕೊಳ್ಳಿ, ಪ್ರಶ್ನಿಸಿ ಹಾಗೂ ಸಲಹೆ' ಚಹಾ ಚರ್ಚಾ

'ಹಂಚಿಕೊಳ್ಳಿ, ಪ್ರಶ್ನಿಸಿ ಹಾಗೂ ಸಲಹೆ' ಚಹಾ ಚರ್ಚಾ

ಡಿಟಿಎಚ್, ಉಪಗ್ರಹ, ಇಂಟರ್ನೆಟ್, ಮೊಬೈಲ್ ಫೋನ್, ಸಾಮಾಜಿಕ ಮಾಧ್ಯಮಗಳ ಮೂಲಕ 'ಹಂಚಿಕೊಳ್ಳಿ, ಪ್ರಶ್ನಿಸಿ ಹಾಗೂ ಸಲಹೆ' ಚಹಾದೊಂದಿಗೆ ಚರ್ಚಾ ಕಾರ್ಯಕ್ರಮಕ್ಕೆ ಬಳಕೆಯಾಗಲಿದೆ.

ಮೋದಿ ಕಾರ್ಯಕ್ರಮ ವಿವರ ನೀಡಿದ ಬಿಜೆಪಿ

ಮೋದಿ ಕಾರ್ಯಕ್ರಮ ವಿವರ ನೀಡಿದ ಬಿಜೆಪಿ

ಮೋದಿ ಕಾರ್ಯಕ್ರಮ ವಿವರ ನೀಡಿದ ಬಿಜೆಪಿ ಸಹ ವಕ್ತಾರೆ ಮಾಳವಿಕಾ ಅವಿನಾಶ್.

ಈ ಚಿತ್ರ ಸರಣಿಯಲ್ಲಿರುವ ಚಿತ್ರಗಳು ಹುಬ್ಬಳ್ಳಿ-ಧಾರವಾಡ ಮುಂತಾದೆಡೆ ಮೋದಿ ಚಹಾ ಅಂಗಡಿ ಯಶಸ್ವಿಯಾಗಿ ಅಭಿಯಾನ ಕೈಗೊಂಡಿದ್ದಾಗಿದೆ. ಚಿತ್ರಕೃಪೆ: @MALAVIKAAVINASH

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+